ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ವೀಟ್ ಬೆದರಿಕೆಗೆ ಹೆದರಬೇಡಿ, ಗಾಳಿಸುದ್ದಿ ನಂಬಬೇಡಿ: ರೆಡ್ಡಿ

By Mahesh
|
Google Oneindia Kannada News

ಬೆಂಗಳೂರು, ಡಿ.15: ಸಿಡ್ನಿ ಒತ್ತೆಯಾಳು ಪ್ರಕರಣದ ನಂತರ ಬೆಂಗಳೂರಿನಲ್ಲಿ ದಾಳಿ ನಡೆಸುವುದಾಗಿ ಬಂದಿರುವ ಟ್ವೀಟ್ ನೋಡಿ ಭಯಪಡಬೇಡಿ. ಭಯೋತ್ಪಾದಕರ ವಿಧ್ವಂಸಕ ಕೃತ್ಯ ನಡೆಸುವ ಬಗ್ಗೆ ಬರುವ ಟ್ವೀಟ್ ಗಳನ್ನು ನಂಬಬೇಡಿ, ಅನೇಕ ನಕಲಿ ಖಾತೆಗಳು ಸೃಷ್ಟಿಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಹೇಳಿದ್ದಾರೆ.

ಬೆದರಿಕೆಯ ಟ್ವೀಟ್ ಬಂದಿರುವ @ISIS_Med ಒಂದು ಫೇಕ್ ಐಡಿ ಎಂದು ತಿಳಿದು ಬಂದಿದೆ. ಈ ಟ್ವಿಟ್ಟರ್ ಖಾತೆಯ ಐಪಿ ಹುಡುಕಲಾಗುತ್ತಿದ್ದು, ಈ ಬಗ್ಗೆ ಗುಪ್ತಚರ ಇಲಾಖೆಯಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅದರೆ, ಇಂಥ ಬೆದರಿಕೆ ಸಂದೇಶಗಳಿಗೆ ಹೆದರುವ ಅಗತ್ಯವಿಲ್ಲ ಎಂದಿದ್ದಾರೆ.

ಮೆಹದಿ ಮಸ್ರೂರ್ ಬಿಸ್ವಾಸ್ ಬಂಧನಕ್ಕೆ ಪ್ರತೀಕಾರವಾಗಿ ಬೆಂಗಳೂರಿನಲ್ಲೂ ಸಿಡ್ನಿ ಮಾದರಿಯಲ್ಲಿ ದಾಳಿ ಮಾಡಲಾಗುವುದು ಎಂದು ಟ್ವಿಟ್ಟರ್ ನಲ್ಲಿ ಸಂದೇಶವೊಂದು ಹರಿದಾಡಿತ್ತು. ಇದರಿಂದ ಉದ್ಯಾನ ನಗರಿಯಲಿ ಸಹಜವಾಗಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಈ ಟ್ವೀಟ್ ಗೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಹೇಳಿದ್ದಾರೆ. [ಬೆಂಗಳೂರಿಗೆ ಮುಹೂರ್ತವಿಟ್ಟ ಉಗ್ರರು?]

Bengaluru police commissioner MN Reddi do not panic on threat tweet appeals to public
ಗಾಳಿಸುದ್ದಿ ಹಬ್ಬಿಸಬೇಡಿ: ಇಂಥ ಟ್ವೀಟ್ ಗಳನ್ನು ಯಾರು ಮಾಡುತ್ತಾರೆಂದು ತಕ್ಷಣಕ್ಕೆ ಗೊತ್ತಾಗುವುದಿಲ್ಲ.ಉಗ್ರ ಸಂಘಟನೆಯ ಟ್ವಿಟ್ಟರ್ ಖಾತೆಗಳು ಪೊಲೀಸ್ ತನಿಖಾಧಿಕಾರಿಗಳ ಕೈವಶದಲ್ಲಿದೆ. ನಕಲಿ ಖಾತೆ ಬಳಸಿ ಜನರಲ್ಲಿ ಆತಂಕ ಸೃಷ್ಟಿಸಲಾಗುತ್ತಿದೆ. [ಸಿಡ್ನಿ ಉಗ್ರರ ದಾಳಿ : ಕ್ಷಣ-ಕ್ಷಣದ ಮಾಹಿತಿ]

ಜೊತೆಗೆ ಇಂಥ ಟ್ವೀಟ್ ಗಳು, ಫೇಸ್ ಬುಕ್ ಸಂದೇಶಗಳನ್ನು ನಂಬಿಕೊಂಡು ಗಾಳಿಸುದ್ದಿ ಹಬ್ಬಿಸುವವರಿದ್ದಾರೆ. ಸಾರ್ವಜನಿಕರು ಇಂಥ ವದಂತಿಗಳಿಗೆ ಕಿವಿಗೊಡಬಾರದು. ಜನರ ಸುರಕ್ಷತೆಗೆ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನೆಲ್ಲಾ ಬೆಂಗಳೂರು ಪೊಲೀಸರು ಕೈಗೊಳ್ಳುತ್ತಾರೆ ಎಂದು ಎಂಎನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಎಚ್ಚರಿಕೆ: ಅಸಂವಿಧಾನತ್ಮಾಕ ಸಂದೇಶ ಕಳಿಸುವ ಟ್ವೀಟ್ ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ ಎಂದು ಪೊಲೀಸ್ ಆಯುಕ್ತರ ಕಚೇರಿಯಿಂದ ಅಸಂಬದ್ಧ ಸಂದೇಶ ಕಳಿಸುವ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ಕಳಿಸಲಾಗಿದೆ.

ಬೆಂಗಳೂರಿನಲ್ಲಿ ಉಗ್ರ ಮೆಹ್ದಿ ಬಂಧನದ ನಂತರ ಈ ಮುಂಚೆ ಡಿಸಿಪಿ ಅಭಿಷೇಕ್ ಗೋಯಲ್ ಅವರಿಗೆ ಇಸೀಸ್ ನಿಂದ ಬೆದರಿಕೆ ಟ್ವೀಟ್ ಬಂದಿತ್ತು. ಸಿಡ್ನಿಯಲ್ಲಿ ಉಗ್ರರು ಒಪೆರಾ ಹೌಸ್ ನ ಕೆಫೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಒತ್ತೆಯಾಳುಗಳ ಪೈಕಿ ಹೈದಾರಾಬಾದ್ ಮೂಲದ ಇನ್ಫೋಸಿಸ್ ಟೆಕ್ಕಿ ಕೂಡಾ ಇದ್ದಾರೆ ಎಂದು ತಿಳಿದು ಬಂದಿದೆ. [ಉಗ್ರರ ವಶದಲ್ಲಿ ಇನ್ಫೋಸಿಸ್ ಉದ್ಯೋಗಿ]

English summary
Bengaluru City Commissioner of Police MN Reddi has took social networking sites facebook and Twitter requested all the followers to avoid using unparliamentary language on Twitter or else we will have to block it. I confirmed threat tweet but said no need to panic don't spread rumours n misleading tweets
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X