Get Updates
Get notified of breaking news, exclusive insights, and must-see stories!

Pahalgam Attack: ಬೆಂಗಳೂರು ರಿಯಲ್ ಎಸ್ಟೇಟ್ ಕುಸಿದ್ರು, ನೆಮ್ಮದಿ-ಆರೋಗ್ಯ ಮುಖ್ಯ: ಶತ್ರುಗಳ ಹೆಡೆಮುರಿ ಕಟ್ಟಿ!

ಬೆಂಗಳೂರು, ಏಪ್ರಿಲ್ 24: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಉಗ್ರರ ಗುಂಡಿನ ದಾಳಿಗೆ ದೇಶವ್ಯಾಪಿ ಖಂಡನೆ ವ್ಯಕ್ತವಾದ ಬೆನ್ನಲ್ಲೆ, ದೇಶದ ಗಡಿ, ಜನ, ಜೀವನ ರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳವುಂತೆ ಸಾರ್ವಜನಿಕರ ಆಗ್ರಹ ಜೋರಾಗಿದೆ. ದೇಶದ ಆರ್ಥಿಕತೆಗೆ ಹೊಡೆದ ಬಿದ್ದರೂ ಪರವಾಗಿಲ್ಲ. ವೈರಿಗಳನ್ನು ನಿರ್ನಾಮ ಮಾಡಿ, ಒಳ ಹೊಕ್ಕು ಹೊಡೆದು ಭಾರತವು ಧೈರ್ಯ ಸಾಹಸ ಮೆರೆಯಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ದೇಶವನ್ನೇ ತಲ್ಲಣಗೊಳಿಸಿದ ಉಗ್ರರ ಹೇಯ ಕೃತ್ಯ, ಪ್ರವಾಸಿಗರ ಸಾವು ನೋವು ದೇಶದ ಜನರ ನಿದ್ದೆಗೆಡಿಸಿದೆ. ಹಿಂದೂಗಳನ್ನಷ್ಟೇ ಟಾರ್ಗೆಟ್ ಮಾಡಿ ಪಾಯಿಂಟ್ ಬ್ಲಾಂಕ್ ರೇಂಜ್‌ನಿಂದ ಹೊಡೆದು ಹಾಕಿರುವುದು ಅಸಹನೀಯ. ಭಾರತ ಇದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೇಳಿ ಬಂದಿದೆ.

Pahalgam Attack National Security First Even If Economy Suffers Take Revange on Terrorists

ವೈರಿಗಳು ಸಂಹಾರವಾಗಲಿ, ಆಮೇಲೆ ನೋಡಿಕೊಳ್ಳೋಣ...

ಯುದ್ಧಕ್ಕೆ-ಯುದ್ಧ, ರಕ್ತಕ್ಕೆ-ರಕ್ತವಾದ ಎಂಬಂತಾದರೆ ದೇಶದ ಸ್ಥಿತಿಗತಿ, ಆರ್ಥಿಕತೆ ಮೇಲೆ ಪರಿಣಾಮ ಬೀರಬಹುದು ಎಂಬ ಅಂದಾಜಿದ್ದರೂ ಸಹಿತ, ಅದೆಲ್ಲ ಆಮೇಲೆ ನೋಡಿಕೊಳ್ಳೋಣ ಎಂಬ ಮಾತುಗಳ ಕೇಳಿಬರುತ್ತಿವೆ. ಬೆಂಗಳೂರಿನ ಐಟಿ ವಾಸ್ತುಶಿಲ್ಪಿ, ಡಾ.ರಾಜ್‌ಕುಮಾರ್ ಅಭಿಯಾನಿಗಿರುವ ಅಮರನಾಥ್ ಶಿವಶಂಕರ್ (@Amara_Bengaluru) ಅವರು ಸಹ ವೈಯಕ್ತಿಕವಾಗಿ, ''ಭಾರತದ ಗಡಿಗಳನ್ನು ಭದ್ರಗೊಳಿಸುವ ಪ್ರಕ್ರಿಯೆಯಲ್ಲಿ ಭಾರತ ಯುದ್ಧ ಸಾರಿ ವೈರಿಗಳ ಸಂಹಾರ ಮಾಡಬೇಕು. ಭಾರತದ ಆರ್ಥಿಕ ಸ್ಥಿತಿ ತಾತ್ಕಾಲಿಕ ಹೊಡೆತ ತಿಂದರೂ ನಾನು ಅದನ್ನು ಜೀರ್ಣಿಸಿಕೊಳ್ಳುತ್ತೇನೆ'' ಎಂದಿದ್ದಾರೆ.

ಹೂಡಿಕೆಯ ಲಾಭ ಕುಸಿದರೂ ನೆಮ್ಮದಿ-ಆರೋಗ್ಯ ಮುಖ್ಯ

''ಹಾಗೆಯೇ ಬೆಂಗಳೂರಿನ ಅಭಿವೃದ್ಧಿಗೆ ಕಡಿವಾಣ ಹಾಕಿ ಬೆಂಗಳೂರಿನ ರಿಯಲ್ ಎಸ್ಟೇಟ್ ಬೆಲೆ ಕುಸಿದರೆ, ಅದೂ ಆಗಲಿ. ನನ್ನ ರಿಯಲ್ ಎಸ್ಟೇಟ್ ಹೂಡಿಕೆಯ ಲಾಭದ ಪ್ರಮಾಣ ಕುಗ್ಗಿದರೂ ಸರಿ. ಜನರ ಬದುಕು ಹಸನಾಗಲಿ. ನೆಮ್ಮದಿ ಮತ್ತು ಆರೋಗ್ಯ ಇದ್ದರೆ ಹಣ ಗಳಿಸಬಹುದು'' ಎಂದಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಅನೇಕ ಹಿಂದೂಗಳ ಸಹ ಕಷ್ಟ ಎದುರಾದರೂ ಪರವಾಗಿಲ್ಲ. ಶತ್ರುಗಳಿಗೆ ಸ್ಪಷ್ಟ ಸಂದೇಶ ರವಾನಿಸಬೇಕು ಎಂಬ ಆಶಯ ಹೊಂದಿದ್ದಾರೆ.

Pahalgam Attack National Security First Even If Economy Suffers Take Revange on Terrorists

ಪಹಲ್ಗಾಮ್ ದಾಳಿಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣಗಳಲ್ಲಿ ಮಹತ್ವದ ಪೋಸ್ಟ್‌ಗಳನ್ನು ಹಂಚಿಕೊಳ್ಳಳಾಗಿದೆ. ಪಹಲ್ಗಾಮ್ ಘಟನೆಯಲ್ಲಿ ಕನ್ನಡಿಗರು ಮೃತಪಟ್ಟಿದ್ದಾರೆ. ಯಾರೆಲ್ಲ ಕನ್ನಡ ಪರ ಹೋರಾಟಗಾರರು ಏನು ಮಾಡುತ್ತಿದ್ದೀರಿ ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದರು. ಅದಕ್ಕೆ ಉತ್ತರಿದ ಅಮರನಾಥ್ ಶಿವಶಂಕರ್ ಅವರು, ''ಭಯೋತ್ಪಾದಕ ಕೃತ್ಯ ಹೀನಾಯವಾದದ್ದು. ನಮ್ಮವರೆಲ್ಲರೂ ಸತ್ತಿದ್ದಾರೆ. ಬಹಳ ದುಃಖವಾಗಿದೆ. ಆದರೆ ಸಿಟ್ಟು ರೋಷ-ಆವೇಶ ಅಸಹಾಯಕತೆ ತಾತ್ವಿಕವಾಗಿರಬೇಕು. ಕನ್ನಡ ಹೋರಾಟಗಾರರು ಈ ಪ್ರಸಂಗವನ್ನು ತಡೆಯಲು ಸಾಧ್ಯವಿತ್ತೇ? ಎಂದು ಪ್ರಶ್ನಿಸಿದ್ದಾರೆ.

ದೇಶಕ್ಕಾಗಿ, ಶಸ್ತ್ರಾಸ್ತಗಳಿಗೆ ಅಧಿಕ ತೆರಿಗೆ ಪಡೆಯಿರಿ...

ದೇಶದ ರಕ್ಷಣೆಯ ಹೊಣೆ ಯಾರದ್ದು?. ಗುಪ್ತಚರ ವೈಫಲ್ಯ ಆಗಿದ್ಯಾಕೆ?. ದೇಶದ ಒಳಗಿರುವ ಶತೃಗಳ ಪಾತ್ರವೇನು?

ಸೇನೆಯಲ್ಲಿ ಜನ ಬಲ ಹೆಚ್ಚಿಸಬೇಕಿದೆಯೇ?. ಸೇನೆಯಲ್ಲಿ ಹೊಸತಲೆಮಾರಿನ ಶಸ್ತ್ರಾಸ್ತ್ರಗಳನ್ನು ಕೊಳ್ಳಬೇಕೆ?.

ಇದೆಲ್ಲ ಮಾಡಲು ನಮ್ಮ ತೆರಿಗೆಯಲ್ಲಿ ಮತ್ತಷ್ಟು ಪಾಲು ತೆಗೆದುಕೊಳ್ಳಲಿ, ಬೇಸರವಿಲ್ಲ ಎನ್ನುವ ಮೂಲಕ ದೇಶದ ರಕ್ಷಣೆಗೆ ಆರ್ಥಿಕ ಹೊರೆ ಎದುರಿಸಲು ಜನ ಸಿದ್ಧ ಎಂಬಂತೆ ಹೇಳಿದ್ದಾರೆ.

ರಾಜಕೀಯ ಪಕ್ಷಗಳ ಬಾಲಂಗೋಚಿ ಆಗಬಾರದು

ಇಂತಹ ಪ್ರಶ್ನೆಗಳನ್ನು ನಾವುಗಳು ಎತ್ತಲೇಬೇಕು. ರಾಜಕೀಯ ಪಕ್ಷಗಳ ಬಾಲಂಗೋಚಿಯಾಗುವ ಬದಲು ನಮ್ಮ ದೇಶವನ್ನು ಹೇಗೆ ಸಧೃಡವಾಗಿ ಕಾಣಬೇಕು ಅನ್ನುವುದು ಎಲ್ಲಕ್ಕಿಂತ ಮುಖ್ಯ. ಪಕ್ಷಗಳು, ರಾಜಕಾರಣಿಗಳು ಯಾವುದು ಶಾಶ್ವತವಲ್ಲ. ಭಾರತ ಮತ್ತು ಭಾರತಿಯರ ಬದುಕು ಅಷ್ಟೇ ಶಾಶ್ವತ. ಅದನ್ನು ಕಾಪಾಡಿಕೊಳ್ಳಬೇಕು ಎನ್ನುವ ಮೂಲಕ ಪಹಲ್ಗಾಮ್ ಘಟನೆ ಬೆನ್ನಲ್ಲೆ ದೇಶ, ಗಡಿ ಭದ್ರತೆ, ಜನರ ಹಿತ ಮುಖ್ಯ. ಅದರ ಯಾವುದು ಮುಖ್ಯವಲ್ಲ ಎಂದಿದ್ದಾರೆ.

ಅಮರನಾಥ್ ಅವರಂತೇ ದೇಶದ ಅನೇಕರು ಸಹ ಉಗ್ರರು ನೀಡಿದ ಸಂದೇಶವನ್ನು ಸರಿಯಾಗಿ ಅರ್ಥ ಮಾಡಿಕೊಂಡು, ರಾಜಕೀಯ ಬದಿಗಿಟ್ಟು ಹಿಂದೂಗಳು ಒಂದಾಗಬೇಕು. ಕೇಂದ್ರ ಸರ್ಕಾರ ಅಗತ್ಯ ಕ್ರಮ ಜರುಗಿಸಬೇಕು. ಪಹಲ್ಗಾಮ್ ನಲ್ಲಿ ಮೃತಪಟ್ಟ ಪ್ರವಾಸಿಗರ ಜೀವಕ್ಕೆ ನ್ಯಾಯ ಒದಗಿಸಲೇಬೇಕು ಎಂಬ ಮಹತ್ತರ ಬೇಡಿಕೆಯನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಮುಂದಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಉಗ್ರರ ದಾಳಿ ಖಂಡಿಸಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ದೇಶದ ನಾನಾ ಭಾಗಗಳಲ್ಲಿ ಈಗಾಗಲೇ ಪ್ರತಿಭಟನೆ ಆರಂಭವಾಗಿದೆ. ಸರ್ಕಾರ ಸುಮ್ಮನ್ನ ಕೂರದೇ ಸರ್ಜಿಕಲ್ ಸ್ಟ್ರೈಕ್ ಮಾಡಿ ಉಗ್ರರನ್ನು ಮಟ್ಟ ಹಾಕುವಂತೆ ಮನವಿ ಮಾಡಿದ್ದಾರೆ. ಪಾಕಿಸ್ತಾನ ಹಾಗೂ ಉಗ್ರಹ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರತಿಭಟನೆ ಮೆರವಣಿಗೆ ಮುಂದುವರಿಯಲಿವೆ.

ಬಿಹಾರ ಪ್ರವಾಸದಲ್ಲಿ ಮೋದಿ, ಕಾರ್ಯಕ್ರಮದಲ್ಲಿ ಭಾಗಿ

ಗುರುವಾರ ಬಿಹಾರ ರಾಜ್ಯದ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ದೇಶ ಉದ್ದೇಶಿಸಿ ಮಾತನಾಡಿದರು. ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂಗಲ ನೆತ್ತರು ಹರಿದಿದೆ. ಈ ಸಮಯದಲ್ಲಿ ನಾವೇಲ್ಲರು ಒಟ್ಟಾಗಬೇಕು. ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟದವರಿಗೆ ಗೌರವ ಸೂಚಕವಾಗಿ ಎಲ್ಲರೂ ಒಂದು ನಿಮಿಷ ಮೌನಾಚಾರಣೆ ಮಾಡುವಂತೆ ಅವರು ಕೋರಿದರು. ಸಾರ್ವಜನಿಕ ಸಭೆಗೆ ಆಗಮಿಸಿದ್ದ ಸಹಸ್ರಾರು ಜನರು, ಕಾರ್ಯಕರ್ತರು, ಪಕ್ಷದ ಮುಖಂಡರು ಮೌನಾಚರಣೆ ಮಾಡಿದರು.

ಪಹಲ್ಗಾಮ್‌ದಲ್ಲಿನ ಉಗ್ರರ ಹೇಯ ಕೃತ್ಯವನ್ನು ಹಾಗೂ ಅವರೊಂದಿಗೆ ಕೈ ಜೋಡಿಸಿದವರನ್ನು ಭಾರತೀಯ ಸೇವೆ ಹುಡುಕಿಕೊಳ್ಳಲಿದೆ. ಈ ಶಪತ ಎಂದೂ ಮುರಿಯಲ್ಲ. ಭಯೋತ್ಪಾದಕರ ಬೆನ್ನು ಮೂಳೆಯನ್ನೇ ಮುರಿಯುತ್ತೇವೆ. ಇದು ಪ್ರವಾಸಿಗರ ಮೇಲೆ ಮಾತ್ರ ಆಗಿರುವ ದಾಳಿ ಅಲ್ಲ. ಕೋಟ್ಯಂತರ ಭಾರತೀಯರ ಆತ್ಮಗಳ ಮೇಲೆ ಆಗಿರುವ ದಾಳಿ ಎಂದು ಅವರು ಆಕ್ರೋಶದ ನುಡಿ ನುಡಿದರು. ಹಿಂದೂ ಅಮಾಯಕರನ್ನು ಉಗ್ರರು ಕೊಂದಿದ್ದಾರೆ. ಊಹಿಸಲೂ ಸಾಧ್ಯವಾಗದಂತಹ ರೀತಿಯಲ್ಲಿ ತಿರುಗೇಟು ನೀಡುತ್ತೇವೆ ಎಂದು ಅವರು ಪಾಕಿಸ್ತಾನ ಹಾಗೂ ಉಗ್ರರಿಗೆ ನೇರ ಎಚ್ಚರಿಕೆ ಸಂದೇಶ ರವಾನಿಸಿದರು.

ಗಡಿ ಆಚೆಗಿರುವ ಉಗ್ರರ ಅಡಗುತಾಣಗಳನ್ನು ಪತ್ತೆ ಮಾಡಿ ಮಟ್ಟ ಹಾಕುತ್ತೇವೆ. ಉಗ್ರರು ಎಲ್ಲೆ ಅಡಗಿದ್ದರು ಸಹ ಬಿಡುವ ಮಾತೇ ಇಲ್ಲ.ಈ ದಾಳಿಯಿಂದ ಕೋಟ್ಯಾನು ಕೋಟಿ ಭಾರತೀಯರಿಗೆ ಆಘಾತವಾಗಿದೆ. ಕಾಶ್ಮೀರ ದಾಳಿಗೆ ತಕ್ಕ ಪ್ರತ್ಯುತ್ತರ ಕೊಟ್ಟೇ ಕೊಡುತ್ತೇವೆ. ಇದು ನಿಶ್ಚಿತ ಎಂದು ಅವರು ಸಾರ್ವಜನಿಕ ಸಮಾವೇಶದಲ್ಲಿ ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+