ಬಿಜೆಪಿ ಕಿಂಗ್‌ಪಿನ್ ಆರೋಪ ಹೊತ್ತಿರುವ ಉದಯ್‌ಗೌಡ ಒಡೆತನದ ಕ್ಲಬ್ ಬಂದ್

ಬೆಂಗಳೂರು, ಸೆ.22: ಬಿಜೆಪಿಯ ಕಿಂಗ್ ಪಿನ್ ಆರೋಪ ಹೊತ್ತಿರುವ ಉದಯ್‌ಗೌಡ ಅವರಿಗೆ ಸೇರಿದ ಕ್ಲಬ್ ಒಂದರ ಮೇಲೆ ಶುಕ್ರವಾರ ಪೊಲೀಸರು ದಾಳಿ ನಡೆಸಿದ್ದು, ಬಳಿಕ ಬೀಗ ಹಾಕಲಾಗಿದೆ.

ಆಪರೇಷನ್ ಕಮಲದ ಕಿಂಗ್ ಪಿನ್ ಎಂಬ ಆರೋಪವನ್ನು ಹೊತ್ತಿರುವ ಉದಯ್‌ಗೌಡ ಕಾನೂನು ಬಾಹಿರವಾಗಿ ಕ್ಲಬ್ ನಡೆಸುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಕ್ಲಬ್ ಮುಚ್ಚಲಾಗಿದೆ.

ನಗರದ ಎಂಜಿ ರಸ್ತೆಯಲ್ಲಿರುವ ಕ್ಲಬ್ ಮೇಲೆ ದಾಳಿ ಕೇಂದ್ರ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕಾನೂನು ಬಾಹಿರವಾಗಿ ಕ್ಲಬ್ ನಡೆಸುತ್ತಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕ್ಲಬ್ ಗೆ ಬೀಗ ಹಾಕಲಾಗಿದೆ.

Police seizes Bjp kingpin Udayagowdas club

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಹಾಗೂ ಕರ್ನಾಟಕದ ಹೊರ ಭಾಗಗಳಲ್ಲೂ ವ್ಯವಹಾರಗಳನ್ನು ಹೊಂದಿರುವ ಉದಯ್ ಗೌಡ ಅನೇಕ ಕ್ಲಬ್ ಗಳನ್ನು ನಡೆಸುತ್ತಿದ್ದ, ಆತನ ಎಲ್ಲಾ ವ್ಯವಹಾರಗಳ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದ್ದು, ಈ ಪೈಕಿ ಒಂದು ಕ್ಲಬ್ ಈಗಾಗಲೇ ಮುಚ್ಚಲಾಗಿದೆ.

ಫೋರ್ಜರಿ, ವಂಚನೆ, ಪ್ರಕರಣಗಳಲ್ಲಿ ಮೂರು ದಿನಗಳ ಹಿಂದಷ್ಟೇ ಶೇಷಾದ್ರಿಪುರದ ಲಿಂಕ್ ರಸ್ತೆಯಲ್ಲಿರುವ ಉದಯ್ ಗೌಡ ನ ಮನೆ ಹಾಗೂ ಆತನ ವ್ಯವಹಾರ ಸ್ನೇಹಿತ ಕೆ.ವಿ. ನಾಯ್ಡುಗೆ ಸೇರಿದ ಡಾಲರ್ಸ್ ಕಾಲೊನಿಯಲ್ಲಿರುವ ಮನೆ ಮೇಲೆ ಪೊಒಲೀಸರು ದಾಳಿ ನಡೆಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+