ಹಗಲಿನಲ್ಲಿ ಸಾಚಾ ಚಾಲಕರು, ರಾತ್ರಿ ಹೊತ್ತು ಭಯಂಕರ ದರೋಡೆಕೋರರು
ಬೆಂಗಳೂರು, ಜುಲೈ 2: ಹಗಲಿನಲ್ಲಿ ಸಾಮಾನ್ಯರಂತೆ ಕಾರು ಚಾಲನೆ ಮಾಡಿ ರಾತ್ರಿ ಹೊತ್ತು ದರೋಡೆಗಿಳಿಯುತ್ತಿದ್ದ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ.
ಹೊರಮಾವು ನಿವಾಸಿ ಮುನಿಯಪ್ಪ(24), ರಾಜಶೇಖರ್ (23), ಶ್ರೀಕೃಷ್ಣ(19) ಬಂಧಿತರು.ಆರೋಪಿಗಳು ಹಗಲಿನಲ್ಲಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದು, ರಾತ್ರಿಯಾದರೆ ದರೋಡೆಗಿಳಿಯುತ್ತಿದ್ದರು. ಇವರು ಆವಲಹಳ್ಳಿ ಸುತ್ತ ರಾತ್ರಿ ವೇಳೆಯಲ್ಲಿ ಸಾರ್ವಜನಿಕರಿಂದ ಮೊಬೈಲ್‌ಗಳನ್ನು ದರೋಡೆ ನಡೆಸುತ್ತಿದ್ದರು. ಬಂಧಿತರಿಂದ 10 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಮುನಿಯಪ್ಪನ ಹತ್ತಿರ ಹೋಂಡಾ ಡಿಯೋ ಇತ್ತು ಅದರಲ್ಲೇ ಮೂವರು ಓಡಾಡುತ್ತಾ ನಿರ್ಜನ ಪ್ರದೇಶಗಳಲ್ಲಿ ಹೊಂಚು ಹಾಕಿ ಮೊಬೈಲ್ ಕಳವು ಮಾಡುತ್ತಿದ್ದರು. ಪೊಲೀಸರು ನಾಕಾ ಬಂಧಿ ಹಾಕಿದ್ದು ಕಳ್ಳರು ಬಲೆಗೆ ಬಿದ್ದಿದ್ದಾರೆ. ಒಂದೇ ಬೈಕಿನಲ್ಲಿ ಬಂದ ಮೂವರನ್ನು ತಡೆದು ನಿಲ್ಲಿಸಿದಾಗ ಅವರು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಅನುಮಾನ ಬಂದು ವಿಚಾರಣೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ.

ಬೈಕಿನಲ್ಲಿ ಬಂದು ಮೊಬೈಲ್‌ಗಳನ್ನು ಕಿತ್ತುಕೊಂಡು ಪರಾರಿಯಾಗುವ ಗ್ಯಾಂಗ್‌ಗಳ ಹಾವಳಿ ವಿಪರೀತವಾಗಿದೆ. ಚರ್ಚ್ ಸ್ಟ್ರೀಟ್ ನ ಬ್ಲಾಸಮ್ ಬುಕ್ ಸ್ಟೋರ್ ಮುಂದೆ ನಿಂತಿದ್ದ ಮಹಿಳೆಯೊಬ್ಬರ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಆರೋಪಿಗಳು ಪರಾರಿಯಾಗಿರುವ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.












Click it and Unblock the Notifications