ಬೆಂಗಳೂರು : ಮಂಗಳವಾರ ಮುಂಜಾನೆಯ ಮಳೆಯ ಚಿತ್ರಗಳು

ಬೆಂಗಳೂರು, ಮಾ.3 : ಸಿಲಿಕಾನ್ ಸಿಟಿ ಬೆಂಗಳೂರು ಮಂಗಳವಾರ ಮುಂಜಾನೆ ಸುರಿದ ಮಳೆಯಿಂದಾಗಿ ತಂಪಾಗಿದೆ. ಬೆಳ್ಳಂಬೆಳಗ್ಗೆ ಸುರಿದ ಮಳೆ ಜನರಿಗೆ ಕಿರಿ-ಕಿರಿ ಉಂಟುಮಾಡಿದೆ. ಇನ್ನೂ ಮೂರು ದಿನ ನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮೆಜೆಸ್ಟಿಕ್, ಯಶವಂತಪುರ, ಮಲ್ಲೇಶ್ವರಂ, ವಿಲ್ಸನ್ ಗಾರ್ಡನ್, ನಾಗರಭಾವಿ, ಜ್ಞಾನ ಭಾರತಿ, ಮಾಗಡಿ ರೋಡ್, ಕೆಂಗೇರಿ, ಬನಶಂಕರಿ, ಜಯನಗರ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಮಂಗಳವಾರ ಮುಂಜಾನೆ ಮಳೆ ಸುರಿದಿದೆ. [ಬೆಂಗಳೂರಿಗೆ ಗುಡ್ ಮಾರ್ನಿಂಗ್ ಹೇಳುತ್ತಿರುವ ಮಳೆ]

ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶ ಮತ್ತು ಅಂಡರ್ ಪಾಸ್‌ಗಳಲ್ಲಿ ನೀರು ತುಂಬಿಕೊಂಡು ಜನರು ಪರದಾಡುವಂತಾಯಿತು. ಮಳೆಯ ನೀರು ರಸ್ತೆಗಳಲ್ಲಿ ನಿಂತು ಬೆಂಗಳೂರಿನ ರಸ್ತೆಯ ಹೊಂಡಗಳ ದರ್ಶನವನ್ನು ವಾಹನ ಸವಾರರಿಗೆ ಮಾಡಿಸಿದವು. [ಕರ್ನಾಟಕದಲ್ಲಿ ಅಕಾಲಿಕ ಮಳೆ, ಯಾಕೆ ಹೀಗೆ?]

ಕನ್ಯಾಕುಮಾರಿಯಿಂದ ಮೇಲ್ಮೈ ಸುಳಿಗಾಳಿ ದಕ್ಷಿಣ ಒಳನಾಡಿನತ್ತ ಪ್ರವೇಶಿಸುತ್ತಿದ್ದು ಇದರಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ ಎಂದು ಹಮಾವಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ ಮೂರು ದಿನ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಮಳೆಯಾಗುವ ಸಾಧ್ಯತೆ ಇದೆ ಎಂದು ಮನ್ಸೂಚನೆ ನೀಡಿದೆ.

ಮಂಗಳವಾರ ಮುಂಜಾನೆ ಮಳೆ

ಮಂಗಳವಾರ ಮುಂಜಾನೆ ಮಳೆ

ಬೆಂಗಳೂರಿಗೆ ಮಂಗಳವಾರ ಮುಂಜಾನೆ ಮಳೆ ಗುಡ್ ಮಾರ್ನಿಂಗ್ ಹೇಳಿದೆ. ಬೆಳಗ್ಗೆ 5 ಗಂಟೆ ವೇಳೆಗೆ ನಗರದ ವಿವಿಧ ಪ್ರದೇಶಗಳಲ್ಲಿ ಮಳೆ ಆರಂಭವಾಗಿತ್ತು.

ಜನರಿಗೆ ಮಳೆ ತಂದ ಕಿರಿ-ಕಿರಿ

ಜನರಿಗೆ ಮಳೆ ತಂದ ಕಿರಿ-ಕಿರಿ

ಮಂಗಳವಾರ ಮುಂಜಾನೆಯ ಮಳೆ ಜನರಿಗೆ ಕಿರಿ-ಕಿರಿ ತಂದಿತು. ಜಾಗಿಂಗ್ ಹೋಗುವವರನ್ನು ಮಳೆ ಕಟ್ಟಿಹಾಕಿದರೆ. ಕಚೇರಿಗೆ ಹೊರಡುವವರನ್ನು ಹೇಗಪ್ಪಾ ಹೋಗೋದು? ಎನ್ನುವಂತೆ ಮಾಡಿತು.

ಎಲ್ಲೆಲ್ಲಿ ಮಳೆ ಬಂತು

ಎಲ್ಲೆಲ್ಲಿ ಮಳೆ ಬಂತು

ಮಂಗಳವಾರ ಬೆಳಗ್ಗೆ ಮೆಜೆಸ್ಟಿಕ್, ಯಶವಂತಪುರ, ಮಲ್ಲೇಶ್ವರಂ, ವಿಲ್ಸನ್ ಗಾರ್ಡನ್, ನಾಗರಭಾವಿ, ಜ್ಞಾನ ಭಾರತಿ, ಮಾಗಡಿ ರೋಡ್, ಕೆಂಗೇರಿ, ಬನಶಂಕರಿ, ಜಯನಗರ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಮಳೆ ಸುರಿದಿದೆ.

ಬೆಳ್ಳಂಬೆಳಗ್ಗೆ ಛತ್ರಿಗಾಗಿ ಹುಡುಕಾಟ

ಬೆಳ್ಳಂಬೆಳಗ್ಗೆ ಛತ್ರಿಗಾಗಿ ಹುಡುಕಾಟ

ಮಂಗಳವಾರ ಮುಂಜಾನೆ ಮಳೆ ಸುರಿದಿದ್ದರಿಂದ ಜನರು ಛತ್ರಿಗಾಗಿ ಹುಡುಕಾಟ ನಡೆಸಿದರು. ಹಾಲು ತರಲು ಹೋಗುವವರು, ಮಕ್ಕಳನ್ನು ಶಾಲೆಗೆ ಬಿಡಲು ಹೊರಟವರು, ತಕರಾರಿ ತರಲು ಹೊರಟವರು ಛತ್ರಿ ಹಿಡಿದು ಮನೆಯಿಂದ ಹೊರಬಂದರು.

ಬಿಎಂಟಿಸಿ ಬಸ್ ಸಿಕ್ಕಿದರೆ ಸಾಕಪ್ಪ

ಬಿಎಂಟಿಸಿ ಬಸ್ ಸಿಕ್ಕಿದರೆ ಸಾಕಪ್ಪ

ಮಂಗಳವಾರ ಮುಂಜಾನೆ ಮಳೆ ಸುರಿದಿದ್ದರಿಂದ ನಂತರ ಟ್ರಾಫಿಕ್ ಜಾಮ್ ಉಂಟಾಗುತ್ತದೆ ಎಂಬುದನ್ನು ಅರಿತ ಜನರು ಬೇಗ ಬಿಎಂಟಿಸಿ ಬಸ್ ಏರಿ ಪ್ರಯಾಣ ಆರಂಭಿಸಿದರು. ಅಂಡರ್‌ಪಾಸ್‌ಗಳಲ್ಲಿ ನೀರು ನುಗ್ಗಿ ಕೆಲವು ಕಡೆ ಸಂಚಾರಕ್ಕೂ ತೊಂದರೆ ಉಂಟಾಯಿತು.

ಇನ್ನೂ ಮೂರು ದಿನ ಮಳೆ

ಇನ್ನೂ ಮೂರು ದಿನ ಮಳೆ

ಕಳೆದ ಶನಿವಾರದಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಇನ್ನೂ ಮೂರು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೇಸಿಗೆಯಲ್ಲಿ ಮಳೆ ಏಕೆ?

ಬೇಸಿಗೆಯಲ್ಲಿ ಮಳೆ ಏಕೆ?

ಕನ್ಯಾಕುಮಾರಿಯಿಂದ ಮೇಲ್ಮೈ ಸುಳಿಗಾಳಿ ದಕ್ಷಿಣ ಒಳನಾಡಿನತ್ತ ಪ್ರವೇಶಿಸುತ್ತಿದ್ದು ಇದರಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ ಎಂದು ಹಮಾವಾನ ಇಲಾಖೆ ಮಾಹಿತಿ ನೀಡಿದೆ.

ಎಲ್ಲಿ ಎಷ್ಟು ಮಳೆ ಬಂತು

ಎಲ್ಲಿ ಎಷ್ಟು ಮಳೆ ಬಂತು

ಹಂಪಿ ನಗರದಲ್ಲಿ 52 ಮಿ.ಮೀ, ನಾಗರಭಾವಿಯಲ್ಲಿ 82 ಮಿ.ಮೀ, ಗಾಳಿ ಅಂಜನೇಯ ವಾರ್ಡ್‌ನಲ್ಲಿ 118 ಮಿ.ಮೀ, ಕಾಟನ್‍ಪೇಟೆಯಲ್ಲಿ 60 ಮಿ.ಮೀ, ಪುಲಕೇಶಿನಗರದಲ್ಲಿ 66 ಮಿ.ಮೀ ಮಳೆಬಂದಿದೆ.

ಮಳೆ ಬರುವ ಮನ್ಸೂಚನೆ ನೀಡಲಾಗಿತ್ತು

ಮಳೆ ಬರುವ ಮನ್ಸೂಚನೆ ನೀಡಲಾಗಿತ್ತು

ಕಳೆದ 15 ದಿನಗಳಲ್ಲಿ ನಗರದಲ್ಲಿ 35 ಡಿಗ್ರಿಗಿಂತ ಹೆಚ್ಚು ಬಿಸಿಲಿನ ತಾಪಮಾನ ದಾಖಲಾಗಿದ್ದರಿಂದ ಮಳೆಯಾಗಲಿದೆ ಎಂದು ಮನ್ಸೂಚನೆ ನೀಡಲಾಗಿತ್ತು. ಅದರಂತೆ ಶನಿವಾರದಿಂದ ನಗರದಲ್ಲಿ ಮಳೆಯಾಗುತ್ತಿದ್ದು, ಇನ್ನೂ ಮೂರು ದಿನ ಮುಂದುವರೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+