ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ಆರ್ ಸೋಗಿನಲ್ಲಿ ಬೆಂಗಳೂರಿನಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ

ಮಂಗಳೂರು ಮೂಲದ ಯುವತಿಗೆ ಕೆಲಸಕ್ಕೆ ಅನುಕೂಲ ಮಾಡಿಕೊಡುತ್ತೇನೆ. ತಾನು ಎಚ್ ಆರ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿ ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮೇ 25: ಮಂಗಳೂರು ಮೂಲದ 25 ವರ್ಷದ ಯುವತಿಗೆ ಬೆಂಗಳೂರಿನಲ್ಲಿ ಎಚ್ ಆರ್ (ಮಾನವ ಸಂಪನ್ಮೂಲ) ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯಕ್ಕೆ ಎಸಗಿದ ಬಗ್ಗೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೇರಿ ಬಹುರಾಷ್ಟ್ರೀಯ ಬ್ಯಾಂಕ್ ವೊಂದರಲ್ಲಿ ಗ್ರಾಹಕ ಸೇವಾ ಅಧಿಕಾರಿ (ಕಸ್ಟಮರ್ ಸರ್ವೀಸ್ ಎಕ್ಸ್ ಕ್ಯುಟಿವ್) ಹುದ್ದೆಗಾಗಿ ಅಂತಿಮ ಸುತ್ತಿನ ಸಂದರ್ಶನ ಮುಗಿಸಿ, ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಆ ವೇಳೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಆಕೆಗೆ ಕರೆ ಬಂದಿದ್ದು, ತುಂಬ ಮುಖ್ಯವಾದ ವಿಚಾರ ಇದೆ. ಹೊರಗೆ ಬನ್ನಿ ಮಾತನಾಡಬೇಕು ಎಂದು ವ್ಯಕ್ತಿಯೊಬ್ಬ ಹೇಳಿದ್ದಾನೆ.[ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಆಸೆಪಟ್ಟ ಟೆಕ್ಕಿಗೆ ಸಂಕಷ್ಟ!]

Posing as HR, man sexually abuses job aspirant at MNC

ಅದರಂತೆ ಆಕೆ ಆಚೆಗೆ ಬಂದಾಗ, ತನ್ನನ್ನು ರೋಹನ್, ಕಂಪೆನಿಯ ಎಚ್ ಆರ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಸಂದರ್ಶನದಲ್ಲಿ ನೀವು ಆಯ್ಕೆಯಾಗಿಲ್ಲ. ನನ್ನ ಜತೆಗೆ ಮನೆಗೆ ಬಂದರೆ, ಸಹಾಯ ಮಾಡ್ತೀನಿ ಎಂದು ಹೇಳಿದ್ದಾನೆ. ಅದಕ್ಕೆ ಆಕೆ ಒಪ್ಪದಿದ್ದಾಗ ಕಾರಿನೊಳಗೆ ಎಳೆದೊಯ್ಯಲು ಯತ್ನಿಸಿದ್ದಾನೆ. ಆದರೆ ಆತನಿಂದ ತಪ್ಪಿಸಿಕೊಂಡಿದ್ದಾರೆ.

ಈ ಬಗ್ಗೆ ತಕ್ಷಣವೇ ಕಂಪೆನಿಯವರಿಗೆ ಮಾಹಿತಿ ನೀಡಿದ ಮೇರಿ, ಆತನು ತನ್ನ ಜತೆ ನಡೆದುಕೊಂಡಿದ್ದನ್ನು ತಿಳಿಸಿದ್ದಾರೆ. ಆ ಹೆಸರಿನವರು ಯಾರೂ ನಮ್ಮಲ್ಲಿ ಕೆಲಸ ಮಾಡುತ್ತಿಲ್ಲ. ನೀವು ಕೆಲಸಕ್ಕೆ ಆಯ್ಕೆ ಆಗಿದ್ದೀರಿ ಎಂದು ತಿಳಿಸಿದ್ದಾರೆ. ಹಾಗಿದ್ದ ಮೇಲೆ ತನ್ನ ಮೊಬೈಲ್ ನಂಬರ್ ಸಂಖ್ಯೆ ಹಾಗೂ ಅಂತಿಮ ಸುತ್ತಿನ ಸಂದರ್ಶನಕ್ಕೆ ಹಾಜರಾಗಿರುವುದು ಆ ವ್ಯಕ್ತಿಗೆ ಹೇಗೆ ಗೊತ್ತಾಯಿತು ಎಂದು ಮೇರಿ ಮರುಪ್ರಶ್ನೆ ಹಾಕಿದ್ದಾರೆ.[ನೆಟ್ ಸಮಸ್ಯೆ ಬಗೆ ಸರಿಪಡಿಸಲೆಂದು ಬಂದವನಿಂದ ಲೈಂಗಿಕ ದೌರ್ಜನ್ಯ]

ಇದೀಗ ಅಲ್ಲಿನ ಉದ್ಯೋಗ ಅವಕಾಶವನ್ನು ನಿರಾಕರಿಸಿದ ಮೇರಿ, ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆ ವ್ಯಕ್ತಿ ಕರೆ ಮಾಡಿದ ಮೊಬೈಲ್ ನಂಬರ್ ಸಹಾಯದಿಂದ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದು, ಈ ಬಗ್ಗೆ ಬೆಂಗಳೂರ್ ಮಿರರ್ ನಲ್ಲಿ ವರದಿ ಪ್ರಕಟವಾಗಿದೆ.

English summary
25-year-old Mary, a native of Mangaluru, landed in city for a job interview for an MNC bank on Bannerghatta Road sexually abused by a person introduce himself as Rohan, HR of the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X