ರಾತ್ರಿ ನಗರದ ಪ್ರದಕ್ಷಿಣೆ ಮಾಡಿದ ಪೊಲೀಸ್ ಆಯುಕ್ತ ಅಲೋಕ್ ಕುಮಾರ್

ಬೆಂಗಳೂರು, ಜುಲೈ 28 : ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ರಾತ್ರಿ ನಗರ ಪ್ರದಕ್ಷಿಣೆ ನಡೆಸಿದ್ದಾರೆ. ಪೊಲೀಸರ ಕಾರ್ಯ ವೈಖರಿಯನ್ನು ಪರಿಶೀಲನೆ ನಡೆಸಿದ ಅವರು, ನಾಕಾಬಂಧಿಯಲ್ಲಿ ತಪಾಸಣೆಯನ್ನು ಕೈಗೊಂಡರು.

ಅಲೋಕ್ ಕುಮಾರ್ ಶನಿವಾರ ರಾತ್ರಿ ಹೆಬ್ಬಾಳ, ಮಲ್ಲೇಶ್ವರಂ, ಬಾಣಸವಾಡಿ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಹಲವು ಕಡೆ ಸಂಚಾರ ನಡೆಸಿದರು. ಪೊಲೀಸರ ಕಾರ್ಯ ವೈಖರಿಯನ್ನು ಪರಿಶೀಲನೆ ನಡೆಸಿದರು.

Police Commissioner Alok Kumar City Rounds

ಡ್ರಿಂಕ್ ಅಂಡ್ ಡ್ರೈವ್, ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುತ್ತಿದ್ದ ಸವಾರರನ್ನು ತಡೆದು ಬುದ್ಧಿವಾದ ಹೇಳಿದರು. ಕೆಲವು ಕಡೆ ಪೊಲೀಸರ ಕಾರ್ಯ ವೈಖರಿ ಕಂಡು ಅಸಮಾಧಾನ ವ್ಯಕ್ತಪಡಿಸಿದರು.

Police Commissioner Alok Kumar City Rounds

ನಗರದಾದ್ಯಂತ ನಾಕಾಬಂಧಿ ತಪಾಸಣೆಯನ್ನು ಕೈಗೊಂಡು 499 ಕ್ಕೂ ಹೆಚ್ಚು ಸಂಶಯಾಸ್ಪದರನ್ನು ವಿಚಾರಣೆಗೊಳಪಡಿಸಲಾಯಿತು. ಸೂಕ್ತ ದಾಖಲೆಗಳು ಇಲ್ಲದ ಸುಮಾರು 500 ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರದಲ್ಲಿ ಒಂದು ದಿನ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಬೇಕು ರಾತ್ರಿ ಪೊಲೀಸರು ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ನಂಬಿಕೆ ಜನರಿಗೆ ಬರಬೇಕು ಎಂದು ಅಲೋಕ್ ಕುಮಾರ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+