ಮುಂದುವರಿದ ಧರಣಿ: 4000 ಪೌರ ಕಾರ್ಮಿಕರ ನೇಮಕಕ್ಕೆ ಬಿಬಿಎಂಪಿ ನಿರ್ಧಾರ

ಬೆಂಗಳೂರು ಜು.4: ಕೆಲಸ ಖಾಯಮಾತಿ, ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಪೌರ ಕಾರ್ಮಿಕರ ಅನಿರ್ದಿಷ್ಟಾವಧಿ ಪ್ರತಿಭಟನೆ ಸೊಮವಾರವು ಮುಂದುವರಿದಿದೆ. ಪೌರ ಕಾರ್ಮಿಕರು ಪಟ್ಟು ಸಡಿಲಿಸದ ನಗರದಲ್ಲಿ ತ್ಯಾಜ್ಯ ಉಲ್ಬಣವಾಗುತ್ತಿದೆ. ಇತ್ತ ಬಿಬಿಎಂಪಿ 4,000ಪೌರ ಕಾರ್ಮಿಕರನ್ನು ಅಲ್ಪಾವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಮುಂದಾಗಿದೆ.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸುಮಾರು 16 ಸಾವಿರ ಪೌರ ಕಾರ್ಮಿಕರು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ತ್ಯಾಜ್ಯ ವಿಲೇವಾರಿ, ಸಂಗ್ರಹಣೆ ಸಮಸ್ಯೆ ತಲೆದೂರುವ ಸಾಧ್ಯತೆ ಇದ್ದರೂ, ಬಿಬಿಎಂಪಿ ಅಧಿಕಾರಿಗಳು ಅಷ್ಟಾಗಿ ತ್ಯಾಜ್ಯ ಸಮಸ್ಯೆ ಆಗಿಲ್ಲ ಎನ್ನುತ್ತಿದ್ದಾರೆ.

ಇತ್ತೀಚೆಗೆ ನಡೆದ ಸಚಿವ ಸಂಪುಟದಲ್ಲಿ ಸಂಕಷ್ಟ ಭತ್ಯೆ ಎಂದು ಸರ್ಕಾರ ಎರಡು ಸಾವಿರ ಹಣ ಹೆಚ್ಚಳ ಮಾಡಿ, ಖಾಯಂ ನೇಮಕಾತಿಗೆ ಭರವಸೆ ನೀಡಿದೆ. ಈ ಭರವಸೆಗಳು ಬೇಡ ಮುಖ್ಯಮಂತ್ರಿಗಳೇ ಬಂದು ಕೆಲಸ ಖಾಯಂ ಮಾಡುವವರೆಗೂ ಮುಷ್ಕರ ಮುಂದುವರಿಸುವುದಾಗಿ ಸಾವಿರಾರು ಪ್ರತಿಭಟನಾಕರರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಮನೆಯ ಕಸ ಸಂಗ್ರಹಕ್ಕೆ ಸಮಸ್ಯೆ ಆಗಿಲ್ಲ

ಮನೆಯ ಕಸ ಸಂಗ್ರಹಕ್ಕೆ ಸಮಸ್ಯೆ ಆಗಿಲ್ಲ

ಪೌರ ಕಾರ್ಮಿಕರ ಪ್ರತಿಭಟನೆ ಕುರಿತು ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಘನತ್ಯಾಜ್ಯ ನಿರ್ವಹಣಾ ವಿಭಾಗದ ಬಿಬಿಎಂಪಿ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್ ಅವರು, ಪ್ರತಿಭಟನೆಯಿಂದ ಸ್ವಲ್ಪ ಮಟ್ಟಿಗೆ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗಿದೆ. ಬೀದಿ ಗುಡಿಸುವ ಕೆಲಸದಲ್ಲಿ ತುಸು ವ್ಯತ್ಯಯವಾಗಿದೆ. ಮನೆ ಮನೆ ಕಸ ಸಂಗ್ರಹಿಸುವಲ್ಲಿ ಹಾಗೂ ಮಾರುಕಟ್ಟೆಗಳಲ್ಲಿ ಕಸದ ಸಮಸ್ಯೆ ಉಂಟಾಗಿಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿನ 16 ಸಾವಿರ ಪೌರ ಕಾರ್ಮಿಕರ ಪೈಕಿ ಕೇವಲ 12 ಸಾವಿರ ಮಂದಿ ಮಾತ್ರ ಕೆಲಸಕ್ಕೆ ಬರುತ್ತಿದ್ದರು. ಅವರೆಲ್ಲ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದರು.

4,000ಪೌರ ಕಾರ್ಮಿಕರ ನೇಮಕಕ್ಕೆ ಸಜ್ಜಾದ ಬಿಬಿಎಂಪಿ

4,000ಪೌರ ಕಾರ್ಮಿಕರ ನೇಮಕಕ್ಕೆ ಸಜ್ಜಾದ ಬಿಬಿಎಂಪಿ

ಪೌರ ಕಾರ್ಮಿಕರ ಮುಷ್ಕರದಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗಿದೆ. ರಸ್ತೆ ಗುಡಿಸುವಲ್ಲಿ ಆದ ಕಸದ ಸಮಸ್ಯೆಯನ್ನು ಸರಿಪಡಿಸಲಿದ್ದೇವೆ. ಈ ಸಂಬಂಧ ಅಲ್ಪಾವಧಿಗೆ ನಾಲ್ಕು ಸಾವಿರ ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಿದ್ದೇವೆ. ಆ ಪ್ರಕ್ರಿಯೆ ಸೋಮವಾರದಿಂದಲೇ ಆರಂಭವಾಗಿದೆ. ಈ ನಾಲ್ಕು ಸಾವಿರ ಪೌರ ಕಾರ್ಮಿಕರು 15 ದಿನಗಳವರೆಗೆ ಕೆಲಸ ಮಾಡಿ ನಂತರ ಕಾರ್ಮಿಕ ಇಲಾಖೆಯ ನಿಯಮಗಳನ್ವಯ ಸಂಬಳ ಪಡೆಯಲಿದ್ದಾರೆ.

ಸ್ವೀಪಿಂಗ್ ಮಷಿನ್ 2 ಬಾರಿ ಬಳಕೆ

ಸ್ವೀಪಿಂಗ್ ಮಷಿನ್ 2 ಬಾರಿ ಬಳಕೆ

ನಗರದಲ್ಲಿ ಸದ್ಯ ತಾತ್ಕಲಿಕವಾಗಿ ಎದುರಾಗಿರುವ ನಗರದ ಸ್ವಚ್ಛತಾ ಸಮಸ್ಯೆಗಾಗಿ ಖಾಸಗಿ ಯಂತ್ರೋಪಕರಣ ಬಳಸಿಕೊಳ್ಳಲಿದ್ದೇವೆ. ಅಲ್ಲದೇ ಈ ಹಿಂದೆ ನಿತ್ಯ ಒಂದು ಭಾರಿ ಉಪಯೋಗಿಸುತ್ತಿದ್ದ ಬಿಬಿಎಂಪಿ ವ್ಯಾಪ್ತಿಯಲ್ಲಿನ ಸ್ವಚ್ಛತಾ (ಸ್ವೀಪಿಂಗ್ ಮಷಿನ್) ಯಂತ್ರಗಳನ್ನು ಈಗ ಎರಡು ಬಾರಿ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಆ ಮೂಲಕ ಸಾರ್ವಜನಿಕ ವ್ಯತ್ಯಯ ಸರಿಪಡಿಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

3ದಿನದ ಶಾರ್ಟ್ ಟರ್ಮ್ ಟೆಂಡರ್ ಆಹ್ವಾನ

3ದಿನದ ಶಾರ್ಟ್ ಟರ್ಮ್ ಟೆಂಡರ್ ಆಹ್ವಾನ

ಪಾಲಿಕೆ ವ್ಯಾಪ್ತಿಯಲ್ಲಿ ಕಸ ಗುಡಿಸುವ 72 ಕಸ ಗುಡಿಸುವ ಯಂತ್ರಗಳಿವೆ. ಪ್ರತಿಭಟೆಯಿಂದ ಕಸದ ಸಮಸ್ಯೆ ಎದುರಾಗದಂತೆ ತಡೆಯಲು ಖಾಸಗಿಗೆ ಸೇರಿದ ಯಂತ್ರೋಪಕರಣ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ಮೂರು ದಿನದ ಶಾರ್ಟ್ ಟೈಮ್ ಟೆಂಡರ್ ಕರೆಯಲಿದ್ದೇವೆ. ಸದ್ಯಕ್ಕೆ ಸ್ವೀಪಿಂಗ್ ಯಂತ್ರಗಳನ್ನು ದಿನಕ್ಕೆ 2 ಹೊತ್ತು ಉಪಯೋಗಿಸಲಾಗ್ತಿದೆ. ಈ ಮೊದಲು ಸಂಚಾರ ಸಮಸ್ಯೆ ಆಗುತ್ತದೆ ಎಂದು ಒಂದೇ ಬಾರಿ ಬಳಕೆ ಮಾಡಿಕೊಳ್ಳಲಾಗುತ್ತಿತ್ತು.

ಈ ಯಂತ್ರಗಳನ್ನು ಎಲ್ಲ ರಸ್ತೆಗಳಲ್ಲಿ ಕಸ ಸಂಗ್ರಹಣೆಗಾಗಿ, ಸ್ವಚ್ಛತೆಗಾಗಿ ಬಳಸಲು ಆಗುವುದಿಲ್ಲ. ಹೀಗಾಗಿ ಮೂರು ದಿನಕ್ಕೆ ಅನ್ವಯವಾಗುವಂತೆ ಖಾಸಗಿ ಯಂತ್ರೋಪಕರಣ ಬಳಕೆಗಾಗಿ ಟೆಂಡರ್ ಕರೆಯಲಿದ್ದೇವೆ. ಪರಿಸ್ಥಿತಿ ನೋಡಿಕೊಂಡು ಟೆಂಡರ್ ಕುರಿತು ನಿರ್ಧರಿಸಲಿದ್ದೇವೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+