ಪೂಜೆ ಮಾಡಿ ಹೊಸ ಕಚೇರಿ ಪ್ರವೇಶಿಸಿದ ಯಡಿಯೂರಪ್ಪ

Recommended Video

      ವಿಧಾನಸೌಧದ ಹೊಸ ಕಚೇರಿಗೆ ಪೂಜೆ ಮಾಡಿ ಪ್ರವೇಶಿಸಿದ ಬಿ ಎಸ್ ಯಡಿಯೂರಪ್ಪ

      ಬೆಂಗಳೂರು, ಜುಲೈ 02: ವಿರೋಧ ಪಕ್ಷ ನಾಯಕ ಯಡಿಯೂರಪ್ಪ ಅವರು ವಿಧಾನಸೌಧದ ತಮ್ಮ ಕಚೇರಿಗೆ ವಿಶೇಷ ಪೂಜೆ ಮಾಡಿ ಪ್ರವೇಶ ಮಾಡಿದರು.

      ಬಜೆಟ್ ಅಧಿವೇಶನದ ಮೊದಲ ದಿನ ಸದನಕ್ಕೆ ಹಾಜರಾಗಿದ್ದ ಯಡಿಯೂರಪ್ಪ ಅವರು ಅದಕ್ಕೂ ಮುನ್ನಾ ತಮಗೆ ನೀಡಲಾಗಿರುವ ಕಚೇರಿ ಕೊಠಡಿಯ ಪೂಜೆ ಮಾಡಿದರು.

      ಯಡಿಯೂರಪ್ಪ ಅವರಿಗೆ ವಿಧಾನಸೌಧದ 161ನೇ ಕೊಠಡಿ ನೀಡಲಾಗಿದೆ. ಗಣೇಶ, ಲಕ್ಷ್ಮಿ, ಸರಸ್ವತಿ ಅವರುಗಳ ಫೊಟೊಕ್ಕೆ ಪೂಜೆ ಸಲ್ಲಿಸಿದರು. ಅರ್ಚಕರೊಬ್ಬರ ನೇತೃತ್ವದಲ್ಲಿ ಬಿಎಸ್‌ವೈ ಪೂಜೆ ಮಾಡಿದರು.

      Opposition leader Yeddyurappa gets no.161 room in Vidhana soudha

      ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಹಾತ್ಮಾ ಗಾಂಧಿಜಿ, ಬಿ.ಆರ್.ಅಂಬೇಡ್ಕರ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ, ಎಲ್‌.ಕೆ.ಅಡ್ವಾಣಿ, ಆರ್‌ಎಸ್‌ಎಸ್‌ ಹಿರಿಯ ನಾಯಕ ಶಾಮ್ ಪ್ರಸಾದ್ ಅವರುಗಳ ಭಾವಚಿತ್ರಗಳನ್ನು ಇಟ್ಟಿದ್ದಾರೆ.

      ಯಡಿಯೂರಪ್ಪನವರು 3ನೆಯ ಬಾರಿಗೆ ವಿರೋಧಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದು, ವಿರೋಧಪಕ್ಷದಲ್ಲಿದ್ದುಕೊಂಡು ಅಪವಿತ್ರ ಮೈತ್ರಿ ಸರ್ಕಾರದ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವುದಾಗಿ ಅವರು ಹೇಳಿದರು. ರಾಜ್ಯದ ಜನತೆ ತಮ್ಮೊಂದಿಗೆ ಇರುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

      Opposition leader Yeddyurappa gets no.161 room in Vidhana soudha

      ಹೊಸ ಕಚೇರಿ ಪ್ರವೇಶದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ರುದ್ರೇಗೌಡರು, ಶ್ರೀ ಕೆ.ಪಿ ನಂಜುಂಡಿಯವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+