ಸುರಕ್ಷತಾ ನಿಯಮ ಪಾಲಿಸದ 4,947 ಶಾಲಾ ವಾಹನಗಳ ಮೇಲೆ ಕೇಸ್‌

ಬೆಂಗಳೂರು, ಜು.17: ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ವಾಹನಗಳು ಸುರಕ್ಷಿತವಾಗಿಲ್ಲ, ಚಾಲಕರು ಶಾಲೆಯನ್ನು ಬೇಗ ತಲುಪಬೇಕು ಎನ್ನುವ ಅವಸರದಲ್ಲಿ ಮನ ಬಂದಂತೆ ಟ್ರಾಫಿಕ್‌ ನಿಯಮಗಳನ್ನು ಉಲ್ಲಂಘಿಸುತ್ತಾ ಸಾಗುತ್ತಾರೆ. ಸುರಕ್ಷತೆ ನಿಯಮ ಉಲ್ಲಂಘಿಸಿ ಮಕ್ಕಳನ್ನು ಸಾಗಿಸುತ್ತಿದ್ದ ಶಾಲಾ ವಾಹನಗಳ ವಿರುದ್ಧ ವಿಶೇಷ ಕಾರ್ಯಚರಣೆ ನಡೆಸಿ ಸಂಚಾರ ಪೊಲೀಸರ 4,947 ಪ್ರಕರಣ ದಾಖಲಿಸಿದ್ದಾರೆ.

ನಿಗದಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದು, ಚಾಲನೆ ಪರವಾನಗಿ ಇಲ್ಲದಿರುವುದು, ನಂಬರ್ ಪ್ಲೇಟ್‌ನಲ್ಲಿ ದೋಷ , ಸಮವಸ್ತ್ರ ಧರಿಸದೆ ಚಾಲನೆ, ವೇಗದ ಚಾಲನೆ, ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಾಗಿದೆ.

ಪೂರ್ವ ಸಂಚಾರ ವಿಭಾಗದ ಪೊಲೀಸರು 3,264 ಪ್ರಕರಣಗಳಲ್ಲಿ 4.33 ಲಕ್ಷ ರೂ, ಪಶ್ಚಿಮ ಸಂಚಾರ ವಿಭಾಗದ ಪೊಲೀಸರು 1,182 ಪ್ರಕರಣಗಳಲ್ಲಿ 1.21ಲಕ್ಷ ರೂ ಹಾಗೂ ಉತ್ತರ ವಿಭಾಗದ ಪೊಲೀಸರು 501 ಪ್ರಕರಣ ದಾಖಲಿಸಿ 50,900 ರೂ. ದಂಡ ಸಂಗ್ರಹಿಸಿದ್ದಾರೆ.

Police book 4k cases against school vans in a day

ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಟ್ರಾಫಿಕ್‌ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಇರುವ ಶಾಲೆಗಳಿಗೆ ಭೇಟಿ ನೀಡಿ ಅರಿವು ಮೂಡಿಸುತ್ತಿದ್ದಾರೆ.

ಹಲಸೂರು ಸಂಚಾರ ಪೊಲೀಸರು ತಡೆದ ಖಾಸಗಿ ಓಮ್ನಿ ವ್ಯಾನ್‌ನಲ್ಲಿ ಕುರಿಗಳಂತೆ ಬರೋಬ್ಬರಿ 16 ಮಕ್ಕಳನ್ನು ತುಂಬಲಾಗಿತ್ತು, ಅಷ್ಟೇ ಅಲ್ಲದೆ, ಆ ವ್ಯಾನ್‌ಗೆ ವಿಮೆ ಕೂಡ ಇರಲಿಲ್ಲ, ಚಾಲಕನಿಗೆ ಸಂಡ ವಿಧಿಸಿದ ಪೊಲೀಸರು ಶಾಲೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+