ನಮ್ಮದು ಪಕ್ಷಾಂತರವಲ್ಲ ರಾಜಕೀಯ ಧೃವೀಕರಣ: ಎಚ್‌ ವಿಶ್ವನಾಥ್

ಬೆಂಗಳೂರು, ನವೆಂಬರ್ 14: ಯಡಿಯೂರಪ್ಪ ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿಯಲು ನಾವು 17 ಮಂದಿ ಬಿಜೆಪಿಗೆ ಬಂದಿದ್ದೇವೆ ಎಂದು ಎಚ್‌.ವಿಶ್ವನಾಥ್ ಹೇಳಿದ್ದಾರೆ.

ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದ ಬಳಿಕ ಮಾತನಾಡಿರುವ ಅವರು ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನರೂ ಸಹ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

ಇಂದು ಪಕ್ಷಗಳು ವಿಫಲವಾಗಿವೆ. ಪಕ್ಷ ರಾಜಕಾರಣ ವಿಫಲವಾಗಿದೆ.ಹಾಗಾಗಿ ಧೃವೀಕರಣ ಆಗಬೇಕೆಂದು ನಾವು ರಾಜೀನಾಮೆ ಕೊಡಬೇಕಾಯ್ತು.

Ours Is Not Defection But Political Polarization

ನಮ್ಮನ್ನು ರಾಜ್ಯ ರಾಜಕಾರಣದಿಂದ ಹೊರಗಿಡಬೇಕೆಂದು ಹುನ್ನಾರ ಮಾಡಲಾಯ್ತು.ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಮೂಲಕ ಚುನಾವಣಾ ರಾಜಕಾರಣದಿಂದಲೂ ನಮ್ಮನ್ನು ದೂರವಿಡುವ ಪ್ರಯತ್ನ ಮಾಡಲಾಯ್ತು.ಆದರೆ ನಿನ್ನೆ ಸುಪ್ರಿಂ ಕೋರ್ಟ್ ಆ ಹುನ್ನಾರವನ್ನು ವಿಫಲಗೊಳಿಸಿದೆ.

ನಾವು ಯಾರು ಕೂಡ ಅಧಿಕಾರಕ್ಕಾಗಿ ಅಧಿಕಾರ ತ್ಯಾಗ ಮಾಡಿದವರಲ್ಲ. ಕರ್ನಾಟಕದಲ್ಲಿದ್ದ ರಾಕ್ಷಸ ರಾಜಕಾರಣವನ್ನು ಕಡೆಗಾಣಿಸಲು ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯ್ತು.ಇದು ಪಕ್ಷಾಂತರವಲ್ಲ‌.ಇದು ರಾಜಕೀಯ ಧೃವೀಕರಣ ಎಂದು ಹೇಳಿದರು.

ರಮೇಶ್ ಜಾರಕಿಹೋಳಿ, ವಿಶ್ವನಾಥ್, ಸೀಮಂತ್ ಪಾಟೀಲ್, ಪ್ರತಾಪ್ ಗೌಡ ಪಾಟೀಲ್, ಬಿ ಸಿ ಪಾಟೀಲ್ , ಶಿವರಾಂ ಹೆಬ್ಬಾರ್, ಆನಂದ್ ಸಿಂಗ್, ಡಾ.ಸುಧಾಕರ್, ಬೈರತಿ ಬಸವರಾಜ್, ಎಸ್ ಟಿ ಸೋಮಶೇಕರ್, ಮುನಿರತ್ನ, ಗೋಪಾಲಯ್ಯ, ನಾರಾಯಣಗೌಡ, ಆರ್ . ಶಂಕರ್ ಸೇರ್ಪಡೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+