ನಂದಿಬೆಟ್ಟದಲ್ಲಿ ರಸ್ತೆ ಒಂದು ಬಿಟ್ಟು, ಉಳಿದ ಅಭಿವೃದ್ಧಿಯೇ ಶೂನ್ಯ
ಬೆಂಗಳೂರು, ಏ.17: ಸರ್ಕಾರಿ ಇಲಾಖೆಗಳ ಗೊಂದಲದಲ್ಲಿ ನಂದಿಬೆಟ್ಟದ ಅಭಿವೃದ್ಧಿ ಕುಂಠಿತವಾಗಿದೆ.
ನಂದಿಬೆಟ್ಟದಲ್ಲಿ ಎಂಟ್ರಿ ಪ್ಲಾಜಾ, ಪ್ರವಾಸಿಗರಿಗೆ ಮಾಹಿತಿ ಕೇಂದ್ರ, ಆಹಾರ ಕೇಂದ್ರಗಳನ್ನು ತೆರೆಯುವ ಯೋಜನೆ ಆರಂಭಕ್ಕೆ ಇನ್ನೂ ಕಾಲ ಕೂಡಿಬಂದಿಲ್ಲ.
ದಿನನಿತ್ಯ ಸಾವಿರಾರು ಮಂದಿ ನಂದಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಅಲ್ಲಿರುವ ಫುಡ್‌ಕೋರ್ಟ್‌ಗಳಲ್ಲಿ ನಗದು ನೀಡಿಯೇ ಆಹಾರ ಪಡೆಯಬೇಕಾಗಿದೆ, ಪೇಟಿಎಂ, ಗೂಗಲ್ ಪೇ, ಕ್ರೆಡಿಟ್, ಡೆಬಿಟ್ ಕಾರ್ಡ್ ಯಾವುದೂ ಉಪಯೋಗಕ್ಕೆ ಬರುವುದಿಲ್ಲ.

ನಂದಿಬೆಟ್ಟಕ್ಕೆ ಬರುವ ರಸ್ತೆಯನ್ನು ಮಾತ್ರ ರಿಪೇರಿ ಮಾಡಿದ್ದಾರೆಯೇ ವಿನಃ , ನಂದಿಬೆಟ್ಟದೊಳಗೆ ಯಾವುದೇ ಅಭಿವೃದ್ಧಿಯಾಗಿಲ್ಲ. ಇಂಟೆಕ್ ಕೆಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆಗೆ ಹಲವು ಬಾರಿ ವರದಿ ಸಲ್ಲಿಕೆ ಮಾಡಿದೆ. ಇದುವರೆಗೂ ಅನುಮತಿ ದೊರೆತಿಲ್ಲ. ಯೋಜನೆ 2017ರಲ್ಲೇ ಆರಂಭವಾಗಿತ್ತು.
ಪ್ರವಾಸೋದ್ಯಮ, ತೋಟಗಾರಿಕೆ, ಪುರಾತತ್ವ ಇಲಾಖೆ ಈ ಮೂರು ಇಲಾಖೆ ವ್ಯಾಪ್ತಿಗೆ ನಂದಿ ಬೆಟ್ಟ ಸೇರುತ್ತದೆ. ಆ ಇಲಾಖೆಯ ನಡುವೆ ಹೊಂದಾಣಿಕೆ ಕೊರತೆ ಇರುವುದರಿಂದ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದೆ ಎನ್ನುವುದು ಕೆಲವರ ವಾದವಾಗಿದೆ.ಎಲ್ಲವೂ ಇದೆ ಆದರೆ ನಿರ್ವಹಣೆ ಸಮರ್ಪಕವಾಗಿಲ್ಲ, ಚೆಂದದ ಗಿಡಗಳನ್ನು ನೆಟ್ಟಿದ್ದಾರೆ ಆದರೆ ನಿರ್ವಹಣೆ, ನೀರು ಇಲ್ಲದೆ ಸತ್ತು ಹೋಗಿವೆ. ಎಲ್ಲೆಲ್ಲೂ ಪ್ಲಾಸ್ಟಿಕ್ ಕವರ್‌ಗಳು, ಬಾಟಲಿಗಳೇ ಬಿದ್ದಿವೆ.ನಂದಿಬೆಟ್ಟಕ್ಕೆ ಬರುವ ರಸ್ತೆಯನ್ನು ಮಾತ್ರ ರಿಪೇರಿ ಮಾಡಿದ್ದಾರೆಯೇ ವಿನಃ , ನಂದಿಬೆಟ್ಟದೊಳಗೆ ಯಾವುದೇ ಅಭಿವೃದ್ಧಿಯಾಗಿಲ್ಲ.
ನಂದಿ ಬೆಟ್ಟವು ಡೆಸ್ಟಿನೇಷನ್ ಡೆವಲಾಪ್‌ಮೆಂಟ್ ಯೋಜನೆಯಡಿ ಅಭಿವೃದ್ಧಿಗೊಳ್ಳುತ್ತಿದೆ. ಮಾಸ್ಟರ್ ಪ್ಲಾನ್ ಪ್ರಕಾರ ಕಾಯುವ ಹಾಗೂ ಟಿಕೆಟ್ ನೀಡುವ ಎಂಟ್ರಿ ಪ್ಲಾಜಾ, ಬಸ್ ನಿಲ್ದಾಣ, ಆಹಾರ ಕೇಂದ್ರ ನಿರ್ಮಾಣ ಕುರಿತಂತೆ ಪ್ರವಾಸೋಸ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಡೆಸ್ಟಿನೇಷನ್ ಡೆವಲಾಪ್ ಮೆಂಟ್ ಯೋಜನೆಯಲ್ಲಿ ಕರ್ನಾಟಕದ 20 ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.ಅದರಲ್ಲಿ ನಂದಿ ಬೆಟ್ಟ, ಬೀದರ್ ಕೋಟೆ, ಕಲಬುರಗಿ ಕೋಟೆ, ಸನ್ನತಿ, ವಿಜಯಪುರ, ಬಾದಾಮಿ-ಐಹೊಳೆ-ಪಟ್ಟದಕಲ್ಲು, ಹಂಪಿ-ಆನೇಗುಂಡಿ, ಚಿತ್ರದುರ್ಗ ಕೋಟೆ, ಶ್ರೀರಂಗಪಟ್ಟಣ, ಮೇಲುಕೋಟೆ, ಶ್ರವಣಬೆಳಗೊಳ, ದೇವನಹಳ್ಳಿ ಕೋಟೆ ಸೇರಿದಂತೆ ಇನ್ನಿತರೆ ಪ್ರದೇಶಗಳ ಅಭಿವೃದ್ಧಿ ಮಾಡಬೇಕಿದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications