• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

OYO ಸಿಇಒ ರಿತೇಶ್ ವಿರುದ್ಧ 420 ಕೇಸ್ ಹಾಕಿದ ಬೆಂಗಳೂರು ಪೊಲೀಸರು

|
   OYO ಸಿಇಒ ರಿತೇಶ್ ವಿರುದ್ಧ 420 ಕೇಸ್ ಹಾಕಿದ ಬೆಂಗಳೂರು ಪೊಲೀಸರು

   ಬೆಂಗಳೂರು, ಸೆ. 06: ಆನ್ ಲೈನ್ ಮೂಲಕ ಹೋಟೆಲ್ ರೂಮ್ ಬುಕ್ ಮಾಡುವ ಓಯೋ(OYO) ಅಪ್ಲಿಕೇಷನ್ ವ್ಯವಸ್ಥೆ ಸ್ಥಾಪಕ, ಸಿಇಒ ವಿರುದ್ಧ ಬೆಂಗಳೂರು ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

   ಓಯೋ ಹೋಟೆಲ್ಸ್ ಅಂಡ್ ಹೋಮ್ಸ್ ಸಿಇಒ ರಿತೇಶ್ ಅಗರವಾಲ್ ಹಾಗೂ ಸಂಸ್ಥೆ ಇನ್ನಿಬ್ಬರು ಪ್ರತಿನಿಧಿಗಳ ವಿರುದ್ಧ ವಂಚನೆ ಹಾಗೂ ಕ್ರಿಮಿನಲ್ ಉದ್ದೇಶದಿಂದ ವ್ಯಾವಹಾರಿಕ ಒಪ್ಪಂದ ಮುರಿದ ದೂರು ಕೇಳಿ ಬಂದಿದೆ.

   ವೈಟ್ ಫೀಲ್ಡ್ ನ ಬಿಇಎಂಎಲ್ ಲೇಔಟಿನಲ್ಲಿ ರಾಜ್ ಗುರು ಶೆಲ್ಟರ್ ಹೋಟೆಲ್ ಮಾಲೀಕರಾಗಿರುವ ಮಾಜಿ ಯೋಧ ನಟರಾಜನ್ ವಿ.ಆರ್.ಎಸ್ ಅವರು ಓಯೋ ಮಾಲೀಕರ ವಿರುದ್ಧ ದೂರು ನೀಡಿದ್ದಾರೆ.

   ಜೂನ್ 2017ರಲ್ಲಿ ಓಯೋ ಜೊತೆ ಆಗಿದ್ದ ಒಪ್ಪಂದದಂತೆ ಓಯೋ 20% ಉಳಿಸಿಕೊಂಡು 80% ನೀಡುವುದಾಗಿ ಹೇಳಿದ್ದರು. ಆದರೆ, ಓಯೋ ಬೆಂಗಳೂರಿನ ಪ್ರತಿನಿಧಿಗಳಾದ ಆನಂದ್ ರೆಡ್ಡಿ ಹಾಗೂ ಪ್ರತೀಕ್ ಸಿಂಗ್ ಅವರು 80% ತಮ್ಮ ಬಳಿ ಉಳಿಸಿಕೊಂಡು 20% ಹಣವನ್ನು ಮಾತ್ರ ನಮಗೆ ನೀಡಿದ್ದಾರೆ. ಈ ರೀತಿ ವಂಚನೆಯಿಂದ ಸುಮಾರು 1 ಕೋಟಿ ರು ಗಳಷ್ಟು ನಷ್ಟವಾಗಿದೆ ಎಂದು ದೂರಿನಲ್ಲಿ ನಟರಾಜನ್ ಹೇಳಿದ್ದಾರೆ.

   ದೂರು ಸ್ವೀಕರಿಸಿರುವ ವೈಟ್ ಫೀಲ್ಡ್ ಠಾಣೆ ಪೊಲೀಸರು ಮೂವರ ವಿರುದ್ಧ ಐಪಿಸಿ ಸೆಕ್ಷನ್ 406, 420 ಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

   English summary
   Bengaluru police have booked the CEO and founder of Oyo Hotels and Homes Ritesh Agarwal and two of his representatives.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X