ಸ್ಲಂ ಮನೆ ತೆರವುಗೊಳಿಸಲು ಯತ್ನ: ಅಗ್ರಹಾರ ದಾಸರಹಳ್ಳಿ ಜನರ ಆಕ್ರೋಶ
ಬೆಂಗಳೂರು, ಫೆಬ್ರವರಿ 11: ಕೊಳಗೇರಿ ನಿವಾಸಿಗಳನ್ನು ಏಕಾಏಕಿ ತೆರವುಗೊಳಿಸಲು ಯತ್ನಿಸಿದ ಪೊಲೀಸರು ಮುಂದಾದ ಹಿನ್ನೆಲೆಯಲ್ಲಿ ಅಗ್ರಹಾರ ದಾಸರಹಳ್ಳಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅಗ್ರಹಾರ ದಾಸರಹಳ್ಳಿಯಲ್ಲಿರುವ ಕೊಳಗೇರಿ ನಿವಾಸಿಗಳ ವಸತಿ ಸಮುಚ್ಛಯ ವಿವಾದಕ್ಕೆ ನಾಂದಿ ಹಾಡಿತ್ತು. ಅನಧಿಕೃತ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕೊಳಗೇರಿ ನಿವಾಸಿ ನಿರ್ಮೂಲನಾ ಮಂಡಳಿ ಆಪಾದಿಸಿತ್ತು. ಸುಮಾರು ಮೂವತ್ತುಮನೆಗಳಿದ್ದು, , ಅದರಲ್ಲಿ ಹದಿನೇಳು ಮನೆಗಳ ತೆರವಿಗೆ ಸ್ಲಂ ಬೋರ್ಡ್ ಅಧಿಕಾರಿಗಳು ಮುಂದಾಗಿದ್ದರು. ಆದರೆ ಮನೆ ತೆರವುಗೊಳಿಸದಂತೆ ನಿವಾಸಿಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಸ್ಲಂ ಬೋರ್ಡ್ ಅಧಿಕಾರಿಗಳು ಪುನಃ ತೆರವುಗೊಳಿಸಲು ಬಂದಿದ್ದರು.
ಪೊಲೀಸರೊಂದಿಗೆ ಏಕಾಏಕಿ ಆಗಮಿಸಿದ ಅಧಿಕಾರಿಗಳು ಹದಿನೇಳು ಮನೆಗಳ ನಿವಾಸಿಗಳಿಗೆ ಮನೆ ತೆರವಿಗೆ ಸೂಚಿಸಿದರು. ಮನೆಗಳಲ್ಲಿನ ವಸ್ತು ಎತ್ತಿ ಹಾಕಲು ಯತ್ನಿಸಿದಾಗ ಸ್ಥಳೀಯರು ಆಕ್ಷೇಪಿಸಿದರು. ಕರೋನಾ ಟೈಮ್ ನಲ್ಲಿ ಯಾವು ಎಲ್ಲಿ ಹೋಗೋಣ. ಈ ಸಂಕಷ್ಟದಲ್ಲಿ ನಾವು ಎಲ್ಲಿಗೆ ಹೋಗಬೇಕು. ಎಲ್ಲಾ ವಸ್ತುಗಳನ್ನು ಹೊರಗೆ ಹಾಕುತ್ತಿದ್ದಾರೆ ಎಂದು ಮಾಧ್ಯಮಗಳ ಎದುರು ಕಣ್ನೀರು ಹಾಕಿದರು. ಇದರ ನಡುವೆಯೂ ಮನೆಗಳನ್ನು ತೆರವಿಗೆ ಯತ್ನಿಸಿದ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ನಾವು ಮನೆ ಮೇಲಿಂದ ಹಾರುತ್ತೇವೆ ಎಂದು ಕೂಗಾಡಿದರು. ಇದರಿಂದ ಅಗ್ರಹಾರ ದಾಸರಹಳ್ಳಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.