ಆಫ್ರಿಕಾ ವಿದ್ಯಾರ್ಥಿಗಳಿಂದ ಶಾಂತಿಭಂಗ: ಪೊಲೀಸ್ ಪ್ರಕಟಣೆ
ಬೆಂಗಳೂರು, ಏ 11: ಬೆಂಗಳೂರು ನಗರದಲ್ಲಿ ಆಫ್ರಿಕಾ ಖಂಡದ ವಿವಿಧ ದೇಶದ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬೆಂಗಳೂರು ನಗರಕ್ಕೆ ಪ್ರತಿ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುತ್ತಾರೆ.
ಈ ವಿದ್ಯಾರ್ಥಿಗಳು ಕೆ ಆರ್ ಪುರ, ಬಾಣಸವಾಡಿ, ಕೆ ಜಿ ಹಳ್ಳಿ, ರಾಮಮೂರ್ತಿ ನಗರ, ಬೈಯಪ್ಪನಹಳ್ಳಿ, ನಾಗವಾರ, ಹೆಗಡೆನಗರ ಮುಂತಾದ ಪ್ರದೇಶಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು ವಿವಿಧ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇತ್ತೀಚೆಗೆ ಆಫ್ರಿಕಾ ದೇಶದ ವಿದ್ಯಾರ್ಥಿಗಳಿಗೂ ಮತ್ತು ಸ್ಥಳೀಯರಿಗೂ ಘರ್ಷಣೆ ಉಂಟಾಗಿ ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗಿರುತ್ತದೆ.
ಹಾಗಾಗಿ, ಅಪರ ಪೊಲೀಸ್ ಆಯುಕ್ತ (ಪೂರ್ವ) ಪಿ ಹರಿಶೇಖರನ್ ಈ ಕೆಳಕಂಡ ಉದ್ದೇಶಗಳಿಗಾಗಿ 'ಪೊಲೀಸ್ ಆಫ್ರಿಕನ್ ಸ್ಟೂಡೆಂಟ್ಸ್ ಕೋ-ಆರ್ಡಿನೇಷನ್ ಕಮಿಟಿಯನ್ನು' ಸ್ಥಾಪಿಸುವ ಕುರಿತು ಚರ್ಚಿಸಲು ನಿರ್ಧರಿಸಿದ್ದಾರೆ.
> ವಿದ್ಯಾರ್ಥಿಗಳಿಗೆ ಭಾರತ ದೇಶದಲ್ಲಿರುವ ಪ್ರಚಲಿತ ಕಾನೂನು ಮತ್ತು ವಿದೇಶೀಯರ ನೊಂದಣಿ ಬಗ್ಗೆ ತಿಳುವಳಿಕೆ ನೀಡುವುದು.
> ವಿದ್ಯಾರ್ಥಿಗಳಿಗೆ ಸ್ಥಳೀಯ ಕಾನೂನು & ಸುವ್ಯವಸ್ಥೆಗಳ ಬಗ್ಗೆ ಅರಿವು ಮೂಡಿಸುವುದು.
> ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ ತಿಳಿಸುವುದು.
> ಅಪರಾಧ ತಡೆ ಮತ್ತು ಪತ್ತೆ ಕಾರ್ಯ ಮಾಡಲು ಪೊಲೀಸ್ ಇಲಾಖೆಗೆ ಆಫ್ರಿಕಾ ಖಂಡದ ವಿದ್ಯಾರ್ಥಿಗಳು ಹೆಚ್ಚಿನ ಸಹಕಾರ ನೀಡುವುದು.
ಈ ಸಭೆಯಲ್ಲಿ ಆಫ್ರಿಕಾ ಖಂಡದ ವಿದ್ಯಾರ್ಥಿಗಳು, ಈ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಪ್ರಾಂಶುಪಾಲರುಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ನೀಡುವಂತೆ ಕೋರಲಾಗಿದೆ.
ಸ್ಥಳ : ಸಿಎಂಆರ್ ಸ್ಕೂಲ್ ಸಭಾಂಗಣ, ಕಾಚರಕನಹಳ್ಳಿ. ಬೆಂಗಳೂರು.
ದಿನಾಂಕ : 12-04-2015, ಬೆಳಿಗ್ಗೆ 11 ಗಂಟೆ












Click it and Unblock the Notifications