ರು.8 ಲಕ್ಷಕ್ಕೆ ಪ್ಲಾಟ್, ರು.23 ಲಕ್ಷಕ್ಕೆ ಅಪಾರ್ಟ್ ಮೆಂಟ್

ಬೆಂಗಳೂರು, ಫೆ.14: ಕ್ರೆಡಾಯ್ ಬೆಂಗಳೂರು, ರಿಯಲ್ ಎಸ್ಟೇಟ್ ಉದ್ಯಮ ಮಂಡಳಿಯ ನಗರ ವಿಭಾಗ ಕಾನ್ಫೆಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಎಸೋಸಿಯೇಷನ್ ಆಫ್ ಇಂಡಿಯಾ ಫೆಬ್ರವರಿ 14 ಹಾಗೂ 15, 2015 ರಂದು ಬನ್ನೇರುಘಟ್ಟ ರಸ್ತೆ, ಐಐಎಂ ಎದುರಿನಲ್ಲಿರುವ ಕಲ್ಯಾಣಿ ಕಲಾ ಮಂದಿರ್‍ನಲ್ಲಿ ಎರಡು ದಿನದ ಝೋನಲ್ ರಿಯಾಲಿಟಿ ಎಕ್ಸ್ ಪೋ ನಡೆಸಲಿದೆ.

ರಿಯಲ್ ಎಸ್ಟೇಟ್ ಮಾರ್ಕೆಟ್ ಹಾಗೂ ಬೆಂಗಳೂರಿನಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಮಾತನಾಡುತ್ತಾ, ಕ್ರೆಡಾಯ್ ಬೆಂಗಳೂರು ಅಧ್ಯಕ್ಷರಾದ ಗೋವಿಂದರಾಜು ಅವರು, "ರಿಯಲ್ ಎಸ್ಟೇಟ್ ಕ್ಷೇತ್ರವು ಶೇ.8-9ರ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ರಿಯಲ್ ಎಸ್ಟೇಟ್ ಇನ್ವೆಸ್ಟ್‍ಮೆಂಟ್ ಟ್ರಸ್ಟ್ (ಆರ್‍ಇಐಟಿ) ಗಳಲ್ಲಿ ಅಗತ್ಯವಿರುವ ಹೂಡಿಕೆ ಮೇಲಿನ ಸ್ಪಷ್ಟತೆ, ಸುಧಾರಿತ ಮಾರ್ಕೆಟ್ ಮೇಲಿನ ಭಾವನೆ, ಯೋಜನೆಯ ಲೋಪದೋಷಗಳನ್ನು ಹಾಗೂ ಕುಂಠಿತ ವಹಿವಾಟುಗಳನ್ನು ಕಡಿಮೆಗೊಳಿಸಲು ಸರ್ಕಾರದ ಪ್ರಯತ್ನಗಳು ನಡೆಯುತ್ತಿವೆ.

 CREDAI 2015 Expo
ಇವೆಲ್ಲವೂ 2015ರಲ್ಲಿ ಧನಾತ್ಮಕ ಚಲನವಲನಗಳಿಗೆ ಹಾದಿಯನ್ನು ಸುಗಮಗೊಳಿಸುವಲ್ಲಿ ಮುಂದುವರಿಯಲಿವೆ, ಆದ್ದರಿಂದ ಇದು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಲು ಈ ಅವಧಿಯನ್ನು ಅತ್ಯುತ್ತಮ ಸಮಯವನ್ನಾಗಿ ಮಾಡುತ್ತದೆ. ಈ ಮಾರುಕಟ್ಟೆ ಮುಂದಿನ ತ್ರೈಮಾಸಿಕಗಳಲ್ಲಿ ವಸತಿ ಯೂನಿಟ್ ಗಳು ಹಾಗೂ ಕಚೇರಿ ಜಾಗದ ಗುತ್ತಿಗೆಯ ಮೇಲ್ಮುಖ ಗತಿಗೆ ಸಾಕ್ಷಿಯಾಗುತ್ತದೆ'' ಎಂದರು.

ದೃಢವಾದ ಬೆಳವಣಿಗೆಯ ನಿರೀಕ್ಷೆ
ಬೆಂಗಳೂರಿನಲ್ಲಿ ಕೆಲವು ಮುಖ್ಯ ಮೂಲಸೌಕರ್ಯ ಯೋಜನೆಗಳಾದ ಎಲಿವೇಟಡ್ ಎಕ್ಸ್ ಪ್ರೆಸ್ ವೇ, ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ), ಮೆಟ್ರೋ ರೈಲ್ ಮತ್ತು ಪ್ರಸ್ತಾಪಿತ ಹೊರವರ್ತುಲ ರಸ್ತೆ (ಕೆಲವೊಂದು ಈಗ ಕಾರ್ಯಾಚರಣೆಯಲ್ಲಿವೆ), ಇವು ಇತ್ತೀಚೆಗೆ ಅಭಿವೃದ್ಧಿಗೊಳ್ಳುತ್ತಿದ್ದು, ಪೂರ್ಣಗೊಂಡ ನಂತರ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಅಭಿವೃದ್ಧಿಗೆ ಬೆಂಬಲ ನೀಡುತ್ತವೆ.

 CREDAI 2015 Expo
ಅವರ ಪ್ರಕಾರ, ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಭಾರತದ ಇತರೆಡೆಗಳಿಗಿಂತ ಬೆಂಗಳೂರು ರಿಯಲ್ ಎಸ್ಟೇಟ್ ಮಾರುಕಟ್ಟೆ ಉತ್ತಮ ಬೆಲೆ ಹೊಂದಿದೆ. ಕಳೆದ ಒಂದು ವರ್ಷದಲ್ಲಿ ವಾಣಿಜ್ಯಿಕ ಕಚೇರಿ ಜಾಗಗಳು ಕೆಲವು ಅತಿ ದೊಡ್ಡ ಕಚೇರಿ ಜಾಗಗಳ ವಹಿವಾಟಿಗೆ ಸಾಕ್ಷಿಗಳಾಗಿವೆ. "ಈ ಕಚೇರಿ ಜಾಗಗಳ ಕಾರ್ಯಾಚರಣೆಗಳ ಪ್ರಾರಂಭವು ದೊಡ್ಡ ಪ್ರಮಾಣದ ಉದ್ಯೋಗ ಅವಕಾಶಗಳನ್ನು ಸೆಳೆಯಲಿದೆ ಹಾಗೂ ಜಗತ್ತಿನಾದ್ಯಂತದಿಂದ ಜನರು ಬೆಂಗಳೂರಿನತ್ತ ವಲಸೆ ಬರಲಿದ್ದಾರೆ. ಇವರಿಗೆ ಹೆಚ್ಚುವರಿ ವಸತಿ ಜಾಗಗಳು ಬೇಕಾಗುತ್ತವೆ.

1 ದಶಲಕ್ಷ ಚದರ ಅಡಿ ಕಚೇರಿ ಜಾಗವಿದ್ದರೆ ಅದಕ್ಕೆ ಅನುಗುಣವಾಗಿ 7.5-8 ದಶಲಕ್ಷ ಚದರ ಅಡಿಯಷ್ಟಚು ವಸತಿ ಜಾಗದ ಅಗತ್ಯ ನಿರ್ಮಾಣವಾಗುತ್ತದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಪ್ರಸ್ತುತ ಅವಧಿಯು ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಸ್ವಯಂ ಭೋಗ್ಯ ಅಥವಾ ಹೂಡಿಕೆಯ ರೂಪದಲ್ಲಿ ಹೂಡಿಕೆ ಮಾಡಲು ಅತ್ಯುತ್ತಮವಾದ ಸಮಯವಾಗಿದೆ'' ಎಂದು ಬೊಟ್ಟು ಮಾಡುತ್ತಾರೆ ಗೋವಿಂದರಾಜು.

ಇನ್ನಷ್ಟು ವಿವರಣೆ ನೀಡಿದ ಸುರೇಶ್ ಹರಿ, ಕ್ರೆಡಾಯ್ ಬೆಂಗಳೂರಿನ ಕಾರ್ಯದರ್ಶಿಗಳು, "ಕಳೆದ ನಾಲ್ಕು ತ್ರೈಮಾಸಿಕಗಳ ನಿಧಾನ ಪ್ರಗತಿಯ ಬಳಿಕ, ಈ ಕ್ಷೇತ್ರವು ಈಗ, ನಿರ್ದಿಷ್ಟವಾಗಿ ಬ್ಯಾಂಕ್ ದರ ಕಡಿಮೆಯಾದ ಬಳಿಕ ಉತ್ತಮ ಪಿಕ್‍ಅಪ್ ಕಂಡಿದೆ. ಕಚ್ಚಾತೈಲದ ಬೆಲೆಯಿಂದಾಗಿ ಒಟ್ಟಾರೆ ಹಣದುಬ್ಬರದ ಇಳಿಕೆಯು ರಿಯಲ್ ಎಸ್ಟೇಟ್ ಸಹಿತ ಎಲ್ಲಾ ಕ್ಷೇತ್ರಗಳಿಗೆ ನಿಧಿಯ ಹರಿವಿಗೆ ಕೊಡುಗೆ ನೀಡಿದೆ'' ಎಂದು ಹೇಳಿದರು.

ಎರಡನೇ ತ್ರೈಮಾಸಿಕದ ವೇಳೆಗೆ ಗೃಹ ಹಣಕಾಸು ದರ ಇಳಿಕೆಯಾಗುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು. "ಬೆಂಗಳೂರಿನ ಡೆವಲಪರ್‍ಗಳು ಕಳೆದ ಒಂದು ವರ್ಷದಿಂದ ದರವನ್ನು ಹಿಡಿದಿಡುತ್ತಲೇ ಬಂದಿದ್ದಾರೆ ಮತ್ತು ಮುಂದಿನ 6 ರಿಂದ 9 ತಿಂಗಳಲ್ಲಿ ಬೆಲೆ ಏರುವ ನಿರೀಕ್ಷೆ ಇದೆ'' ಎಂದು ಅವರು ಹೇಳಿದರು.

ಗೃಹ ಖರೀದಿದಾರರಿಗೆ, ಇದು ಹೂಡಿಕೆ ಮಾಡಲು ಅತ್ಯುತ್ತಮ ಸಮಯ ಎಂದು ಎಂದು ಹೇಳಿದ ಶ್ರೀ ಸುರೇಶ್ ಹರಿ, ಯಾವುದೇ ಕ್ಲೋಶರ್ ಈಗ ವೆಚ್ಚದ ಅನುಕೂಲದ ದೃಷ್ಟಿಯಿಂದ ಉತ್ತಮ ರಿಟರ್ನ್ಸ್ ಕಾಣಬಹುದು ಎಂದರು. ಬಡ್ಡಿ ದರದ ಇಳಿಕೆಯ ನಿರೀಕ್ಷೆ ದೊಡ್ಡ ಮಟ್ಟದಲ್ಲಿ ಇದೆ'' ಎಂದು ಅವರು ವಿವರಿಸಿದರು.

 CREDAI 2015 Expo
ರಿಯಾಲ್ಟಿ ಎಕ್ಸ್ ಪೋ
ಕ್ರೆಡಾಯ್ ರಿಯಾಲ್ಟಿ ಎಕ್ಸ್ ಪೋ ಕುರಿತು ಮಾತನಾಡಿದ ಅನಿಲ್ ನಾಯಕ್, ಸಿಇಒ, ಕ್ರೆಡಾಯ್ ಬೆಂಗಳೂರು, ಈ ಪ್ರಾಪರ್ಟಿ ಶೋನಲ್ಲಿ ಪ್ರತಿಯೊಬ್ಬರಿಗೂ ಏನಾದರೂ ಒಂದು ಇದ್ದೇ ಇದೆ ಎಂದು ಹೇಳಿದರು. ನಮ್ಮ ಕ್ರೆಡಾಯ್ ಡೆವರ್ ಗಳ 8 ಲಕ್ಷ ರೂ.ಗಳ ಸೈಟ್ ಮತ್ತು 23 ಲಕ್ಷ ರೂ.ಗಳ ಮೇಲ್ಪಟ್ಟ ಅಪಾರ್ಟ್ ಮೆಂಟ್ ಗಳ ಪ್ರಾಜೆಕ್ಟ್ ಗಳೊಂದಿಗೆ ಸಂದರ್ಶಕರು ಆಯ್ಕೆಗೆ ವಿಶಾಲ ಶ್ರೇಣಿಯನ್ನು ಹೊಂದಿರುತ್ತಾರೆ.

ನಮ್ಮ ನಗರದ ಎಲ್ಲಾ ಭಾಗದ ಯೋಜನೆಗಳ ಸಮಗ್ರ ಪಟ್ಟಿಯನ್ನು ಸಂದರ್ಶಕರಿಗೆ ನಾವು ಒದಗಿಸುತ್ತೇವೆ. ಇದು ಗೃಹ ಖರೀದಾರರು ಹಾಗೂ ಆಸ್ತಿ ಖರೀದಿದಾರರ ಆಯ್ಕೆಗೆ ಒಂದು ಎನ್ ಸೈಕ್ಲೋಪೀಡಿಯಾ ಇದ್ದಂತಿರುತ್ತದೆ. ಅತ್ಯಂತ ಮುಖ್ಯವಾಗಿ, ಭಾವಿ ಗೃಹ ಖರೀದಿದಾರರು ಒಂದೇ ಸೂರಿನಡಿ ವಿವಿಧ ಡೆವಲಪರ್ ಗಳ ಜತೆ ನೇರವಾಗಿ ಚರ್ಚಿಸುತ್ತಾರೆ'' ಎಂದು ಹೇಳಿದರು. ಹೆಚ್ಚಿನ ವಿವರಗಳಿಗೆ ದಯವಿಟ್ಟು ಕರೆ ಮಾಡಿ 99645 92255 ಅಥವಾ ವೆಬ್ ಸೈಟ್ ಗೆ ಭೇಟಿ ನೀಡಿ. (ಒನ್ಇಂಡಿಯಾ ಬಿಜಿನೆಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+