• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಲ್ಟಿಪ್ಲೆಕ್ಸ್ ಗಳಿಗೆ ಹೊರಗಿನ ಆಹಾರ ಪದಾರ್ಥ; ಹೈ ಕೋರ್ಟ್ ಗೆ ಪಿಐಎಲ್

|

ಬೆಂಗಳೂರು, ಸೆಪ್ಟೆಂಬರ್ 26: ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್ ಗಳಲ್ಲಿ ಆಹಾರ ಪದಾರ್ಥ ಹಾಗೂ ಪಾನೀಯಗಳನ್ನುಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಹಾಗೂ ಹೊರಗಿನ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡದಿರುವ ವಿರುದ್ಧ ಕರ್ನಾಟಕ ಹೈ ಕೋರ್ಟ್ ನಲ್ಲಿ ನೆಲಮಂಗಲದ ಆದಿನಾರಾಯಣ್ ಶೆಟ್ಟಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಇರುವ ಶಾಪಿಂಗ್ ಮಾಲ್/ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್ ಗಳಲ್ಲಿ ಆಹಾರ ಪದಾರ್ಥ ಹಾಗೂ ಪಾನೀಯಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಜತೆಗೆ ತಮ್ಮದೇ ಆಹಾರ ಪದಾರ್ಥವನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡುತ್ತಿಲ್ಲ. ಇದರಿಂದ ಮುಖ್ಯವಾಗಿ ಹಿರಿಯರಿಗೆ ಹಾಗೂ ಮಕ್ಕಳಿಗೆ ಸಮಸ್ಯೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಮಲ್ಟಿಪ್ಲೆಕ್ಸ್ ಗಳಲ್ಲಿ ವಸೂಲಿ: ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆ

ಮಲ್ಟಿಪ್ಲೆಕ್ಸ್ ಗಳಲ್ಲಿ ಪಾಪ್ ಕಾರ್ನ್ ಅನ್ನು ಮುನ್ನೂರಕ್ಕೂ ಹೆಚ್ಚು ಮೊತ್ತಕ್ಕೆ, ಇನ್ನು ಕೂಲ್ ಡ್ರಿಂಕ್ಸ್ ಅನ್ನು ಇನ್ನೂರೈವತ್ತಕ್ಕೂ ಹೆಚ್ಚು ದರಕ್ಕೆ ಮಾರಲಾಗುತ್ತದೆ. ಇಷ್ಟು ಮೊತ್ತ ಕೊಟ್ಟು ಸಾಮಾನ್ಯ ವ್ಯಕ್ತಿಗೆ ಖರೀದಿಸಲು ಸಾಧ್ಯವೇ? ಜತೆಗೆ ಈ ಆಹಾರ ಪದಾರ್ಥಗಳು-ಪಾನೀಯ ಯುವ ಸಮುದಾಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದಿದ್ದಾರೆ.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಮೂರು ಗಂಟೆ ಕಾಲ ಒಂದು ಸಿನಿಮಾ ನೋಡಲು ತೆರಳುವಾಗ ಹೊರಗಿನ ಆಹಾರ ತರದಿರುವಂತೆ ನಿಯಮ ಮಾಡುವುದು ಹಾಗೂ ಅತಿ ಹೆಚ್ಚಿನ ದರ ವಿಧಿಸಿದ್ದನ್ನೇ ಖರೀದಿಸಬೇಕು ಎಂದು ತಾಕೀತು ಮಾಡುವುದು ಸರಿಯಲ್ಲ. ಇನ್ನು ಅನಾರೋಗ್ಯ ಸಮಸ್ಯೆ ಇರುವ ಕೆಲವರಿಗೆ ಮನೆಯ ಆಹಾರವನ್ನೇ ಸೇವಿಸಬೇಕು ಎಂಬ ವೈದ್ಯಕೀಯ ಸಲಹೆ ಇರುತ್ತದೆ. ಮಕ್ಕಳಿಗೆ ಮನೆಯಿಂದ ಹಾಲು ತರಬೇಕಾಗುತ್ತದೆ. ಅದನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿನ್ನು ಮಲ್ಟಿಪ್ಲೆಕ್ಸ್ ಗಳಿಗೆ ಹೊರಗಿನ ಆಹಾರ ಪ್ರವೇಶ, ಕರ್ನಾಟಕದಲ್ಲಿ?

ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು, ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್ ಗಳಿಗೆ ಹೊರಗಿನ ಆಹಾರ ಪದಾರ್ಥ ತೆಗೆದುಕೊಂಡು ಹೋಗಲು ಅನುಕೂಲ ಆಗುವಂತೆ ಕೋರ್ಟ್ ನಿಂದ ಸೂಚನೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

English summary
Adinanarayan Shetty, resident of Nelamangala filed Public Interest Litigation against the rules made in Bengaluru and other part of Karnataka multiplex cinema hall related to food & Beverages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X