ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ 'PFI ಭಾಗ್ಯ' ಪೋಸ್ಟರ್ ಬಿಡುಗಡೆ ಮಾಡಿದ ಆರ್ ಅಶೋಕ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 03: ಕರ್ನಾಟಕ ರಾಜ್ಯದಲ್ಲಿ ಪೋಸ್ಟರ್ ವಾರ್ ಶುರುವಾಗಿದೆ. ಪೇ ಸಿಎಂ ಪೋಸ್ಟರ್‍‌ ಅನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಕ್ಕರ್ ನೀಡಿದೆ. ಸಿದ್ದರಾಮಯ್ಯರ ಪಿಎಫ್ಐ ಭಾಗ್ಯ ಎಂಬ ಪೋಸ್ಟರ್ ಅನ್ನು ಕಂದಾಯ ಸಚಿವ ಆರ್‍‌ ಅಶೋಕ್ ವಿಧಾನಸೌಧದಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶೊಕ್, "ಸಿದ್ದರಾಮಯ್ಯ ಅವರು ಅವರ ಪತ್ರಿಕಾ ಹೇಳಿಕೆಯಲ್ಲಿ PFI ನಿಷೇಧ ಬಗ್ಗೆ ಮೊದಲೇ ವರದಿ ನೀಡಿದ್ದೆ ಎಂದಿದ್ದಾರೆ. ನಾನು ಹೇಳಿದ ಬಳಿಕ ಬ್ಯಾನ್ ಮಾಡಿದ್ದಾರೆ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಇದೇ PFI, KFD ಬಗ್ಗೆ 1,600 ಕೇಸ್ ಹಾಕಿದ್ದರು. ಪೊಲೀಸರ ಮೇಲೆ, ಸಾರ್ವಜನಿಕರ ಮೇಲೆ ಹಲ್ಲೆ ಅಂತ ಕೇಸು ದಾಖಲಾಗಿತ್ತು.10-12-2012 ರಲ್ಲಿ ತನ್ವೀರ್ ಸೇಠ್ ಪತ್ರ ಬರೆದು PFI ಅಮಾಯಕರು, ಅವರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ. ಕೇಸ್ ವಾಪಸ್ ಪಡೆಯಬೇಕು ಅಂತ ಮನವಿ ಮಾಡುತ್ತಾರೆ. ತಸ್ಲೀಮಾ ನಸ್ರೀನ್ ಪುಸ್ತಕದ ಬಗ್ಗೆ ಇರೋ ಕೇಸ್ ಅದು. ಕಾಂಗ್ರೆಸ್ ನವರು ಅದನ್ನು ಮಾನ್ಯ ಮಾಡಲು ಅಂದಿನ DG/IGP ಸರ್ಕಾರಕ್ಕೆ ಸಲಹೆ ಕೇಳುತ್ತಾರೆ. ಯಾವುದೇ ಕಾರಣಕ್ಕೂ ಪ್ರಕರಣ ವಾಪಸ್ ಪಡೆಯಬಾರದು ಅಂತ ಪೋಲಿಸ್ ಇಲಾಖೆ ರಿಪೋರ್ಟ್ ಕೊಡುತ್ತದೆ.ಲಾ ಕಮಿಟಿ ಕೂಡ ವಾಪಸ್ ಪಡೆಯುವುದು ಸಮಾಜಕ್ಕೆ ಮಾರಕ ಎಂದು ವರದಿ ಕೊಡ್ತಾರೆ" ಎಂದು ಆರೋಪಿಸಿದರು.

ಸಿದ್ದರಾಮಯ್ಯ ಈ ಎಲ್ಲಾ 1,600 ಜನ ವಿಧ್ವಂಸಕ ಕೃತ್ಯ ಎಸಗಿದವರ ಮೇಲಿನ ಪ್ರಕರಣ ವಾಪಸ್ ಪಡೆಯುವ ಕೆಲಸ ಮಾಡ್ತಾರೆ. ಈಗ ಹೇಳಿ, ದೇಶದ್ರೋಹಿಗಳಿಗೆ ಬೆಂಬಲ ಕೊಟ್ಟಿಲ್ವಾ ಎಂದಿ ಕಂದಾಯ ಸಚಿವ ಅಶೋಕ್‌ ಪ್ರಶ್ನಿಸಿದ್ದಾರೆ.

ಆರ್ ಅಶೋಕ್ ಸಿದ್ದರಾಮಯ್ಯ ಮೇಲೆ ವಾಗ್ದಾಳಿ

ಆರ್ ಅಶೋಕ್ ಸಿದ್ದರಾಮಯ್ಯ ಮೇಲೆ ವಾಗ್ದಾಳಿ

ಆರ್ ಅಶೋಕ್ ಸಿದ್ದರಾಮಯ್ಯ ಮೇಲೆ ವಾಗ್ದಾಳಿಯನ್ನು ನಡೆಸಿದ್ದಾರೆ. "ಅಂದಿನ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಹೇಳಿದ್ದರು. ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯೋ ಪ್ರಶ್ನೆಯೇ ಇಲ್ಲ ಎಂದಿದ್ದರು. ಈಗ ಸಿದ್ದರಾಮಯ್ಯ ನಾವೇ ಹೇಳಿದ್ದು ಬ್ಯಾನ್ ಮಾಡೋಕೆ ಅಂತಿದಾರೆ. ಇವರದ್ದು ಗೋಸುಂಬೆ ವರ್ತನೆ ಅಲ್ಲವೇ" ಎಂದು ಆರ್ ಅಶೋಕ್ ಪ್ರಶ್ನಿಸಿದ್ದಾರೆ.

 ಪಿಎಫ್ಐ ಟ್ರೈನಿಂಗ ನೀಡಿದೆ

ಪಿಎಫ್ಐ ಟ್ರೈನಿಂಗ ನೀಡಿದೆ

ರಾಜ್ಯದಲ್ಲಿ ಬರ್ಬರವಾಗಿ ಹತ್ಯೆಗೀಡಾದ ಕುಟ್ಟಪ್ಪ, ರುದ್ರೇಶ್, ಮಡಿವಾಳ ಇವರ ಹತ್ಯೆ ಬಳಿಕ ಕೇಸ್ ಹಾಕಲು ಹಿಂಜರಿದರು. ಇದೆಲ್ಲವನ್ನೂ ನೋಡಿದರೇ ಕಾಂಗ್ರೆಸ್ ಈಗ ಸೂತಕದ ಮನೆಯಾಗಿದೆ. ಕೊಡಗು, ಮೈಸೂರು, ಮಂಗಳೂರಿನಲ್ಲಿ ಇವರಿಗೆ ವಿದೇಶಿ ಟ್ರೈನಿಂಗ್ ನೀಡಲಾಗಿದೆ ಎನ್ನುವ ಮಾಹಿತಿ ಅಧಿಕೃತವಾಗಿದೆ. ಬೈಕಲ್ಲಿ ಹೋಗುವಾಗ ಹೇಗೆ ಕತ್ತು ಕಡಿಯಬೇಕು, ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆ ಹೇಗೆ ಮಾಡಬೇಕು ಎಂದು ಪಿಎಫ್ಐ ಟ್ರೈನಿಂಗ ನೀಡಿದೆ ಎಂದು ಅಶೋಕ್ ತಿಳಿಸಿದರು.

 ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು

ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು

ಕೇರಳ ನಿವೃತ್ತ ಪೊಲೀಸರು ಬಂದು ಹೇಗೆ ಕೇಸ್ ಆಗದ ರೀತಿ ಹತ್ಯೆ ಮಾಡಬೇಕು ಅಂತ ಟ್ರೈನಿಂಗ್ ನೀಡಿರೋ ಬಗ್ಗೆ ವರದಿಯಾಗಿದೆ. ಹೀಗಿರುವಾಗ ಸಿದ್ದರಾಮಯ್ಯ ನಾವೇ ಹೇಳಿದ್ದು, ಅದಕ್ಕೆ ಬ್ಯಾನ್ ಮಾಡಿದೆ ಅಂತ ಹೇಳಿಕೊಳ್ತಾರೆ. ಅವರಿಗೆ ನಾಚಿಕೆಯಾಗಬೇಕು. ಕೂಡಲೇ ಕ್ಷಮೆ ಕೇಳಬೇಕು ಅಂತ ಅಶೋಕ್ ಒತ್ತಾಯಿಸಿದರು.

 ಸಿದ್ದುPFI ಭಾಗ್ಯ ಸಹ ನೀಡಿದ್ದಾರೆ

ಸಿದ್ದುPFI ಭಾಗ್ಯ ಸಹ ನೀಡಿದ್ದಾರೆ

PFI ನವರು ಇರುವ 175 ಕೇಸ್ ದಾಖಲಾಗಿದೆ. ಅವರಿಂದ ಪ್ರಾಯೋಜಿತರಾದ KFD ಭಾಗಿಯಾಗಿರೋ ಕೇಸ್ ಇದೆ. ಸಿದ್ದರಾಮಯ್ಯ ಹಲವು ಭಾಗ್ಯ ನೀಡಿದ್ದಾರೆ. PFI ಭಾಗ್ಯ ಸಹ ನೀಡಿದ್ದಾರೆ ಎನ್ನುವುದು ಈಗ ಅರ್ಥವಾಗುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಪೋಸ್ಟರ್ ವಾರ್ ಅಂತು ಮುಂದುವರೆದಿದೆ.

English summary
Poster war has started in Karnataka state. BJP has hit out at former CM Siddaramaiah for not digesting Pay CM poster. Siddaramaiah's PFI Bhagya poster released by Revenue Minister R Ashok at Vidhan Souda, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X