• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಾಲಹಳ್ಳಿ ಪೊಲೀಸರ ವಶಕ್ಕೆ ಆರೋಪಿ ಗುಂಡಣ್ಣ

By Mahesh
|

ಬೆಂಗಳೂರು, ಅ.26: ಆರ್ಕಿಡ್ಸ್ ಇಂಟರ್ ನ್ಯಾಷನಲ್ ಶಾಲೆಯ ನರ್ಸರಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಹೊತ್ತಿರುವ ಅಟೆಂಡರ್ ಗುಂಡಣ್ಣನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡಲಾಗಿದೆ.

ಕೋರಮಂಗಲದಲ್ಲಿರುವ 51ನೇ ವಿಶೇಷ ಕೋರ್ಟ್ ನ್ಯಾಯಾಧೀಶೆ ಶುಭಾ ಗೌಡರ್ ಅವರ ನಿವಾಸಕ್ಕೆ ಆರೋಪಿ ಗುಂಡಪ್ಪನನ್ನು ಜಾಲಹಳ್ಳಿ ಪೊಲೀಸರು ಭಾನುವಾರ ಮಧ್ಯಾಹ್ನ ಹಾಜರುಪಡಿಸಿ, ಹೆಚ್ಚಿನ ವಿ‌ಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕೆಂದು ಮನವಿ ಮಾಡಿಕೊಂಡರು.

ನ್ಯಾ. ಶುಭಾ ಅವರು ಪೊಲೀಸರ ಮನವಿಯನ್ನು ಪುರಸ್ಕರಿಸಿ 6 ದಿನಗಳ ಜಾಲಹಳ್ಳಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಇದಕ್ಕೂ ಮುನ್ನ 7ನೇ ಎಸಿಎಂಎಂ ನ್ಯಾಯಾಧೀಶರು ರಜೆ ಮೇಲೆ ಪ್ರವಾಸಕ್ಕೆ ತೆರಳಿರುವುದರಿಂದ ಆರೋಪಿಯನ್ನುನ್ಯಾ. ಶುಭಾ ಅವರ ನಿವಾಸಕ್ಕೆ ಕರೆದೊಯ್ಯಲಾಯಿತು. [ಶಾಲೆ ವಿರುದ್ಧ ಕ್ರಿಮಿನಲ್ ಕೇಸ್]

ಶಾಲೆ ಪುನರ್ ಆರಂಭ?: ಆರ್ಕಿಡ್ಸ್ ಇಂಟರ್ ನ್ಯಾಷನಲ್ ಶಾಲೆ ಒಂದರಿಂದ ಐದನೇ ತರಗತಿ ವರಗೆ ಸೋಮವಾರ(ಅ.27)ದಿಂದ ಪುನಾರಂಭಗೊಳ್ಳಲಿದೆ. ಆದರೆ, ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ಆರು ಮತ್ತು ಏಳನೇ ತರಗತಿಗಳು ನಾಳೆ ಆರಂಭವಾಗುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಬುಧವಾರದ ನಂತರ ಶಾಲೆ ಆರಂಭದ ಬಗ್ಗೆ ಇರುವ ಗೊಂದಲ ನಿವಾರಣೆಯಾಗಲಿದೆ ಎಂದಿದ್ದಾರೆ.

ಈ ಹಿಂದಿನ ಅಪ್ದೇಟ್ಸ್ : ಆರ್ಕಿಡ್ಸ್ ಇಂಟರ್ ನ್ಯಾಷನಲ್ ಶಾಲೆ ನರ್ಸರಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದ್ದು ಶಾಲೆ ಆವರಣದಲ್ಲೇ ಎಂಬುದು ದೃಢಪಟ್ಟಿದೆ. ಆರೋಪಿ ಗುಂಡಣ್ಣ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ತನಿಖಾಧಿಕಾರಿ ಸ್ಪಷ್ಟಪಡಿಸಿದ್ದರು.

ಜಾಲಹಳ್ಳಿಯ ಎ.ಕೆ ಕಾಲೋನಿಯ ನಿವಾಸಿಯಾಗಿರುವ ಗುಂಡಣ್ಣ ಕಳೆದ ಎರಡು ವರ್ಷಗಳಿಂದ ಆರ್ಕಿಡ್ಸ್ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ತನಿಖೆ ಆರಂಭಗೊಂಡ ದಿನದಿಂದಲೂ ಗುಂಡಣ್ಣನ ಮೇಲೆ ಸಂಶಯ ವ್ಯಕ್ತವಾಗಿತ್ತು. ಸಂತ್ರಸ್ತ ಮಗುವಿನ ಹೇಳಿಕೆ ಮುಖ್ಯವಾಗಿತ್ತು. ಗುಂಡಣ್ಣನ ಫೋಟೋ ಗುರುತಿಸಿದ ಮಗು, ಈ ಅಂಕಲ್ ನನಗೆ ಹರ್ಟ್ ಮಾಡಿದರು ಎಂದು ಹೇಳಿದ್ದಳು. ಗುಂಡಣ್ಣನ ವಿರುದ್ಧ ಸಾಕ್ಷಿಗಳು, ಹೇಳಿಕೆಗಳು ಸಿಕ್ಕ ಬೆನ್ನಲ್ಲೇ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. [ವಿಬ್ ಗಯಾರ್ ಶಾಲೆ ನೀಚ ಕೃತ್ಯ]

ಪ್ರಕರಣ ಸಂಬಂಧ ಜಾಲಹಳ್ಳಿ ಠಾಣೆ ಪೊಲೀಸರು ಲೈಂಗಿಕ ಕಿರುಕುಳದಿಂದ ಮಕ್ಕಳ ರಕ್ಷಣೆಗಾಗಿರುವ ಪೋಕ್ಸೋ ಕಾಯ್ಡೆ 2012ರ ಸೆಕ್ಷನ್ 4, 6ರ ಅಡಿಯಲ್ಲಿ, ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪ್ರಕರಣದ ತನಿಖೆಯನ್ನು ಎಸಿಪಿ(ಮಲ್ಲೇಶ್ವರ) ಸಾರಾ ಫಾತಿಮಾ ನೇತೃತ್ವದಲ್ಲಿ ತಂಡ ನಡೆಸುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Orchids, The International School's office assistant Gundanna (45) who raped the three-and-a-half-year-old girl inside the school at Jalahalli was sent to six days of police custody today by 51th court special Judge Shubha Gowda. Gundanna,was arrested by CCB police on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more