ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಮೋದಿ ಭೇಟಿ ಹಿನ್ನೆಲೆ: ಸಿಬ್ಬಂದಿಯ ಕೋವಿಡ್‌ ತಪಾಸಣೆ- ಸೋಂಕಿತರ ಸಂಖ್ಯೆ ಏರಿಕೆ

|
Google Oneindia Kannada News

ಬೆಂಗಳೂರು, ನವೆಂಬರ್ 11: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಭೇಟಿ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಗಳ ಸಿಬ್ಬಂದಿ ಕೊರೋನಾ ತಪಾಸಣೆಗೆ ಒಳಗಾಗಿದ್ದಾರೆ. ಜೊತೆಗೆ ಕೋವಿಡ್ ಸಾರ್ವಜನಿಕ ತಪಾಸಣೆ ಹೆಚ್ಚಿಸಿದ್ದರಿಂದ ನಗರದಲ್ಲಿ ಪಾಸಿಟಿವ್ ಪ್ರಕರಣ ಮೂರು ಪಟ್ಟು ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಕೇವಲ ಒಂದು ದಿನದ ಅವಧಿಯಲ್ಲಿ ಕೋವಿಡ್ 19 ಪ್ರಕರಣಗಳಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ. ಆದರೆ ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಕೊರೋನಾ ತಪಾಸಣೆಯ ಸಾರ್ವಜನಿಕರ ಸಂಖ್ಯೆ ಹಾಗೂ ಪ್ರಧಾನಿ ಮೋದಿ ಭೇಟಿ ನೀಡುವ ಸ್ಥಳಗಳಲ್ಲಿ ತಪಾಸಣೆಗೆ ಒಳಪಟ್ಟ ಸಿಬ್ಬಂದಿ ಸಂಖ್ಯೆ ಒಟ್ಟುಗೂಡಿಸಿದರೆ ತಪಾಸಣೆ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ.

ನವೆಂಬರ್ 7 ರಂದು ಸೋಮವಾರ ಈ ಪಾಸಿಟಿವ್ ಪ್ರಕರಣಗಳ ಸಂಖ್ಯೆ 67 ಇತ್ತು. ಮರುದಿನ 225 ಕ್ಕೆ ಹೆಚ್ಚಾಯಿತು. ಮತ್ತೆ

ಬುಧವಾರ ಪಾಸಿಟಿವ್ ಸಂಖ್ಯೆ 65ಕ್ಕೆ ಇಳಿಯಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯ ಕೋವಿಡ್ ವಾರ್ ರೂಮ್‌ನ ವಿಶೇಷ ಕರ್ತವ್ಯ ಅಧಿಕಾರಿ ಡಾ. ಭಾಸ್ಕರ್ ರಾಜ್‌ಕುಮಾರ್ (ಬಿಬಿಎಂಪಿ) ತಿಳಿಸಿದರು.

ಪ್ರಧಾನಿ ಕಾರ್ಯಕ್ರಮದ ಸಿಬ್ಬಂದಿಯ ತಪಾಸಣೆ

ಪ್ರಧಾನಿ ಕಾರ್ಯಕ್ರಮದ ಸಿಬ್ಬಂದಿಯ ತಪಾಸಣೆ

ನವೆಂಬರ್ 6 ರಂದು 856 ಪರೀಕ್ಷೆಗಳನ್ನು ನಡೆಸಿದರೆ, ನವೆಂಬರ್ 7 ರಂದು 1,926 ಹಾಗೂ ನವೆಂಬರ್ 8 ರಂದು 1,963 ಮಂದಿಯ ಕೋವಿಡ್ ತಪಾಸಣೆ ನಡೆದಿದೆ. ಇದೇ ವೇಳೆ ಪ್ರಧಾನಮಂತ್ರಿಗಳು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ, ರಕ್ಷಣೆ ಒದಗಿಸುವ ಪ್ರತಿಯೊಬ್ಬ ಸಿಬ್ಬಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ ಭದ್ರತಾ ಸಿಬ್ಬಂದಿ, ಅಧಿಕಾರಿಗಳು, ವಿಧಾನಸೌಧದ ಜನರು ಮತ್ತು ಪೊಲೀಸ್ ಸಿಬ್ಬಂದಿ ಪರೀಕ್ಷೆ ಮಾಡಿಸಿದ್ದಾರೆ.

ಪಾಸಿಟಿವ್ ಪ್ರಕರಣಗಳು ಹೆಚ್ಚಾದರೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಕೋವಿಡ್ ಭೀತಿ ಕಡಿಮೆಯಾದ ಬಳಿಕ ಇತ್ತೀಚಿನ ದಿನಗಳಲ್ಲಿ ತೀವ್ರ ನಿಗಾ ಘಟಕದಲ್ಲಿ ಎರಡು ಪ್ರರಕಣ ಹಾಗೂ ಸಾಮಾನ್ಯ ವಾರ್ಡ್‌ಗಳಲ್ಲಿ ಏಳು ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಒಮಿಕ್ರಾನ್ ಉಪತಳಿಯಿಂದ ಸಮಸ್ಯೆ ಉಂಟಾಗಿಲ್ಲ

ಒಮಿಕ್ರಾನ್ ಉಪತಳಿಯಿಂದ ಸಮಸ್ಯೆ ಉಂಟಾಗಿಲ್ಲ

ಒಮಿಕ್ರಾನ್ ಬಿ ಎ 2.75 ಮತ್ತು ಎಕ್ಸ್‌ಬಿಬಿ ರೂಪಾಂತರಗಳ ಕಾರಣದಿಂದ ಪ್ರಕರಣಗಳ ಹೆಚ್ಚಳವಾಗಬಹುದು ಎಂದು ಶಂಕಿಸಲಾಗಿದೆ. ಆದರೆ ಈವರೆಗೆ ಓಮಿಕ್ರಾನ್ ಮತ್ತದರ ರೂಪಾಂತರ ತಳಿಗಳಿಂದ ಆಸ್ಪತ್ರೆಗೆ ದಾಖಲು ಮತ್ತು ಸಾವಿನಂತಹ ಗಂಭೀರ ಪರಿಣಾಮ ಉಂಟಾಗಿಲ್ಲ. ಇದೇ ರೀತಿ ಪಾಸಿಟಿವ್‌ ಪ್ರಕರಣ ಮುಂದಿನ 2ರಿಂದ 3 ವಾರಗಳ ಕಾಲ ನಿರಂತರವಾಗಿ ಹೆಚ್ಚಾದರೆ ಆಗ ಪರಿಣಾಮಕಾರಿ ಏರಿಕೆ ಎನ್ನಬಹುದು. ಸದ್ಯ ಹೆಚ್ಚಾದ ಪ್ರಕರಣಗಳ ಮೇಲ್ವಿಚಾರಣೆಯನ್ನು ಸೂಕ್ತವಾಗಿ ಮಾಡಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಕೆಲವೆಡೆ ಏರಿಕೆ ಆದ ಕೊರೋನಾ

ನಗರದ ಕೆಲವೆಡೆ ಏರಿಕೆ ಆದ ಕೊರೋನಾ

ಬೆಳ್ಳಂದೂರು, ಕಾಡುಗೋಡಿ, ದೊಡ್ಡನೆಕುಂದಿ, ವರ್ತೂರು, ಹೊರಮಾವು, ಎಚ್‌ಎಸ್‌ಆರ್‌ ಲೇಔಟ್‌, ಜಕ್ಕೂರು, ಅರಮನೆ ನಗರ, ಹೂಡಿ, ಹಗದೂರಿನ ಐಟಿ ಕಾರಿಡಾರ್‌ನಲ್ಲಿ ಕಳೆದ 10 ದಿನಗಳಲ್ಲಿ ಹೆಚ್ಚು ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ.

ಆದರೆ ನೆರೆ ಮಹಾರಾಷ್ಟ್ರಗಳಲ್ಲಿ ಕಂಡು ಬಂದಂತಹ ಎಕ್ಸ್‌ಬಿಬಿ ಒಮಿಕ್ರಾನ್ ಉಪತಳಿಯ ಪ್ರಕರಣಗಳು ನಗರದಲ್ಲಿ ಕಂಡು ಬಂದಿಲ್ಲ ಎಂದು ಬಿಬಿಎಂಪಿ ಆರೋಗ್ಯ ವಿಭಾಗ ತಿಳಿಸಿದೆ.

ಪಾಸಿಟಿವ್ ಕೇಸ್‌ನಲ್ಲಿ ಬೆಂಗಳೂರು ಅಗ್ರಸ್ಥಾನ

ಪಾಸಿಟಿವ್ ಕೇಸ್‌ನಲ್ಲಿ ಬೆಂಗಳೂರು ಅಗ್ರಸ್ಥಾನ

ಒಂದು ವೇಳೆ ಒಮಿಕ್ರಾನ್ ತಳಿಯ ಪಾಸಿಟಿವ್ ಪ್ರಕರಣ ನಗರದಲ್ಲಿ ಕಂಡು ಬಂದಿದ್ದೇ ಆದರೆ ಅಗತ್ಯ ಚಿಕಿತ್ಸೆ, ಹಾಸಿಗೆ, ವೈದ್ಯಕೀಯ ಸೌಲಭ್ಯ ಇದೆ. ಅಗತ್ಯ ಮುನ್ಸೂಚನೆ ಕೈಗೊಳ್ಳಲಿರುವ ರಾಜ್ಯ ಆರೋಗ್ಯ ಇಲಾಖೆ ಈಗಾಗಲೇ ಸಾರ್ವಜನಿಕರಿಗೆ ಒಂದಷ್ಟು ಆರೋಗ್ಯ ಸಲಹೆ ನೀಡಿದೆ. ಆರೋಗ್ಯ ಮಾರ್ಗಸೂಚಿ ಪಾಲಿಸುವಂತೆ ಸೂಚಿಸಿದೆ.

ಮಂಗಳವಾರ 1,584 ಸಕ್ರಿಯ ಕೋವಿಡ್ ಪ್ರಕರಣ ಸಹಿತ ಬೆಂಗಳೂರು ಮೆಟ್ರೋ ನಗರಗಳಲ್ಲಿ ಅಗ್ರ ಸ್ಥಾನದಲ್ಲಿದೆ. ಮುಂಬೈನಲ್ಲಿ 435, ನವದೆಹಲಿ 238 ಮತ್ತು ಚೆನ್ನೈ 227 ಪ್ರಕರಣಗಳ ಸಹಿತ ನಂತರದ ಸ್ಥಾನಗಳಲ್ಲಿವೆ.

English summary
PM Narendra Modi Bengaluru visit, Corona check up and positive cases increase 3 times in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X