Get Updates
Get notified of breaking news, exclusive insights, and must-see stories!

ಬಿಎಂಟಿಸಿಯಲ್ಲಿ ಮಹಿಳೆಯರಿಗಾಗಿ "ಗುಲಾಬಿ ಆಸನ'

ಬೆಂಗಳೂರು, ನವೆಂಬರ್ 29 : ಬಿಎಂಟಿಸಿ ಬಸ್ ನಲ್ಲಿ ಮಹಿಳಾ ಆಸನಗಳನ್ನು ಪುರುಷರು ಆಕ್ರಮಿಸಿಕೊಳ್ಳುವುದನ್ನು ತಡೆಯುವ ದೃಷ್ಟಿಯಿಂದ ನಿಗಮದ ಎಲ್ಲ ಬಸ್ ಗಳಲ್ಲಿ ಮಹಿಳಾ ಮೀಸಲು ಆಸನಗಳಿಗೆ ಗುಲಾಬಿ ಬಣ್ಣ ಅಳವಡಿಸಲು ನಿರ್ಧರಿಸಲಾಗಿದೆ.

ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಈ ಯೋಜನೆ ಪ್ರಕಟಿಸಿದ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಅವರು, ಮಹಿಳಾ ಮೀಸಲು ಆಸನದಲ್ಲಿ ಕೂರುವ ಪುರುಷ ಪ್ರಯಾಣಿಕರಿಗೆ ದಂಡ ವಿಧಿಸುತ್ತಿದ್ದರೂ ಕೆಲ ಕಡೆ ಜಗಳಗಳು ಉಂಟಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಈ ಪಿಂಕ್ ಆಸನ ಅಳವಡಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸಾರಿಗೆ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ಬಸ್ ಗಳಲ್ಲೂ ಪಿಂಕ್ ಆಸನ ಅಳವಡಿಸುವ ಚಿಂತನೆಯಿದೆ. ಅಲ್ಲದೆ ಖಾಸಗಿ ಬಸ್ ಗಳಲ್ಲೂ ಮಹಿಳೆಯರಿಗಾಗಿ ಗುಲಾಬಿ ಬಣ್ಣದ ಆಸನ ಅಳವಡಿಸುವಂತೆ ಎಚ್.ಎಂ. ರೇವಣ್ಣ ಸೂಚಿಸಿರುವುದಾಗಿ ಹೇಳಿದ್ದಾರೆ.

Pink seat for Women in BMTC Buses: Coming soon

ಬಡ ಜನರಿಗೆ ಕಡಿಮೆ ದರದಲ್ಲಿ ಊಟ-ತಿಂಡಿ ನೀಡುವ ಇಂದಿರಾ ಕ್ಯಾಂಟೀನ್ ನಂತರ ಮತ್ತೆ ಇಂದಿರಾ ಹೆಸರಿನಲ್ಲಿ ಮೂರು ಯೋಜನೆಗಳು ಘೋಷಣೆಯಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ಮೂರು ಹೊಸ ಯೋಜನೆಗಳನ್ನು ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ನಿಗಮ ಜಾರಿಗೆ ತರುತ್ತಿದೆ.

ಅವು-ಬಸ್ ನಿಲ್ದಾಣದಲ್ಲಿ ವೈದ್ಯೋ ಉಪಚಾರ ನೀಡುವ ಇಂದಿರಾ ಟ್ರಾನ್ಸಿಟ್ ಕ್ಲಿನಿಕ್, ಮಹಿಳಾ ಉದ್ಯೋಗಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಸೇವೆ ನೀಡುವ ಇಂದಿರಾ ಸಾರಿಗೆ ಹಾಗೂ ಕಟ್ಟಡ ನಿರ್ಮಾಣದಲ್ಲಿ ತೊಡಗುವ ಕಾರ್ಮಿಕ ಮಹಿಳೆಯರಿಗೆ ಇಂದಿರಾ ಪಾಸ್ ಯೋಜನೆ ಜಾರಿಗೆ ಬರಲಿದೆ.

ಇಂದಿರಾ ಗಾಂಧಿ ಅವರ ಜನ್ಮಶತಾಬ್ಧಿ ಹಿನ್ನೆಲೆಯಲ್ಲಿ ಈ ಮೂರು ಯೋಜನೆಗಳಿಗೂ ಇಂದಿರಾ ಹೆಸರಿಡಲಾಗಿದೆ. ಇಂದಿರಾ ದೇಶದ ಪ್ರಧಾನಿಯಾಗಿ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೆ ನಾನು ರಾಜಕೀಯ ಪ್ರವೇಶಿಸಲು ಅವರೇ ಪ್ರೇರಣೆಯಾಗಿದ್ದರು ಎಂದರು.

ಡಿ.2ಕ್ಕೆ ಇಂದಿಯಾ ಕ್ಲಿನಿಕ್ ಉದ್ಘಾಟನೆ: ಬಿಎಂಟಿಸಿ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಬಿಎಂಟಿಸಿಯ ಮೆಜೆಸ್ಟಿಕ್ ಮತ್ತು ಯಶವಂತಪುರ ಟಿಟಿಎಂಸಿಯಲ್ಲಿ ಇಂದಿರಾ ಟ್ರಾನ್ಸಿಟ್ ಕ್ಲಿನಿಕ್ ನಿರ್ಮಿಸಲಾಗಿದೆ.

ಕೇಂದ್ರ, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ನಿರ್ಮಿಸಲಾಗಿದ್ದು ಡಿ.2ರಂದು ಸಚಿವ ರಮೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇಂದಿರಾ ಸಾರಿಗೆ ಹಾಗೂ ಇಂದಿರಾ ಬಸ್ ಪಾಸ್ ಯೋಜನೆಯನ್ನು ಕೂಡ ಶೀಘ್ರ ಅನುಷ್ಠಾನಕ್ಕೆ ಬರಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+