ಶೇರ್ ಆಟೋದಲ್ಲಿ ಪ್ರಯಾಣಿಕನ ಕುತ್ತಿಗೆಗೆ ಚಾಕು ಇಟ್ಟ ದುಷ್ಕರ್ಮಿಗಳು
ಬೆಂಗಳೂರು, ಮೇ 20: ನಗರದ ಬಸವಣ್ಣ ವೃತ್ತದ ಬಳಿ ಮಧುಸೂದನ್ ಎಂಬುವವರು ರಾತ್ರಿ 9.45ರ ಸುಮಾರಿಗೆ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದರು.
ಅವರ ಎದುರು ಒಂದು ಆಟೋ ಬಂದು ನಿಂತಿತ್ತು, ಎಲ್ಲಿಗೇ ಹೋಗಬೇಕು ಎಂದು ಕೇಳಿದ್ದಾರೆ, ಆಟೋದಲ್ಲಿ ಆಗಲೇ ಎರಡು ಮಂದಿ ಕುಳಿತಿದ್ದರು. ಎಲ್ಲಿಗೆ ಹೋಗಬೇಕು ಹೇಳಿ ಆಟೋ ಚಾರ್ಜ್ ಶೇರ್ ಮಾಡೋಣ ಎಂದು ಹೇಳಿದ್ದಾರೆ. ಮಧುಸೂಧನ್ ಆಟೋ ಹತ್ತಿ ಕುಳಿತಿದ್ದಾರೆ.
ಆಟೋ ಬನ್ನೇರುಘಟ್ಟ ರಸ್ತೆಗೆ ಬರುತ್ತಿದ್ದಂತೆಯೇ ಪ್ಯಾಸೆಂಜರ್ ಸೀಟಿನಲ್ಲಿ ಕುಳಿತ ವ್ಯಕ್ತಿಯೊಬ್ಬ ಜೇಬಿನಿಂದ ಚಾಕು ತೆಗೆದು ಮಧುಸೂದನ್ ಅವರ ಕುತ್ತಿಗೆ ಬಳಿ ಹಿಡಿದಿದ್ದಾನೆ. ಬಳಿಕ ಅವರ ಬಳಿ ಇದ್ದ ಹಣ, ಒಡವೆ ಎಲ್ಲವನ್ನೂ ದೋಚಿ, ಆದರೆ ಮೊಬೈಲ್ ಬಿಟ್ಟುಹೋದ ಕಾರಣ ಮಧುಸೂದನ್ ತಕ್ಷಣವೇ ಅವರ ಸ್ನೇಹಿತನಿಗೆ ಕರೆ ಮಾಡಿ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.

ಆಟೋ ರಿಜಿಸ್ಟ್ರೇಷನ್ ನಂಬರ್ ನನಗೆ ಕಾಣಿಸಲಿಲ್ಲ, ಎರಡೂ ಪ್ರಯಾಣಿಕರು 25-30 ವರ್ಷದೊಳಗಿನವಾರಗಿದ್ದಾರೆ. ಒಂದೊಮ್ಮೆ ಅವರನ್ನು ನೋಡಿದರೆ ಗುರುತು ಹಿಡಿಯುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications