ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಮಹಿಳಾ ಸುರಕ್ಷತೆಗಾಗಿ ಪ್ರತ್ಯೇಕ ಮಹಿಳಾ ಗಸ್ತು ಪಡೆ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10: ದೇಶಾದ್ಯಂತ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತರುವ ಹಿನ್ನೆಲೆಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪ್ರತ್ಯೇಕ ಮಹಿಳಾ ಗಸ್ತು ಪಡೆಯನ್ನು ನೇಮಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಬೆಂಗಳೂರು: ರಸ್ತೆಯಲ್ಲೆ ಮಹಿಳೆಗೆ ಕಿರುಕುಳ ನೀಡಿದ್ದ ವ್ಯಕ್ತಿಯ ಬಂಧನ ಬೆಂಗಳೂರು: ರಸ್ತೆಯಲ್ಲೆ ಮಹಿಳೆಗೆ ಕಿರುಕುಳ ನೀಡಿದ್ದ ವ್ಯಕ್ತಿಯ ಬಂಧನ

ಈ ಯೋಜನೆಗಾಗಿ ಕೇಂದ್ರ ಸರ್ಕಾರ 3ಸಾವಿರ ಕೋಟಿ ಹಣ ಬಿಡುಗಡೆ ಮಾಡಿದೆ, ಅದರಲ್ಲಿ ಬೆಂಗಳೂರಿಗೆ 667 ಕೋಟಿ ರೂ. ಶೀಘ್ರದಲ್ಲೇ ಲಭ್ಯವಾಗಲಿದೆ. ಬೆಂಗಳೂರು, ದೆಹಲಿ, ಹೈದರಾಬಾದ್ ಒಳಗೊಂಡಂತೆ ಪ್ರಮುಖ ಎಂಟು ನಗರಗಳಲ್ಲಿ ಅಪಾಯದ ಅಪಾಯದ ಕರೆಗಂಟೆ ಮತ್ತು ಸಂಪೂರ್ಣ ಮಹಿಳಾ ಗಸ್ತು ತಂಡಗಳ ರಚನೆಗೆ ಶೀಘ್ರವೇ ಚಾಲನೆ ದೊರೆಯಲಿದೆ. ಈ ಯೋಜನೆಗಾಗಿ ಅನುದಾನ ಬಿಡುಗಡೆಗೆ ಕೇಂದ್ರ ಗೃಹ ಸಚಿವಾಲಯ ಸಮ್ಮತಿ ಸೂಚಿಸಿದೆ.

ಉತ್ತರಪ್ರದೇಶದಲ್ಲಿ' ನಿಖಾ ಹಲಾಲ್' ಹೆಸರಲ್ಲಿ ಐವರಿಂದ ಅತ್ಯಾಚಾರ ಉತ್ತರಪ್ರದೇಶದಲ್ಲಿ' ನಿಖಾ ಹಲಾಲ್' ಹೆಸರಲ್ಲಿ ಐವರಿಂದ ಅತ್ಯಾಚಾರ

ಹಾಗಾದರೆ ಮಹಿಳಾ ಸುರಕ್ಷತೆಗಾಗಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎನ್ನುವುದನ್ನು ಗಮನಿಸುವುದಾದರೆ ಅತಿ ಹೆಚ್ಚು ಅಪರಾಧ ಕೃತ್ಯಗಳು ನಡೆಯುವ ಪ್ರದೇಶದಲ್ಲಿ ಸುರಕ್ಷತಾ ವಲಯಗಳ ಸ್ಥಾಪನೆ, ಸಿಸಿಟಿವಿ ಅಳವಡಿಕೆ, ಭದ್ರತಾ ವ್ಯವಸ್ಥೆ ಇರುವ ಸಾರ್ವಜನಿಕ ಸಾರಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಅಪಾಯ ಕರೆಗಂಟೆಗಳ ಅಳವಡಿಕೆ ಯೋಜನೆಯ ಒಂದು ಭಾಗವಾಗಿದೆ.

Panic button and women patrolling team in Bengaluru

ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳು ಆರಂಭಗೊಳ್ಳಲಿದೆ. ಅಲ್ಲಿ ಆಪ್ತ ಸಮಾಲೋಚಕರ ಸೇವೆಯೂ ದೊರೆಯಲಿದೆ. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನಗರಾಭಿವೃದ್ಧಿ ಸಚಿವಾಲಯ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಆಯಾ ನಗರಗಳ ಮಹಾನಗರ ಪಾಲಿಕೆ ಮತ್ತು ಪೊಲೀಸ್ ಆಯುಕ್ತ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗಲಿದೆ. ಈ ಯೋಜನೆ ಭಾಗವಾಗಿ ಮಹಿಳಾ ಸುರಕ್ಷತೆಗಾಗಿಯೇ ಮಹಿಳಾ ಪೊಲೀಸರು ಗಸ್ತು ಪಡೆ ಆರಂಭವಾಗಲಿದೆ.

English summary
Union government has released 3,000 crores for women safety majors in eight cities including Bengaluru and panic button in public places, women patrolling team and other important initiation were involved in this program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X