ಕೆಐಎಎಲ್: ಕ್ಷುಲ್ಲಕ ಕಾರಣಕ್ಕೆ ಓಲಾ, ಊಬರ್ ಚಾಲಕರ ಮಧ್ಯೆ ಕಲಹ

ಬೆಂಗಳೂರು, ಜನವರಿ 24 : ಓಲಾ ಮತ್ತು ಊಬರ್ ಕ್ಯಾಬ್ ಚಾಲಕರ ನಡುವೆ ಉಂಟಾದ ಕ್ಷುಲ್ಲಕ ಜಗಳ ತಾರಕ್ಕೇರಿ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ ಪರಿಣಾಮ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಫಲಾ ಹಾಗೂ ಊಬರ್ ಕ್ಯಾಬ್ ನಡುವೆ ಪರಸ್ಪರ ಡಿಕ್ಕಿ ಉಂಟಾಗಿದೆ. ಆದರೆ ಯಾರು ಮೊದಲು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನುವುದು ತಿಳಯದೆ ಇಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಾ ಕಲಹ ಆರಂಭಿಸಿದ್ದಾರೆ.

Police arrested two cab drivers near Airport

ಕಲಹ ತಾರಕಕ್ಕೇರಿದ್ದು ಜಗಳ ಹೊಡೆದಾಟದ ಹಂತಕ್ಕೆ ತಲುಪಿದೆ. ಅಲ್ಲಿದ್ದ ಜನರು ಅವರ ಕಲಹವನ್ನು ನಿಲ್ಲಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸುತ್ತಾ ಪರಿಸ್ಪರ ಹೊಡೆದಾಡುತ್ತಿದ್ದರು. ಇನ್ನು ಈ ಕಲಹದಿಂದ ಪ್ರಾಣಾಪಾಯ ಸಂಭವಿಸಬಹುದು ಎಂದು ಭಾವಿಸಿ ಅಲ್ಲಿದ್ದ ಜನರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರು ಚಾಲಕರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಕಲಹಕ್ಕೆ ಕಾರಣ ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+