ಪ್ರಶ್ನೆ ಪತ್ರಿಕೆ ಸೋರಿಕೆ: ಡಿ.23ಕ್ಕೆ ಕಾನ್‌ಸ್ಟೇಬಲ್ ಲಿಖಿತ ಪರೀಕ್ಷೆ
ಬೆಂಗಳೂರು, ನವೆಂಬರ್ 29: ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಮುಂದೂಡಲಾಗಿದ್ದ ಪರೀಕ್ಷೆ ಡಿಸೆಂಬರ್ 23ಕ್ಕೆ ನಡೆಯಲಿದೆ.
ಖಾಲಿ ಇದ್ದ 2,113 ಪೇದೆಗಳ ಹುದ್ದೆಗೆ ನವೆಂಬರ್ 25ರರಂದು ರಾಜ್ಯವ್ಯಾಪಿ ಲಿಖಿತ ಪರೀಕ್ಷೆ ನಿಗದಿ ಮಾಡಲಾಗಿತ್ತು, ನವೆಂಬರ್ 24ರಂದು ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಬೆಳಕಿಗೆ ಬಂದಿದ್ದು 116 ಅಭ್ಯರ್ಥಿಗಳು ಸೇರಿ 120 ಮಂದಿಯನ್ನು ಬಂಧಿಸಲಾಗಿತ್ತು.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರ ಸಂತೆಯ ಕೊಠಡಿಯೊಂದರಲ್ಲಿ ಅಭ್ಯರ್ಥಿಗಳನ್ನೆಲ್ಲ ಒಟ್ಟಿಗೆ ಮಾಡಿಕೊಂಡು, ಪ್ರಶ್ನೆಪತ್ರಿಕೆ ಹಾಗೂ ಅದಕ್ಕೆ ಉತ್ತರ ಹೇಳಿಕೊಡಲು ಸಿದ್ಧತೆ ನಡೆಸಲಾಗಿತ್ತು. ಶಿವಕುಮಾರ್ ಹಾಗೂ ಬಸವರಾಜ್ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಸುಳಿವು ಸಿಕ್ಕಿತ್ತು.

ಪ್ರಾಥಮಿಕ ತನಿಖೆಯ ಮೂಲಕ ತಿಳಿಯುವ ಮಾಹಿತಿ ಪ್ರಕಾರ ಶಿವಕುಮಾರ್ 6 ರಿಂದ 8 ಲಕ್ಷಕ್ಕೆ ಪ್ರಶ್ನೆ ಪತ್ರಿಕೆಯನ್ನು ಮಾರಾಟ ಮಾಡುತ್ತಿದ್ದ. ಈ ಹಗರಣಕ್ಕೆ ಸಂಬಂಧಿಸಿದಂತೆ 4 ಮಿನಿ ಬಸ್ ಚಾಲಕರು, ಇನ್ನೋವಾ ಕಾರು ಚಾಲಕ ಮತ್ತು ಲಾರಿ ಕ್ಲೀನರ್‌ಗಳನ್ನು ವಿಚಾರಣೆ ನಡೆಸಲಾಗಿದೆ.
ಇದೀಗ ರಾಜ್ಯದ 24 ಜಿಲ್ಲೆಗಳಲ್ಲಿ ಡಿಸೆಂಬರ್ 23ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ಪ್ರಕರಣದ ಪ್ರಮುಖ ಆರೋಪಿ ಪೇದೆ ಬಸವರಾಜು ಇನ್ನೂ ಸಿಕ್ಕಿಲ್ಲ, ಈತನ ಜತೆಗೆ ಕೆಲ ಪೊಲೀಸ್ ಅಧಿಕಾರಿಗಳು ಅಕ್ರಮದಲ್ಲಿ ತೊಡಗಿರುವ ಕುರಿತು ತನಿಖಾಧಿಕಾರಿಗಳಿಗೆ ಸುಳಿವು ಸಿಕ್ಕಿದೆ. ಶಿವಕುಮಾರಯ್ಯ ಸೇರಿ ಒಟ್ಟು 9ಮಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.












Click it and Unblock the Notifications