ಬೆಂಗಳೂರಿನಲ್ಲಿ ಕಸ ಸುಡುವವರಿಗೂ ದಂಡ!

ಎಲ್ಲೆಂದರಲ್ಲಿ ಕಸ ಎಸೆಯುವುದಷ್ಟೇ ಅಲ್ಲದೆ, ಆ ಕಸವನ್ನು ಬೇಕಾ ಬಿಟ್ಟಿ ಸುಡುವವರಿಗೆ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ ತಿದ್ದುಪಡಿ ಕಾಯ್ದೆಯನ್ವಯ ಬಿಬಿಎಂಪಿ ದಂಡ ವಿಧಿಸಲಿದೆ.

ಬೆಂಗಳೂರು, ಏಪ್ರಿಲ್ 29: ಎಲ್ಲೆಂದರಲ್ಲಿ ಕಸ ಎಸೆಯುವುದಷ್ಟೇ ಅಲ್ಲದೆ, ಆ ಕಸವನ್ನು ಬೇಕಾ ಬಿಟ್ಟಿ ಸುಡುವವರಿಗೆ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ ತಿದ್ದುಪಡಿ ಕಾಯ್ದೆಯನ್ವಯ ಬಿಬಿಎಂಪಿ ದಂಡ ವಿಧಿಸಲಿದೆ.

ಉದ್ಯಾನ ನಗರಿ ಬೆಂಗಳೂರಿನ ಕಸದ ಸಮಸ್ಯೆಗೆ ಬಹುಶಃ ಎಂದಿಗೂ ಮುಕ್ತಿಯಿಲ್ಲ! ಕಸ ವಿಲೇವಾರಿಗಾಗಿ ಹಲವು ಕ್ರಮಕಳನ್ನು ಕೈಗೊಂಡ ಮೇಲೂ, ಒಣ-ಹಸಿ ಕಸಗಳನ್ನು ಬೇರ್ಪಡಿಸುವ ಸುಚನೆ ನೀಡಿದ ಮೇಲೂ ರಾಜಧಾನಿ ಕಸಮುಕ್ತವಾಗಿಲ್ಲ. ಖಾಲಿ ಸೈಟ್ ಗಳನ್ನು ಕಸದ ತೊಟ್ಟಿಯನ್ನಾಗಿ ಮಾಡಿದ ಹಲವು ಉದಾಹರಣೆಗಳು ಸಿಕ್ಕುತ್ತವೆ.[ಹೊಸ ಪಯಣದ ಆಶಾಕಿರಣಕ್ಕಾಗಿ ಕಿಕ್ ಸ್ಟಾರ್ಟ್ ಕ್ಯಾಬ್]

Penalty for burning garbage in Bengaluru

ಇದೀಗ ಕಸ ಎಸೆಯುವುದು ಮಾತ್ರವಲ್ಲದೆ, ಜನರು ಎಸೆದ ಕಸಗಳನ್ನು ಪೌರ ಕಾರ್ಮಿಕರೇ ಸುಡುತ್ತಿರುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ. ಖಾಲಿ ಸೈಟ್ ಗಳಲ್ಲಿ ಎಸೆಯಲಾದ ಕಸಗಳಿಂದ ಒಂದು ರೀತಿಯ ಮಾಲಿನ್ಯವಾದರೆ, ಅದನ್ನು ಸುಡುವುದರಿಂದ ಇನ್ನೊಂದು ರೀತಿಯ ಮಾಲಿನ್ಯವಾಗುತ್ತಿದೆ. ಈ ಬಗ್ಗೆ ಪೌರ ಕಾರ್ಮಿಕರನ್ನು ವಿಚಾರಿಸಿದರೆ ನಮಗೆ ಮೇಲಧಿಕಲಾರಿಗಳಿಂದ ಅಂಥ ಆದೇಶ ಬಂದಿದೆ ಎಂಬ ಸುಳ್ಳು ಉತ್ತರ ಬರುತ್ತಿದೆ.

ಖಾಲಿ ಸೈಟ್ ಗಳಲ್ಲಿ ಅಥವಾ ರಸ್ತೆಯ ಪಕ್ಕ ಬಿದ್ದ ಕಸಗಳನ್ನು ಎತ್ತುವುದಕ್ಕಿಂತ ಅದನ್ನು ಅಲ್ಲೇ ಸುಡುವುದೇ ಉತ್ತಮ ಎಂದು ಪೌರ ಕಾರ್ಮಿಕರು ಯಾರ ಅನುಮತಿಯನ್ನೂ ಪಡೆಯದೆ ಕಸಗಳನ್ನು ಸುಡುತ್ತಿರುವುದು ಎಲ್ಲೆಂದೆರಲ್ಲಿ ಕಂಡುಬರುತ್ತಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಪ್ರತಿ ದಿನ 4000 ಟನ್ ಗೂ ಹೆಚ್ಚು ಕಸ ಉತ್ಪತ್ತಿಯಾಗುತ್ತದೆ! ಇದರ ವಿಲೇವಾರಿ ಬಿಬಿಎಂಪಿ ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+