• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಕ್ಷ್ಮಣರಾವ್ ಉದ್ಯಾನದಲ್ಲಿರುವ 24 ಮರಗಳಿಗೆ ಬಿತ್ತು ಕೊಡಲಿ ಪೆಟ್ಟು

By Nayana
|

ಬೆಂಗಳೂರು, ಮೇ 1: ಜಯನಗರದ ಲಕ್ಷ್ಮಣ ರಾವ್ ಉದ್ಯಾನವನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ, ಹೋರಾಟಗಳೂ ನಡೆಯುತ್ತಲೇ ಇದೆ ಅದರ ಮಧ್ಯೆ ಅಲ್ಲಿರುವ ಮರಗಳನ್ನು ಬಿಎಂಆರ್‌ಸಿಎಲ್ ಕತ್ತರಿಸಿದೆ.

60 ವರ್ಷ ಇತಿಹಾಸವಿರುವ ಜಯನಗರದ ಲಕ್ಷ್ಮಣ ರಾವ್ ಪಾರ್ಕ್ ನಮ್ಮ ಮೆಟ್ರೋ ಕಾಮಗಾರಿಗಾಗಿ ಭಾಗಶಃ ಧ್ವಂಸವಾಗಿದೆ. ಬಿಎಂಆರ್ ಸಿಎಲ್ ವರದಿಯಲ್ಲೊಂದು ಸಂಖ್ಯೆ ನೀಡಿದರೆ, ವಾಸ್ತವದಲ್ಲಿ ಸ್ಥಿತಿ ಬೇರೆಯೇ ಇದೆ.

ಬನ್ನೇರುಘಟ್ಟ ಉದ್ಯಾನ ಸುತ್ತ ಶೀಘ್ರ ಕಲ್ಲು ಗಣಿಗಾರಿಕೆ ರದ್ದು

ನಮ್ಮ ಮೆಟ್ರೋ ಯೋಜನೆಯ 2 ನೇ ಹಂತದಲ್ಲಿ ಈಗಾಘಲೇ ನಿರ್ಮಾಣವಾಗಿರುವ ಆರ್‌.ವಿ. ರಸ್ತೆ ಮೆಟ್ರೋ ನಿಲ್ದಾಣದ ಪಕ್ಕದಿಂದಲೇ ಬೊಮ್ಮಸಂದ್ರದ ಕಡೆಗೆ 18ಕಿ.ಮೀ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ಇದಕ್ಕಾಗಿ ಜಯನಗರ 32 ನೇ ಅಡ್ಡರಸ್ತೆಯಿಂದ ಮಾರೇನಹಳ್ಳಿ ರಸ್ತೆಯ ಜಂಕ್ಷನ್ ವರೆಗೆ ಲಕ್ಷ್ಮಣ ರಾವ್ ಪಾರ್ಕ್ ಪಾದಚಾರಿ ಮಾರ್ಗದಲ್ಲೇ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಈಗಾಗಲೇ ನಿರ್ಮಾಣವಾಗಿರುವ ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣವನ್ನು ಮತ್ತಷ್ಟು ವಿಸ್ತರಣೆ ಮಾಡಲು ಉದ್ಯಾನದ ಮುಕ್ಕಾಲು ಪ್ರದೇಶ ಬಳಸಿಕೊಳ್ಳಲಾಗಿದೆ.

ಆರ್.ವಿ. ರಸ್ತೆಯ ಪಾದಚಾರ ಮಾರ್ಗದಲ್ಲಿ ಅಂದಾಜು 200 ಮೀ ಉದ್ದಕ್ಕೆ 30 ಕ್ಕೂ ಅಧಿಕ ಬೃಹತ್ ಮರ ಕೊಡಲಿ ಪೆಟ್ಟು ತಿನ್ನಲಿವೆ. ಬಿಬಿಎಂಪಿ ಜಂಟಿ ಆಯುಕ್ತರಿಗೆ ಬಿಎಂಆರ್ ಸಿಎಲ್ ಸಲ್ಲಿಸಿರುವ ಪತ್ರದಂತೆ ಲಕ್ಷ್ಮಣ ರಾವ್ ಉದ್ಯಾನದ 24 ಮರ ಕಡಿಯಲಿದ್ದು, 56 ಮರಗಳನ್ನು ಸ್ಥಳಾಂತರಗೊಳಿಸುವುದಾಗಿ ತಿಳಿಸಿದೆ.

ಪಾರ್ಕ್ ಒಳಗಿನ 51 ಕಾಂಕ್ರೀಟ್ ಬೆಂಚುಗಳು, 59 ಪಾರ್ಕ್ ಲೈಟ್ ಕಂಬಗಳನ್ನು ತೆರವುಗೊಳಿಸುವ ಅಗತ್ಯವಿದೆ ಎಂದು ತಿಳಿಸಿದೆ. ಆದರೆ ವಾಸ್ತವದಲ್ಲಿ ಆರ್. ಮೆಟ್ರೋ ನಿಲ್ದಾಣದ ಪಕ್ಕದಲ್ಲಿರುವ ಪಾರ್ಕ್ ಸಂಖ್ಯೆ 3 ರಲ್ಲಿ ಬಹುತೇಕ ಮರಗಳನ್ನು ಕಡಿಯಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BMRCL has cut down many trees in Lakshman Rao park in Jayanagar without census of trees. Residents of Jayanagar alleged that the corporation has damaged entire park for metro work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more