• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ಲಾಸ್ಟಿಕ್ ರಸ್ತೆ ನಿರ್ಮಾಣ; 5 ಟನ್ ಪ್ಲಾಸ್ಟಿಕ್ ಕೊಟ್ಟ ಬಿಬಿಎಂಪಿ

|

ಬೆಂಗಳೂರು, ಆಗಸ್ಟ್ 26 : ಬೆಂಗಳೂರು ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಬಿಬಿಎಂಪಿ ಬಿಐಎಂಎಲ್‌ಗೆ 5 ಟನ್ ಪ್ಲಾಸ್ಟಿಕ್ ಹಸ್ತಾಂತರ ಮಾಡಿದೆ.

ಬಿಐಎಎಲ್ ಸಂಸ್ಥೆ ವಿಮಾನ ನಿಲ್ದಾಣದ ಪಥ (ರನ್ ವೇ) ಹಾಗೂ ರಸ್ತೆಗಳಿಗೆ ಪ್ಲಾಸ್ಟಿಕ್ ಬಳಕೆ ಮಾಡಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿದೆ. ಬಿಬಿಎಂಪಿ ಜಪ್ತಿ ಮಾಡಿರುವ 5 ಟನ್ ಪ್ಲಾಸ್ಟಿಕ್‌ಅನ್ನು ಸೋಮವಾರ ಮೇಯರ್ ಹಸ್ತಾಂತರಿಸಿದರು.

ಮೇಯರ್‌ಗೆ ದಂಡ ಹಾಕಿದ ಬಿಬಿಎಂಪಿ, ಪ್ರಶಂಸೆಯ ಸುರಿಮಳೆ!

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ (ಬಿಐಎಎಲ್) ವಿಮಾನ ನಿಲ್ದಾಣದ ಟರ್ಮಿನಲ್-2 ಹಾಗೂ ವಿಮಾನ ನಿಲ್ದಾಣದ ವಿವಿಧ ರಸ್ತೆಗಳಿಗೆ ಪ್ಲಾಸ್ಟಿಕ್ ಬಳಕೆ ಮಾಡಲು ಮುಂದಾಗಿದೆ. ಈ ಸಂಬಂಧ ಅಗತ್ಯ ಪ್ಲಾಸ್ಟಿಕ್‌ಅನ್ನು ಬಿಬಿಎಂಪಿ ವತಿಯಿಂದ ಹಸ್ತಾಂತರಿಸಲಾಗಿದೆ.

ಏರ್‌ಪೋರ್ಟ್‌ ರಸ್ತೆ ಇನ್ಮುಂದೆ ಪ್ಲಾಸ್ಟಿಕ್ ರಸ್ತೆ, ಹೊಸತೇನಿದೆ?

ಮಾಧ್ಯಮಗಳ ಜೊತೆ ಮಾತನಾಡಿದ ಮೇಯರ್, "ವಿಮಾನ ನಿಲ್ದಾಣದ ಪಥ ಸೇರಿದಂತೆ 50 ಕಿ.ಮೀ ರಸ್ತೆ ನಿರ್ಮಾಣ ಮಾಡಲು 50,000 ಕೆ.ಜಿ. ಪ್ಲಾಸ್ಟಿಕ್ ಅಗತ್ಯವಿದ್ದು, ಬಿಬಿಎಂಪಿ ಸಹಕಾರ ನೀಡಬೇಕು ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮದ ಉಪಾಧ್ಯಕ್ಷರು ಬಿಬಿಎಂಪಿಗೆ ಪತ್ರ ಬರೆದಿದ್ದರು" ಎಂದರು.

ಅಕ್ಟೋಬರ್ 2ರಿಂದ ರೈಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬ್ಯಾನ್

"ಇಂದು ಸಾಂಕೇತಿಕವಾಗಿ 5 ಟನ್ ಪ್ಲಾಸ್ಟಿಕ್ ಬಿಇಐಎಲ್ ಸಂಸ್ಥೆಗೆ ಹಂಸ್ತಾಂತರ ಮಾಡಲಾಯಿತು. ಇನ್ನು ಅವಶ್ಯಕತೆಯಿರುವ ಪ್ಲಾಸ್ಟಿಕ್ ಹಂತ ಹಂತವಾಗಿ ಹಸ್ತಾಂತರಿಸಲಾಗುವುದು. ಈ ಹಿಂದೆ ನಗರದ ರಸ್ತೆ ಗುಂಡಿಗಳನ್ನು ಪ್ಲಾಸ್ಟಿಕ್ ಬಳಕೆ ಮಾಡಿ ಮುಚ್ಚಲಾಗಿತ್ತು" ಎಂದು ಮೇಯರ್ ಹೇಳಿದರು.

ಬಿಐಎಎಲ್ ಸಂಸ್ಥೆ 50 ಕಿ.ಮೀ ರಸ್ತೆಗೆ ಶೇ. 7 ರಿಂದ 8 ರಷ್ಟು ಪ್ಲಾಸ್ಟಿಕ್ ಬಳಕೆ ಮಾಡಿ ಡಾಂಬರೀಕರಣ ಮಾಡಲು ಮುಂದಾಗಿದೆ. ಅದರಂತೆ ಪಾಲಿಕೆ ಜಪ್ತಿ ಮಾಡಿರುವ ಪ್ಲಾಸ್ಟಿಕ್ ಅನ್ನು ಬಿಇಐಲ್ ಸಂಸ್ಥೆಗೆ ಉಚಿತವಾಗಿ ಹಸ್ತಾಂತರಿಸಲಾಗಿದೆ.

ನಗರದಲ್ಲಿ ಪ್ರತಿನಿತ್ಯ 5,800 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದರಲ್ಲಿ ಶೇ. 10 ರಿಂದ 15 ರಷ್ಟು ಪ್ಲಾಸ್ಟಿಕ್ ಉತ್ಪತ್ತಿ ಆಗುತ್ತಿದೆ. ಎಲ್ಲಾ ರೀತಿಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡಬಹುದಾಗಿದೆ.

ಪ್ಲಾಸ್ಟಿಕ್ ಬಳಕೆ ಮಾಡಿ ರಸ್ತೆ ನಿರ್ಮಾಣ ಮಾಡಿದರೆ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಬಿಐಎಎಲ್ ರಸ್ತೆ ನಿರ್ಮಾಣ ಮಾಡಿದ ಬಳಿಕ ಪಾಲಿಕೆ ಇಂಜಿನಿಯರ್‌ಗಳನ್ನು ಸ್ಥಳಕ್ಕೆ ಕಳುಹಿಸಿ ರಸ್ತೆ ಪರಿಶೀಲನೆ ಮಾಡಿ, ಪಾಲಿಕೆ ರಸ್ತೆಗಳನ್ನು ಅದೇ ರೀತಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆದಿದೆ.

English summary
BBMP mayor Gangambike Mallikarjun handover the 5 ton of Plastic to BIAL to construct road for airport. BIAL will use plastic in the 50 km road work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X