ಅಣ್ಣಾ.. ಈ ಬಸ್‌ ಎಲ್ಲಿಗ್‌ ಹೋಗುತ್ತೆ.? ಶೆಡ್‌ಗೆ ಹೋಗುತ್ತೆ ಬರ್ತೀಯಾ?: ವಿಡಿಯೋ ಭಾರೀ ವೈರಲ್‌

ಬೆಂಗಳೂರು, ಜುಲೈ, 09: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ & ಗ್ಯಾಂಗ್‌ ಜೈಲು ಪಾಲಾದಾಗಿನಿಂದ ಬಾ.. ಶೆಡ್‌ಗೆ ಹೋಗುವ.. ಕೊಂಟೆಬಿಲ್ಲೆ ಆಡುವ ಬಾ ಎನ್ನುವ ರೀಲ್ಸ್‌ ವಿಡಿಯೋಗಳು ಸಾಮಾಜಿಕ ಜಲಾತಾಣಗಳಲ್ಲಿ ಫುಲ್‌ ಟ್ರೆಂಡ್‌ ಆಗಿಬಿಟ್ಟಿವೆ. ಇದೋಗ ಅದೇ ಶೈಲಿಯಲ್ಲಿ ಮತ್ತೊಂದು ವಿಡಿಯೋ ವೈರಲ್‌ ಆಗುತ್ತಿದೆ.

ಚಿಕ್ಕವರಿಂದ ಹಿಡಿದು ಹಿರಿಯರು ಕೂಡ ವಿವಿಧ ಆಯಾಮಗಳಲ್ಲಿ ಈ ರೀಲ್ಸ್‌ ಮಾಡುತ್ತಿದ್ದಾರೆ. ಅದು ಪವಿತ್ರಾ ಗೌಡ ತಮ್ಮ ಮಾಧ್ಯಮದವರಿಗೆ ಕೆಣಕಿದಾಗಿನಿಂದ ಈ ರೀಲ್ಸ್‌ಗಳು ಹುಟ್ಟಿಕೊಂಡವು. ಸುಮ್ಮನೆ ಇರಲಾರ್ದೆ ಇರುವೆ ಬಿಟ್ಟುಕೊಂಡ ಅನ್ನುವ ಪರಿಸ್ಥಿತಿ ಇದೀಗ ಪವಿತ್ರಾ ಗೌಡ ತಮ್ಮನದ್ದಾಗಿದೆ.

Pavithra Gowda Case Bus go to the shed Reels video Viral

ಮಾಧ್ಯಮದವರಿಗೆ ನಮ್ಗೇನು ಮಾಡೋದಿಕ್ಕೆ ಏನು ಕೆಲ್ಸ ಇಲ್ವಾ ಎಂದು ಪವಿತ್ರಾ ಗೌಡ ತಮ್ಮ ಪರಪ್ಪನ ಅಗ್ರಹಾರದ ಜೈಲಿನ ಮುಂದೆ ಪ್ರಶ್ನಿಸಿದ್ದ. ಇದಕ್ಕೆ ನಿರೂಪಕರೊಬ್ಬರು ಬಾ.. ನಮ್ಗೆ ಕೆಲ್ಸ ಇಲ್ಲ.. ಶೇಡ್‌ಗೆ ಹೋಗಿ ಕುಂಟೆಬಿಲ್ಲ ಆಡುವ ಬಾ.. ಎಂದು ಗೇಲಿ ಮಾಡುವ ಮೂಲಕ ಪವಿತ್ರಾ ಗೌಡ ತಮ್ಮಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ತಿರುಗೇಟು ನೀಡಿದ್ದಾರೆ.

ಆಗಿನಿಂದ ಈ ರೀಲ್ಸ್‌ ಭಾರೀ ಸದ್ದು ಮಾಡುತ್ತಲೇ ಇದೆ. ಇದೀಗ ಮತ್ತೆ "ಅಣ್ಣಾ.. ಬಸ್‌ ಎಲ್ಲಿಗೆ ಹೋಗುತ್ತೆ ಅಂತಾ ಯುವಕನೊಬ್ಬ ಕೇಳಿದ್ದಕ್ಕೆ, ಬಸ್ಸಿನಲ್ಲಿ ಕುಳಿತಿದ್ದ ಯುವಕ ಶೆಡ್‌ಗೆ ಹೋಗುತ್ತೆ ಬರ್ತೀಯಾ?," ಎಂದು ಪ್ರಶ್ನಿಸಿದ್ದ, ಈ ವಿಡಿಯೋ ಸಹ ಇದೀಗ ಭಾರೀ ವೈರಲ್‌ ಆಗುತ್ತಿದೆ. ಇನ್ನೂ ಈ ಶೆಡ್‌ ವಿಚಾರ ಬಂದಿದ್ದೇ ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಘಟನೆಯಿಂದ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಪವಿತ್ರಾ ಗೌಡ ಸೇರಿದಂತೆ 17 ಮಂದಿ ಜೈಲು ಪಾಲಾಗಿದ್ದಾರೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸುವ ಮೂಲಕ ಮಹತ್ವದ ಸಾಕ್ಷ್ಯಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ಇನ್ನೂ ನಟ ದರ್ಶನ್‌ ಪರ-ವಿರೋಧದ ಚರ್ಚೆಗಳು ಆಗುತ್ತಿವೆ. ಈ ನಡುವೆಯೇ ಪತ್ನಿ ವಿಜಯಲಕ್ಷ್ಮಿ ಮತ್ತು ಕುಟುಂಬಸ್ಥರು ಜೈಲುಪಾಲಾಗಿರುವ ದರ್ಶನ್‌ನನ್ನು ಹೊರತರಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ನಟ ದರ್ಶನ್‌ ತೂಕ ಇಳಿಕೆ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್‌ ತೂಕದಲ್ಲಿ ಇಳಿಕೆಯಾಗಿದೆ ಎನ್ನುವ ಮಾಹಿತಿಯೊಂದು ಮೂಲಗಳಿಂದ ಲಭ್ಯವಾಗಿದೆ.

ಪೊಲೀಸರು ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಕೆಯನ್ನು ಚುರುಕುಗೊಳಿಸಿದ್ದಾರೆ. ಮತ್ತೊಂದೆಡೆ ಪ್ರಜರಣದಲ್ಲಿ ಜೈಲೈ ಸೇರಿದಾಗಿನಿಂದ ನಟ ದರ್ಶನ್‌ ತೂಕದಲ್ಲಿ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ. ಹಾಗಾದರೆ ಜೈಲು ಸೇರಿದಾಗಿನಿಂದಲೂ ತೂಕ ಎಷ್ಟು ಕಡಿಮೆಯಾಗಿದೆ ಹಾಗೂ ಮೊದಲಿನ ತೂಕ ಎಷ್ಟಿದ್ದರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ ತೂಕದಲ್ಲಿ ತಿಂಗಳೊಳಗೆ 10 ಕಿಜಿಯಷ್ಟು ತೂಕ ಇಳಿಕೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ನ ಆರೋಗ್ಯದ ಬಗ್ಗೆ ಜೈಲಾಧಿಕಾರಿಗಳು ನಿಗಾ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಮೆಡಿಕಲ್ ಟೆಸ್ಟ್ ವೇಳೆ 107 ಕೆ.ಜಿ. ತೂಕ ಇದ್ದ ನಟ ದರ್ಶನ್‌ ಇದೀಗ 10 ಕೆ.ಜಿ ಇಳಿಕೆಯಾಗಿದ್ದಾರೆ. ಅಂದರೆ 97 ಕ.ಜಿ ಗೆ ಇಳಿಕೆಯಾಗಿದ್ದು, ಆದ್ದರಿಂದ ಜೈಲಾಧಿಕಾರಿಗಳು ನಟ ದರ್ಶನ್‌ ಆರೋಗ್ಯದ ಮೇಲೆ ನಿಗಾವಹಿಸಿದ್ದಾರೆ. ಅಲ್ಲದೆ ನಿಯಮಿತ ಆರೋಗ್ಯ ತಪಾಸಣೆಗೂ ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+