ಸಮ್ಮಿಶ್ರ ಸರ್ಕಾರ ಕ್ಕೆ ಮತ್ತೆ ಆಘಾತ: ಮತ್ತಿಬ್ಬರು ಶಾಸಕರ ರಾಜೀನಾಮೆ
ಬೆಂಗಳೂರು, ಜುಲೈ 10: ಹದಿನಾಲ್ಕು ಶಾಸಕರ ರಾಜೀನಾಮೆಯಿಂದ ಕಂಗೆಟ್ಟಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ಶಾಸಕರಾದ ಎಂಟಿಬಿ ನಾಗರಾಜು ಮತ್ತು ಡಾ. ಸುಧಾಕರ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಇಬ್ಬರು ಕಾಂಗ್ರೆಸ್ ಶಾಸಕರು ಇಂದು ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ರಾಜೀನಾಮೆಯ ನಂತರ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡದೆ ಅವಸರವಸರವಾಗಿ ತೆರಳಿದ್ದು ಕುತೂಹಲ ಕೆರಳಿಸಿದೆ.

ಮಂಗಳವಾರ ನಡೆದಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಗೂ ಹಾಜರಾಗದ ಎಂಟಿಬಿ ನಾಗರಾಜು, ಅನಾರೋಗ್ಯದ ಕಾರಣ ನೀಡಿದ್ದರು. ಆದರೆ ಇಂದು ತಮ್ಮದೇ ಕೈಬರಹದಲ್ಲಿ ರಾಜೀನಾಮೆ ಪತ್ರ ಬರೆದು ಸ್ಪೀಕರ್ ಗೆ ನೀಡಿದ್ದಾರೆ.
ಈ ಮೂಲಕ ಸಮ್ಮಿಶ್ರ ಸರ್ಕಾರದಲ್ಲಿ ಪಟ್ಟು 16 ಜನ ರಾಜೀನಾಮೆ ನೀಡಿದಂತಾಗಿದ್ದು, ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.












Click it and Unblock the Notifications