Get Updates
Get notified of breaking news, exclusive insights, and must-see stories!

ಪೀಣ್ಯ ಫ್ಲೈ ಓವರ್ ವಾಹನ ಸಂಚಾರ; ಸಿಎಂ ಕೊಟ್ರು ಬ್ರೇಕಿಂಗ್ ನ್ಯೂಸ್

ಬೆಂಗಳೂರು, ಫೆಬ್ರವರಿ 16; ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ ವಾಹನ ಸಂಚಾರಕ್ಕೆ ಯಾವಾಗ ಮುಕ್ತವಾಗಲಿದೆ? ಎಂಬುದು ವಾಹನ ಸವಾರರ ಪ್ರಶ್ನೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದುರಸ್ತಿ ಕೆಲಸಗಳಿಗಾಗಿ ಡಿಸೆಂಬರ್ 26ರಿಂದಲೇ ಫ್ಲೈ ಓವರ್ ಮೇಲೆ ವಾಹನ ಸಂಚಾರ ಬಂದ್ ಮಾಡಿದೆ.

ಮಂಗಳವಾರ ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಮಂಜುನಾಥ್ ಫ್ಲೈ ಓವರ್ ದುರಸ್ತಿ ವಿಚಾರ ಪ್ರಸ್ತಾಪ ಮಾಡಿದರು. ಪೀಣ್ಯ ಎಲಿವೇಡೆಡ್ ಮೇಲ್ಸೆತುವೆಯ 102 ಮತ್ತು 103ನೇ ಕಂಬಗಳ ನಡುವೆ ತಾಂತ್ರಿಕ ದೋಷವಿದೆ ಎಂದು 56 ದಿನಗಳಿಂದ ವಾಹನ ಸಂಚಾರ ಬಂದ್ ಮಾಡಲಾಗಿದೆ ಎಂದರು.

ಫ್ಲೈ ಓವರ್ ಮೇಲೆ ವಾಹನ ಸಂಚಾರ ಬಂದ್ ಆಗಿರುವುದರಿಂದ ಹೊರ ಜಿಲ್ಲೆಗಳಿಂದ ಬೆಂಗಳೂರು ನಗರಕ್ಕೆ ಬರುವ ಮತ್ತು ಹೋಗುವ ವಾಹನಗಳಿಗೆ ತೊಂದರೆಯಾಗುತ್ತಿದೆ. ಪ್ರತಿನಿತ್ಯ ಎರಡು ಕಿ. ಮೀ. ಉದ್ದ ವಾಹನದ ಸಾಲು ಇರುತ್ತದೆ. ಆಂಬ್ಯುಲೆನ್ಸ್ ಓಡಾಟಕ್ಕೆ ಸಹ ಕಷ್ಟವಾಗುತ್ತಿದೆ. ವಾಹನ ಸಂಚಾರ ಯಾವಾಗ ಆರಂಭವಾಗಲಿದೆ? ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಈ ವಿಚಾರಕ್ಕೆ ಧ್ವನಿಗೂಡಿಸಿದರು. ಇದೊಂದು ಪ್ರಮುಖ ವಿಷಯವಾಗಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸಿದ ಸೂಕ್ತ ಕ್ರಮ ಕೈಗೊಳ್ಳಬೇಕು. ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕದ ಜಿಲ್ಲೆಗಳನ್ನು ಸಂಪರ್ಕಿಸುವ ರಸ್ತೆಯ ಫ್ಲೈ ಓವರ್ ಇದಾಗಿದೆ ಎಂದರು.

ಮುಖ್ಯಮಂತ್ರಿಗಳಿಂದ ಉತ್ತರ

ಮುಖ್ಯಮಂತ್ರಿಗಳಿಂದ ಉತ್ತರ

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಪ್ರಶ್ನೆಗೆ ಉತ್ತರ ನೀಡಿದರು, "ಮೇಲ್ಸೆತುವೆ ಭಾರೀ ವಾಹನಗಳ ಸಂಚಾರಕ್ಕೆ ಸುರಕ್ಷಿತವಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವರದಿ ನೀಡಿದೆ. ಆದರೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡುವ ಸಂಬಂಧ ಒಂದು ವಾರದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದರು.

ಕಳಪೆ ಕಾಮಗಾರಿಯಿಂದ ಸಮಸ್ಯೆ

ಕಳಪೆ ಕಾಮಗಾರಿಯಿಂದ ಸಮಸ್ಯೆ

"ಮೇಲ್ಸೆತುವೆ ನಿರ್ಮಾಣ ಮಾಡುವಾಗ ಗುಣಮಟ್ಟ ಪಾಲನೆ ಮಾಡಿಲ್ಲ. ಕಳಪೆ ಕಾಮಗಾರಿಯಿಂದ ಈಗ ಸಮಸ್ಯೆ ಉಂಟಾಗಿದೆ. ಐಐಎಸ್‌ಸಿ ಮೇಲ್ಸೆತುವೆ ಮೇಲೆ ಸ್ಪೀಡ್ ಟೆಸ್ಟ್ ನಡೆಸಿದೆ, ಲೋಡ್ ಟೆಸ್ಟ್ ಸಹ ಮಾಡಿದೆ. ಭಾರೀ ವಾಹನಗಳು ಸಂಚಾರ ನಡೆಸಿದಾಗ ಕಂಬಗಳ ಒಳಗಿನ ಕೇಬಲ್ ಬಾಗುತ್ತದೆ. ಆದ್ದರಿಂದ ಭಾರೀ ವಾಹನಗಳ ಸಂಚಾರಕ್ಕೆ ಫ್ಲೈ ಓವರ್ ಸುರಕ್ಷಿತವಲ್ಲ ಎಂಬ ವರದಿ ನೀಡಿದೆ" ಎಂದು ಮುಖ್ಯಮಂತ್ರಿಗಳು ಸದನಕ್ಕೆ ಮಾಹಿತಿ ನೀಡಿದರು.

ಕಳೆಪೆ ಕಾಮಗಾರಿಗೆ ಜವಾಬ್ದಾರಿ ಯಾರು?

ಕಳೆಪೆ ಕಾಮಗಾರಿಗೆ ಜವಾಬ್ದಾರಿ ಯಾರು?

"ಫ್ಲೈ ಓವರ್ ಮೇಲೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಬೇಕು ಎಂಬ ಮನವಿಯೂ ಬಂದಿದೆ. ಈ ಬಗ್ಗೆ ಲೋಡ್ ಟೆಸ್ಟ್ ಮಾಡಿಸಿ ಒಪ್ಪಿಗೆ ಸಿಕ್ಕರೆ ಒಂದು ವಾರದಲ್ಲಿ ತೀರ್ಮಾನ ಪ್ರಕಟಿಸುತ್ತೇವೆ" ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

"ಫ್ಲೈ ಓವರ್ ನಿರ್ಮಾಣದ ವೇಳೆ ಈ ಹಿಂದೆ ಆದ ಕಳಪೆ ಕಾಮಗಾರಿಗೆ ಈಗ ಯಾರು ಹೊಣೆ. ಒತ್ತಡಕ್ಕೆ ಮಣಿದು ವಾಹನ ಸಂಚಾರಕ್ಕೆ ಅವಕಾಶ ನೀಡಿದರೆ ಅವಘಡ ನಡೆದರೆ ಸರ್ಕಾರವನ್ನು ಜನರು ದೂರುತ್ತಾರೆ" ಎಂದು ಮುಖ್ಯಮಂತ್ರಿಗಳು ಹೇಳಿದರು.

ವಾಹನ ಸಂಚಾರ ಬಂದ್

ವಾಹನ ಸಂಚಾರ ಬಂದ್

ಡಿಸೆಂಬರ್ 25ರಂದು ನಿರ್ವಹಣಾ ಕಾರ್ಯದ ವೇಳೆ ಪೀಣ್ಯ ಎಲಿವೇಟೆಡ್ ಹೈವೇ (ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಪಿಲ್ಲರ್ ನಂ 102 ಮತ್ತು 103ರ ಮಧ್ಯೆ 8ನೇ ಮೈಲಿಯ ಸ್ವಾತಿ ಪೆಟ್ರೋಲ್ ಬಂಕ್ ಬಳಿ ಫ್ಲೈ ಓವರ್‌ಗೆ ಅಳವಡಿಸಿರುವ ಕೇಬಲ್ ತುರ್ತಾಗಿ ದುರಸ್ತಿ ಆಗಬೇಕು ಎಂಬುದು ಪತ್ತೆಯಾಯಿತು.

ಪೀಣ್ಯ ಸಂಚಾರಿ ಪೊಲೀಸರು ಬದಲಿ ಮಾರ್ಗವನ್ನು ಸೂಚಿಸಿ ಡಿಸೆಂಬರ್ 26ರಿಂದಲೇ ಫ್ಲೈ ಓವರ್ ಎರಡೂ ಕಡೆ ವಾಹನ ಸಂಚಾರ ಬಂದ್ ಮಾಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದುರಸ್ತಿ ಕಾರ್ಯ ಕೈಗೊಂಡಿತು. ಒಂದು ವಾರದಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ 56 ದಿನಗಳು ಕಳೆದರೂ ಪೂರ್ಣಗೊಂಡಿಲ್ಲ.

ಫ್ಲೈ ಓವರ್‌ನಲ್ಲಿ 116 ಪಿಲ್ಲರ್‌ಗಳಿವೆ

ಫ್ಲೈ ಓವರ್‌ನಲ್ಲಿ 116 ಪಿಲ್ಲರ್‌ಗಳಿವೆ

10 ವರ್ಷಗಳ ಹಿಂದೆ ಈ ಫ್ಲೈ ಓವರ್ ನಿರ್ಮಾಣ ಮಾಡಲಾಗಿದೆ. ಈ ಫ್ಲೈ ಓವರ್‌ನಲ್ಲಿ 116 ಪಿಲ್ಲರ್‌ಗಳಿವೆ. ಪಿಲ್ಲರ್ ನಂ 102 ಮತ್ತು 103ರ ಮಧ್ಯೆ ಫ್ಲೈ ಓವರ್‌ಗೆ ಅಳವಡಿಸಿರುವ ಕೇಬಲ್ ಸಡಿಲಗೊಂಡಿತ್ತು. ಆದರೆ ದುರಸ್ತಿ ಕಾಮಗಾರಿ ಆರಂಭಿಸಿದ ಬಳಿಕ 8 ಪಿಲ್ಲರ್‌ಗಳಲ್ಲಿ ಇದೇ ಮಾದರಿ ತೊಂದರೆ ಕಂಡಿದೆ. ದುರಸ್ತಿ ಕಾರ್ಯದ ಬಳಿಕ ಇಡೀ ಫ್ಲೈ ಓವರ್‌ನಲ್ಲಿ ವಿಶೇಷ ಭಾರದ ಪರೀಕ್ಷೆ ಮಾಡಿದ ಬಳಿಕ ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ತೀರ್ಮಾನಿಸಲಾಗಿತ್ತು. ಲಾರಿಗಳನ್ನು ಓಡಿಸಿ ಭಾರದ ಪರೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ನೀಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+