ಲಾಂಗ್ ತೋರಿಸಿ ಪೆಟ್ರೋಲ್ ಬಂಕ್ ನಲ್ಲಿ ದರೋಡೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರು, ಜು. 03: ಲಾಕ್ ಡೌನ್ ಸಡಿಲವಾಗುತ್ತಿದ್ದಂತೆ ರಾಜಧಾನಿಯಲ್ಲಿ ಪಾತಕಿಗಳು ಬಾಲ ಬಿಚ್ಚುತ್ತಿದ್ದಾರೆ. ಪೆಟ್ರೋಲ್ ಬಂಕ್ ಗೆ ನುಗ್ಗಿದ ಕಿರಾತಕರು ಮಚ್ಚು ಲಾಂಗ್ ಝಳಪಿಸಿದ್ದಾರೆ. ಮುಸುಕುದಾರಿಗಳ ಉಪಟಳಕ್ಕೆ ಹೆದರಿ ಪೆಟ್ರೋಲ್ ಬಂಕ್ ಸಿಬ್ಬಂದಿ ಓಡಿ ಹೋಗಿ ಜೀವ ರಕ್ಷಿಸಿಕೊಂಡಿದ್ದಾರೆ. ಅಂದಹಾಗೆ ಬೆಂಗಳೂರಿನ ಹೃದಯ ಭಾಗದಲ್ಲಿ ನಡೆದಿರುವ ಈ ಘೋರ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜೀವ ರಕ್ಷಿಸಿಕೊಳ್ಳಲು ಸಿಬ್ಬಂದಿ ಪರದಾಡುವ ಸಿಸಿಕ್ಯಾಮರಾ ದೃಶ್ಯ ವೈರಲ್ ಆಗಿದೆ.
ಮುಸುಕುದಾರಿಗಳಿಂದ ರಾಬರಿ: ಭಾರತಿನಗರದಲ್ಲಿ ವಿನೋದ್ ಮೋಟರ್ಸ್ ಸರ್ವೀಸ್ ಸೆಂಟರ್ ಹೆಸರಿನ ಪೆಟ್ರೋಲ್ ಬಂಕ್ ಇದೆ. ದಿನ ಪೂರ್ತಿ ಕೆಲಸ ಮಾಡುವ ಬಂಕ್ ನಲ್ಲಿ ರಾತ್ರಿ ವೇಳೆ ಬೆರಳೆಣಿಕೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುವ ಸೋಗಿನಲ್ಲಿ ಬಂದಿದ್ದಾರೆ. ಪೆಟ್ರೋಲ್ ಹಾಕಿಸಿಕೊಂಡವರಂತೆ ನಾಟಕವಾಡಿದ ಕಿರಾತಕರು ಏಕಾ ಏಕಿ ಲಾಂಗ್ ಬೀಸಿ ಹಣ ಕೊಡುವಂತೆ ಬೆದರಿಸಿದ್ದಾರೆ. ಜೀವ ರಕ್ಷಿಸಿಕೊಳ್ಳುವ ಭಯದಲ್ಲಿದ್ದ ಸಿಬ್ಬಂದಿ ಬಳಿಯಿದ್ದ 43 ಸಾವಿರ ರೂ. ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಮಾಸ್ಕ್ ಧರಿಸಿವುದು ಕಡ್ಡಾಯಗೊಳಿಸುವ ಕಾರಣ ಮುಸುಕು ಧರಿಸಿದ್ದ ಕಿರಾತಕರ ಬಗ್ಗೆ ಸಿಬ್ಬಂದಿಗೆ ಯಾವುದೇ ಅನುಮಾನ ಬಂದಿಲ್ಲ. ಪ್ರಾಣ ಕಳೆದುಕೊಳ್ಳುತ್ತಿದ್ದ ಸಿಬ್ಬಂದಿ ಕೈಯಲ್ಲಿದ್ದ ಹಣ ದರೋಡೆಕೋರರ ಕೈಗಿಟ್ಟು ಜೀವ ಉಳಿಸಿಕೊಂಡಿದ್ದಾರೆ. ಭಾರತಿನಗರ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Recommended Video
ಬೈಕ್ ನಲ್ಲಿಯೇ ಇಬ್ಬರು ಬಂದಿದ್ದರು. ಮುಖ ಕಾಣದಂತೆ ಬಟ್ಟೆ ಧರಿಸಿದ್ದರು. ಮಾಸ್ಕ್ ಕಡ್ಡಾಯವಾಗಿದ್ದರಿಂದ ನಾವು ಅನುಮಾನ ಪಟ್ಟಿರಲಿಲ್ಲ. ಪೆಟ್ರೋಲ್ ಹಾಕಿಸಿಕೊಳ್ಳುವ ಸೋಗಿನಲ್ಲಿ ಪಂಪ್ ಸಮೀಪ ಬಂದವರು ಏಕಾಏಕಿ ಲಾಂಗ್ ಬೀಸಿ ಹಣ ನೀಡಲು ಹೆದರಿಸಿದರು. ಜೀವ ಭಯದಿಂದ ಕೈಯಲ್ಲಿದ್ದ ನಗದು ಹಣ ಕೊಟ್ಟ ಕ್ಷಣವೇ ಅಲ್ಲಿಂದ ಪರಾರಿಯಾದರು ಎಂದು ಪೆಟ್ರೋಲ್ ಬಂಕ್ ಸಿಬ್ಬಂದಿ ಪ್ರಮೋದ್ ಪೊಲೀಸರ ಮಂದೆ ಹೇಳಿಕೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಭಾರತಿನಗರ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.












Click it and Unblock the Notifications