ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ:ರಸ್ತೆ ಕಸ ಗುಡಿಸಲು ಬೀಟ್ ವ್ಯವಸ್ಥೆ

|
Google Oneindia Kannada News

ಬೆಂಗಳೂರು, ಮಾರ್ಚ್ 27: ಇದೇ ಮೊದಲ ಬಾರಿಗೆ ಕಸ ಗುಡಿಸುವ ಪೌರಕಾರ್ಮಿಕರು ತಮಗೆ ವಹಿಸುವ ಬೀಟ್ ನಂತೆ ರಸ್ತೆ ಸ್ವಚ್ಛಗೊಳಿಸಬೇಕಿದೆ.

ಪೊಲೀಸ್ ಇಲಾಖೆಯಲ್ಲಿನ ಗಸ್ತು ವ್ಯವಸ್ಥೆಯ ಮಾದರಿಯಲ್ಲಿಯೇ ಬಿಬಿಎಂಪಿ ಪೌರಕಾರ್ಮಿಕರು ಕೂಡ ಬೀಟ್ ನಂತೆ ರಸ್ತೆ ಸ್ವಚ್ಛಗೊಳಿಸಬೇಕು. ಭದ್ರತಾ ದೃಷ್ಟಿಯಿಂದಾಗಿ ಪೊಲೀಸ್ ಇಲಾಖೆಯಲ್ಲಿ ಬೀಟ್ ವ್ಯವಸ್ಥೆ ಜಾರಿಯಲ್ಲಿದೆ. ಒಂದು ಪ್ರದೇಶಕ್ಕೆ ಪೊಲೀಸ್ ಸಿಬ್ಬಂದಿ ನೇಮಿಸಿ, ಅವರ ಬಗ್ಗೆ ವಿವರ, ಮೊಬೈಲ್ ಸಂಖ್ಯೆ, ಠಾಣೆ ವ್ಯಾಪ್ತಿ ಇನ್ನಿತರ ಮಾಹಿತಿಯಿಂದ ಫಲಕವನ್ನು ಆ ಪ್ರದೇಶ ವ್ಯಾಪ್ತಿಯಲ್ಲಿ ಒಂದು ಕಡೆ ಅಳವಡಿಸಲಾಗಿರುತ್ತದೆ.

198 ವಾರ್ಡ್ ಕಚೇರಿಯಲ್ಲಿ ಸಿಸಿಟಿವಿ ಅಳವಡಿಕೆಗೆ ಮುಂದಾದ ಬಿಬಿಎಂಪಿ198 ವಾರ್ಡ್ ಕಚೇರಿಯಲ್ಲಿ ಸಿಸಿಟಿವಿ ಅಳವಡಿಕೆಗೆ ಮುಂದಾದ ಬಿಬಿಎಂಪಿ

ಅದೇ ಮಾದರಿಯಲ್ಲಿ ಇದೀಗ ವಾರ್ಡ್ ವ್ಯಾಪ್ತಿಯಲ್ಲಿ ರಸ್ತೆಗಳಿಗೆ ಪೌರಕಾರ್ಮಿಕರ ನೇಮಿಸಲು ಮತ್ತು ಆ ರಸ್ತೆ ಸ್ವಚ್ಛತೆಯ ಹೊಣೆ ವಹಿಸುವ ಸಲುವಾಗಿ ಬೀಟ್ ವ್ಯವಸ್ಥೆ ಜಾರಿಗೊಳಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ.

Police beat like system will introduce for Purakarmikas

ವಾರ್ಡ್ ರಸ್ತೆಗಳ ವಿಸ್ತೀರ್ಣವನ್ನಾಧರಿಸಿ ಪೌರಕಾರ್ಮಿಕರನ್ನು ನೇಮಿಸಲಾಗುತ್ತದೆ. ಆದರೆ, ಈವರೆಗೆ ಯಾರ ರಸ್ತೆ ಕಸ ಯಾರು ಗುಡಿಸುತ್ತಾರೆ ಎಂಬುಸು ತಿಳಿಯದೆ ಗೊಂದಲ ಉಂಟಾಗುತ್ತಿದೆ. ಹೀಗಾಗಿ ವಾರ್ಡ್ ವ್ಯಾಪ್ತಿಯ ರಸ್ತೆಗಳಿಗೆ ಪ್ರತ್ಯೇಕ ಸಂಖ್ಯೆ ನೀಡಲಾಗುತ್ತದೆ.

ಗೈರಾದರೆ ಬೇರೆಯವರ ನೇಮಕ: ಬೀಟ್ ಪ್ರಕಾರ ನೇಮಕವಾದ ಪೌರಕಾರ್ಮಿಕರು ರಸ್ತೆ ಸ್ವಚ್ಛತೆಗೆ ಬಾರದೆ ಗೈರಾಗಿದ್ದರೆ, ಅಲ್ಲಿನ ವಾರ್ಡ್ ಎಂಜಿನಿಯರ್ ಅದನ್ನು ಗಮನಿಸಿ ಬದಲಿ ಕಾರ್ಮಿಕರನ್ನು ನಿಯೋಜಿಸಬಹುದು. ಆ ಸಂದರ್ಭದಲ್ಲಿ ರಸ್ತೆಗಳ ಸಂಖ್ಯೆಯನ್ನು ಹೇಳುವ ಮೂಲಕ ಯಾವ ರಸ್ತೆಯಲ್ಲಿ ಕಸ ಗುಡಿಸಲಿಲ್ಲ ಎಂಬುದನ್ನು ಸುಲಭವಾಗಿ ತಿಳಿಯಬಹುದಾಗಿದೆ.

English summary
To maintain cleanliness in road BBMP will introduce beat system for pourakarmikas. They will work like police beat system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X