• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಳ್ಳನನ್ನು ಹಿಡಿದ ಬೆಂಗಳೂರು ಪೇದೆಗೆ ಕೇರಳ ಹನಿಮೂನ್‌ ಪ್ಯಾಕೇಜ್‌

By Nayana
|

ಬೆಂಗಳೂರು, ಜು.7: ಕಳ್ಳನೊಬ್ಬನನ್ನು 4 ಕಿ.ಮೀ ಚೇಸ್‌ ಮಾಡಿ ಬಂಧಿಸಿದ ಬಳ್ಳಂದೂರು ಠಾಣೆ ಪೇದೆ ವೆಂಕಟೇಶ್‌ಗೆ ಕೇರಳ ಹನಿಮೂನ್‌ ಪ್ಯಾಕೇಜ್‌ ಉಡುಗೊರೆಯಾಗಿ ನೀಡುವುದಾಗಿ ಘೋಷಿಸಲಾಗಿದೆ.

ಹೋಟೆಲ್‌ ಸಿಬ್ಬಂದಿಯ ಮೊಬೈಲ್‌ ಕಸಿದು ಸ್ಕೂಟರ್‌ನಲ್ಲಿ ಪರಾರಿಯಾಗುತ್ತಿದ್ದ ನಾಲ್ವರನ್ನು ಬೈಕ್‌ನಲ್ಲಿ ಚೇಸ್‌ ಮಾಡಿ ಬಂಧಿಸಿದ್ದರು. ಬಂಧಿತ ಆರೋಪಿಯಿಂದ ಒಂದು ಮೊಬೈಲ್‌ ಹಾಗೂ ಸ್ಕೂಟರ್‌ ಜಪ್ತಿ ಮಾಡಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಮ್ಮ ಪೊಲೀಸರು ಬಳಸುವ ವೈರ್‌ಲೆಸ್‌ ಔಟ್‌ ಡೇಟೆಡ್‌ ಎಂದ ಸಿಎಜಿಐ

ಬೆಳ್ಳಂದೂರು ಪೊಲೀಸ್‌ ಠಾಣೆಯ ಪೇದೆ ವೆಂಕಟೇಶ್‌ ಬುಧವಾರ ರಾತ್ರಿ ಪಾಳಿ ಕರ್ತವ್ಯದಲ್ಲಿದ್ದರು. ಗಸ್ತು ತಿರುಗುತ್ತಿದ್ದ ವೇಳೆ ಸರ್ಜಾಪುರ ರಸ್ತೆ ಬಿಗ್‌ ಬಜಾರ್‌ ಬಳಿ ತಡರಾತ್ರಿ 2.45ರ ಸುಮಾರಿಗೆ ಕೆಎಫ್‌ಸಿ ನೌಕರ ಹನುಮಂತಪ್ಪ ಎಂಬುವರು ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದರು.

ಈ ವೇಳೆ 2 ಸ್ಕೂಟರ್‌ನಲ್ಲಿ ಬಂದ ನಾಲ್ವರು ಆರೋಪಿಗಳು ಮೊಬೈಲ್‌ ಕಿತ್ತುಕೊಂರು ಪರಾರಿಯಾಗಲು ಯತ್ನಿಸಿದ್ದರು. ಕೂಡ ಹನುಮಂತಪ್ಪ ಬಂದು ಬೈಕ್‌ನಲ್ಲಿ ಚೇಸ್‌ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.

ಪೇದೆಗೆ ನವೆಂಬರ್‌ನಲ್ಲಿ ವಿವಾಹವಾಗುತ್ತಿರುವ ಕಾರಣ ವೆಂಕಟೇಶ್‌ ಅವರಿಗೆ ಕೇರಳ ಹನಿಮೂನ್‌ ಪ್ಯಾಕೇಜ್‌ ಹಾಗೂ 10 ಸಾವಿರ ನಗದು ಹಣವನ್ನು ನೀಡಲಾಗಿದೆ.

English summary
Venkatesh, constable at Bellandur police station has rewarded with Kerala honey moon package from his senior officials for his courageous and committed duty. He has caught a chain snatcher by chasing four kilometers near Sarjapur big bazar on Wednesday night Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X