Bajrang Dal: ಮಲ್ಲಿಕಾರ್ಜುನ್ ಖರ್ಗೆಗೆ ಕೋರ್ಟ್ ನೋಟಿಸ್ ಜಾರಿ

ಬೆಂಗಳೂರು, ಮೇ 15: ಹಿಂದುಪರ ಧಾರ್ಮಿಕ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ಬಜರಂಗದಳವನ್ನು ನಿಷೇಧಿತ ಸಂಘಟನೆಯೊಂದಿಗೆ ಹೋಲಿಕೆ ಮಾಡಿದ್ದಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯೊಂದಿಗೆ ಬಜರಂಗದಳ ವನ್ನು ಹೋಲಿಕೆ ಮಾಡಿ ಮಲ್ಲಿಕಾರ್ಜುನ್ ಖರ್ಗೆಗೆ ಮಾತನಾಡಿದ್ದರು. ಈ ಸಂಬಂಧ ಬಜರಂಗದಳ ಪಂಜಾಬ್ ಸಂಗ್ರೂರ್ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿ ವಿಚಾರಣೆ ಸೋಮವಾರ ನಡೆಯಿತು. ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕೋರ್ಟ್ ಸಮನ್ಸ್ ಜಾರಿ ಮಾಡಿ ಆದೇಶಿಸಿದೆ.

Panjab Court Notice Issued To Mallikarjun Kharge

ಬಜರಂಗದಳವು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಯುವ ಘಟಕವಾಗಿದೆ. ಈ ವಿಎಚ್‌ಪಿ ಚಂಡೀಗಡ ಘಟಕವು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳಕ್ಕೆ ಅಪಮಾನ ಮಾಡಿದೆ ಎಂದಿದೆ. ಅಲ್ಲದೇ ಪಿಎಫ್‌ಐ ಜೊತೆ ಬಜರಂಗ ದಳ ಹೋಲಿಕೆ ಮಾಡಿದಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ 100 ಕೋಟಿ ರೂಪಾಯಿ ಮಾನಹಾನಿ ಪರಿಹಾರ ಕೋರಿ ನೋಟಿಸ್ ಜಾರಿ ಮಾಡಿತ್ತು. ಎರಡು ವಾರದೊಳದಗೆ ಮಾನ ಹಾನಿ ಪರಿಹಾರ ನೀಡುವಂತೆ ಆಗ್ರಹಿಸಿತ್ತು.

ಕಾಂಗ್ರೆಸ್ ಪ್ರಣಾಳಿಕೆಗೆ ವಿಎಚ್‌ಪಿ ಆಕ್ರೋಶ

ಕರ್ನಾಟಕ ಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಹೊರಡಿತ್ತು. ಅದರಲ್ಲಿ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮಾಜದಲ್ಲಿ ದ್ವೇಷದ ವಾತಾವರಣ ಸೃಷ್ಟಿಸಿದರೆ ಅಂತಹ ಬಜರಂಗದಳ, ಪಿಎಫ್‌ಐ ನಂತಹ ಇನ್ನಿತರಸಂಘಟನೆಗಳನ್ನು ನಿಷೇಧಿಸುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿತ್ತು.

Panjab Court Notice Issued To Mallikarjun Kharge

ಇದಕ್ಕೆ ವ್ಯಾಪಕ ಆಕ್ರೋಶವು ವ್ಯಕ್ತವಾಯಿತು. ಧಾರ್ಮಿಕ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ಬಜರಂಗದಳ ವನ್ನು ಭಯೋತ್ಪಾದಕ, ದೇಶ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ನಿಷೇಧಗೊಂಡ ಪಿಎಫ್‌ಐ ಸಂಘಟನೆ ಜತೆ ಹೋಲಿಕೆ ಮಾಡುವುದು ಸರಿಯಲ್ಲ ಎಂಬ ಕೂಗು ಹೆಚ್ಚಾಗಿತ್ತು. ಅದರ ಭಾಗವಾಗೇ ಮಾನಹಾನಿ ಕುರಿತು ಅರ್ಜಿ ಸಲ್ಲಿಕೆಯಾಗಿದೆ. ವಿಎಚ್‌ಪಿ ಪರ ವಕೀಲರು ಮಹತ್ವದ ಅಂಶಗಳನ್ನು ಉಲ್ಲೇಖಿಸಿದ್ದರು. ಪರಿಣಾಮ ಸದ್ಯ ಎಐಸಿಸಿ ಅಧ್ಯಕ್ಷರಿಗೆ ನೋಟಿಸ್ ಜಾರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+