ಬೆಂಗಳೂರು: 4 ವರ್ಷದ ಬಾಲೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಗುಂಡೇಟು
ಬೆಂಗಳೂರು, ಅಕ್ಟೋಬರ್ 12: ಸಿಟಿ ರೈಲು ನಿಲ್ದಾಣದಲ್ಲಿ ಪಾಲಕರ ಜೊತೆ ಮಲಗಿದ್ದ ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರವೆಸಗಿದ್ದ ದಿನೇಶ್ ಎಂಬಾತನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತ ಬಾಲಕಿಯ ಪಾಲಕರು ತಮಿಳುನಾಡು ಮೂಲದವರಾಗಿದ್ದು, ಮಕ್ಕಳ ಆಟಿಕೆ ಸಾಮಾನುಗಳ ಮಾರಾಟ ಮಾಡುವವರಾಗಿದ್ದಾರೆ.
ಚೆನ್ನೈ ಮೂಲದ ದಿನೇಶ್ ಗುಂಡೇಟು ತಿಂದ ಆರೋಪಿ. ಆರೋಪಿ ದಿನೇಶ್ ಕಳೆದ ದಿನದ ಹಿಂದೆ ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದನು.

ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗದ ಪೊಲೀಸರು ಆತನಿಗೆ ಬಲೆ ಬೀಸಿದ್ದರು. ಖಚಿತ ಮಾಹಿತಿ ಮೇರೆಗೆ ಇಂದು ಬೆಳಗಿನ ಜಾವ ಶ್ರೀರಾಮಪುರ ಪೊಲೀಸರು ಬಂಧಿಸಲು ತೆರಳಿದ್ದರು.
ಆರ್ ಆರ್ ಕಲ್ಯಾಣ ಮಂಟಪದ ಬಳಿ ಹೋದಾಗ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಹೀಗಾಗಿ ಶ್ರೀರಾಂಪುರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಸುನೀಲ್ ನಾಯ್ಕ ಆರೋಪಿಯ ಕಾಲಿಗೆ ಗುಂಡೇಟು ಹೊಡೆದು ನಂತರ ಆತನನ್ನು ಬಂಧಿಸಿದ್ದಾರೆ.
Recommended Video
ಮನೆ ಮುಂದೆ ಗಾಂಜಾ ಗಿಡ, ಖತರ್ನಾಕ್ ಕಳ್ಳರು | Oneindia Kannada












Click it and Unblock the Notifications