ಕಾರಣವೇ ಇಲ್ಲದೆ ಕೊಲೆ ಮಾಡಿದ್ದವನ ಕಾಲಿಗೆ ಬಿತ್ತು ಪೊಲೀಸರ ಗುಂಡೇಟು
ಬೆಂಗಳೂರು, ಜುಲೈ 5:ಯಾವುದೇ ಕಾರಣವೇ ಇಲ್ಲದೆ ಕೊಲೆ ಮಾಡಿದವನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಸಂಬಂಧವೇ ಇಲ್ಲದವನನ್ನು ಬರ್ಬರವಾಗಿ ಹತ್ಯೆಗೈದು ತಲೆಮರೆಸಿಕೊಂಡಿದ್ದ ರೌಡಿ ಶ್ರೀನಿವಾಸ್ ಅಲಿಯಾಸ್ ಲಗ್ಗೆರೆ ಸಿನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಜೂನ್ 17ರಂದು ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ್ ಎನ್ನುವವರನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ.
ಜೂನ್ 17ರಂದು ಎಲೆಕ್ಟ್ರಿಷಿಯನ್ ಗಣೇಶ್ ಅವರು ವೈಯಾಲಿಕಾವಲ್ ಮುಖ್ಯರಸ್ತೆ ಯಲ್ಲಿರುವ ಹೋಟೆಲ್‌ನಲ್ಲಿ ಊಟ ಮಾಡಿ ಸ್ನೇಹಿತನ ಜೊತೆ ಬೈಕಿನಲ್ಲಿ ಮನೆ ಕಡೆ ಹೊರಟಿದ್ದರು, ಅದೇ ವೇಳೆ ತನ್ನ ಸಹಚರರಿಬ್ಬರ ಜೊತೆ ಬೈಕಿನಲ್ಲಿ ಬಂದಿದ್ದ ಸೀನ, ಗಣೇಶ್ ಇದ್ದ ಬೈಕನ್ನು ಓವರ್ ಟೇಕ್ ಮಾಡುವ ರಭಸದಲ್ಲಿ ಅವರ ಮೇಲೆ ಮಚ್ಚು ಬೀಸಿದ್ದ, ಬಳಿಕ ಗಣೇಶ್ ಅಲ್ಲಿಯೇ ಬಿದ್ದು ಮೃತಪಟ್ಟಿದ್ದರು.

ಜೊತೆಯಲ್ಲಿದ್ದ ಸ್ನೇಹಿತ ಅಲ್ಲಿಂದ ಓಡಿ ಹೋಗಿದ್ದ, ಈಗ ಮಲ್ಲೇಶ್ವರ ಠಾಣೆ ಇನ್‌ಸ್ಪೆಕ್ಟರ್ ಕೆಆರ್ ಪ್ರಸಾದ್ ಸರ್ವೀಸ್ ರಿವಾಲ್ವರ್‌ನಿಂದ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.












Click it and Unblock the Notifications