Opinion: ಹೊಸ ವರ್ಷದ ಸಂಭ್ರಮದಲ್ಲಿ ಕುಡಿದು ಬೀಳುವವರನ್ನು ಡ್ರಾಪ್ ಮಾಡುವುದು ಪೊಲೀಸರ ಕೆಲಸವೇ
ಬೆಂಗಳೂರಿನಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಬೆಂಗಳೂರಿನ ಹೊಸ ವರ್ಷ ಸಂಭ್ರಮಾಚರಣೆಯ ಕೇಂದ್ರ ಬಿಂದು ಎಂದೇ ಫೇಮಸ್ ಆಗಿರುವ ಎಂಜಿ ರಸ್ತೆಯಲ್ಲಿ ಡಿಸೆಂಬರ್ 31ರ ರಾತ್ರಿ ಲಕ್ಷಾಂತರ ಜನ ಸೇರುವ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ಕುಡಿದು ತೂರಾಡುವವರನ್ನು ಅವರ ಮನೆಗೆ ಡ್ರಾಪ್ ಮಾಡಿಸುವ ವ್ಯವಸ್ಥೆ ಮಾಡುತ್ತಿದ್ದೇವೆ ಎನ್ನುವ ರಾಜ್ಯ ಸರ್ಕಾರದ ನಿರ್ಧಾರ ನಗೆಪಾಟಲೇ ಸರಿ. ಜಾಸ್ತಿ ಕುಡಿದವರನ್ನು ಮಾತ್ರ ಡ್ರಾಪ್ ಮಾಡುವ ವ್ಯವಸ್ಥೆ ಮಾಡುತ್ತೇವೆ, ಮದ್ಯ ಸೇವಿಸಿ ಪ್ರಜ್ಞೆ ತಪ್ಪುವವರಿಗೆ ತಾತ್ಕಾಲಿಕ ವಿಶ್ರಾಂತಿ ಕೊಠಡಿ ನಿರ್ಮಿಸಿರುವುದಾಗಿಯೂ ಸರ್ಕಾರ ಹೇಳಿದೆ. ಸರ್ಕಾರವೊಂದು ಮದ್ಯ ಸೇವಿಸುವವರಿಗೆ ಇಷ್ಟೊಂದು ಸೌಲಭ್ಯ ಕಲ್ಪಿಸುತ್ತಿರುವುದು ಇದೇ ಮೊದಲು.
ಪೊಲೀಸರ ಕರ್ತವ್ಯ ಇಲ್ಲಿ ಜನರ ರಕ್ಷಣೆ ಹಾಗೂ ಭದ್ರತೆಯಾಗಬೇಕು. ಕುಡಿತು ತೂರಾಡುವವರನ್ನು ವಿಶ್ರಾಂತಿ ಕೊಠಡಿಗೆ ಕರೆದುಕೊಂಡು ಹೋಗಿ ಬಿಡುವ ವ್ಯವಸ್ಥೆ ಮಾಡುವುದಲ್ಲ. ಹೊಸ ವರ್ಷದಲ್ಲಿ ಮದ್ಯ ಸೇವಿಸುವುದು, ಸಂಭ್ರಮಿಸುವುದು ಅವರವರ ವೈಯಕ್ತಿಕ ಆಯ್ಕೆಗಳು. ಪ್ರತಿಯೊಬ್ಬರಿಗೂ ಅವರ ಸಂತೋಷವನ್ನು ಸಂಭ್ರಮಿಸುವ ಆಯ್ಕೆಗಳಿವೆ. ಹೊಸ ವರ್ಷದ ದಿನವೂ ಸಹ ಯುವಕ / ಯುವತಿ ಯಾರಾದರು ಸರಿ ಮದ್ಯ ಸೇವನೆ ಮಾಡುವುದು ಅವರ ಆಯ್ಕೆ. ಅದಕ್ಕೆ ಅವರು ಸ್ವತಂತ್ರ್ಯರೂ. ಆದರೆ ಇದಕ್ಕೆ ರಾಜ್ಯ ಪೊಲೀಸರನ್ನು ಬಳಸಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.

ಬೆಂಗಳೂರಿನ ಎಂ.ಜಿ ರಸ್ತೆ ಪ್ರದೇಶದಲ್ಲಿ ಜನ ದಟ್ಟಣೆಯನ್ನು ನಿಯಂತ್ರಿಸುವುದಕ್ಕೆ ವಾಟರ್‌ಜೆಟ್, ಸಿವಿಲ್ ಡಿಫೆನ್ಸ್ ಹಾಗೂ ಹೋಮ್ ಗಾರ್ಡ್ ಸೇರಿದಂತೆ ಒಟ್ಟು 20,000 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಎಂಜಿ ರಸ್ತೆ ಹಾಗೂ ಕೋರಮಂಗಲ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕ್ಯಾಂಪ್ ಅಂತ ಮಾಡಿ ಒಂದೊಂದು ಬೆಡ್ ಹಾಕಿದ್ದಾರೆ ಓವರ್ ಟೈಟ್ (ಹೆಚ್ಚು ಮದ್ಯ ಸೇವಿಸುವವರಿಗೆ) ಆದವರಿಗೆ ಮನೆವರೆಗೆ ಪೊಲೀಸ್ ಡ್ರಾಪ್ ಕೊಡಲಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯೇ ಸರಿ.
ಬೆಂಗಳೂರಿನಲ್ಲಿ ಈ ಹಿಂದಿನ ವರ್ಷಗಳ ಹೊಸ ವರ್ಷ ಸಂಭ್ರಮಾಚರಣೆಯ ಸಂದರ್ಭಗಳಲ್ಲೂ ಕೆಲವೊಂದು ಅವಘಡಗಳು ಸಂಭವಿಸಿರುವುದು ಇದೆ. ಇದು ದೇಶದಾದ್ಯಂತ ಸುದ್ದಿಯಾಗಿ ಕರ್ನಾಟಕಕ್ಕೆ ಮುಜುಗರವೂ ಆಗಿತ್ತು. ಕೆಲವು ಯುವಕ / ಯುವತಿಯರು ಕುಡಿದು ತೂರಾಡಿದ್ದರು, ಸಣ್ಣಪುಟ್ಟ ಗಲಾಟೆಗಳೂ ಸಹ ನಡೆದಿತ್ತು. ಆದರೆ ಆ ಕಹಿ ಘಟನೆಗಳಿಂದ ತಪ್ಪಿಸಿಕೊಳ್ಳಲು ಮದ್ಯ ಸೇವನೆ ಮಾಡಿದವರಿಗೆ ವಿಶ್ರಾಂತಿ ವ್ಯವಸ್ಥೆ ಮಾಡುತ್ತೇವೆ ಎನ್ನುವುದು ಉತ್ತರವಲ್ಲ. ಅದರಲ್ಲೂ ಈ ಕೆಲಸಗಳಿಗೆ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಳ್ಳುವುದು ಕರ್ನಾಟಕ ಪೊಲೀಸರ ಘನತೆಗೆ ಧಕ್ಕೆ ತರುವಂತಹ ನಿರ್ಧಾರ.
ಭದ್ರತೆಯೇ ಮೊದಲ ಆದ್ಯತೆ
ದೇಶದಲ್ಲಿ ಅಹಿತಕರ ಘಟನೆಗಳು, ವಿಧ್ವಂಸಕ ಕೃತ್ಯಗಳು ನಡೆಯುತ್ತಿರುವಾಗ ಲಕ್ಷಾಂತರ ಜನ ಸೇರುವ ಬೆಂಗಳೂರಿನ ಪ್ರದೇಶಗಳಲ್ಲಿ ಭದ್ರತೆಯೇ ಮೊದಲ ಸವಾಲು. ಈ ರೀತಿ ಇರುವಾಗ ಕುಡುಕರನ್ನೂ ಸ್ವಲ್ಪ ನೋಡಿಕೊಳ್ಳಿ ಎಂದು ಹೇಳುವ ಮುಂಚೆ ಸರ್ಕಾರ ಈ ವಿಚಾರದಲ್ಲಿ ಚಿಂತಿಸಬೇಕಿತ್ತು. 2025ರ ಹೊಸ ವರ್ಷದಲ್ಲಿ ಬೆಂಗಳೂರಿನ ಎಂಜಿ ರಸ್ತೆಯೊಂದರಲ್ಲೇ 1 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಈ ವರ್ಷವೂ ಲಕ್ಷಾಂತರ ಜನ ಸೇರುವ ಸಾಧ್ಯತೆ ಇದೆ. ಜಿ. ಪರಮೇಶ್ವರ್ ಅವರು 'ಎಲ್ಲಾ ಕುಡುಕರನ್ನೂ ಮನೆಗೆ ಡ್ರಾಪ್ ಮಾಡಲ್ಲ. ಕೆಲವರಿಗಷ್ಟೇ ಮೊದಲು ತಾತ್ಕಾಲಿಕ ವಿಶ್ರಾಂತಿ ಕೊಠಡಿಯಲ್ಲಿ ಬೆಡ್‌ವ್ಯವಸ್ಥೆ ಮಾಡಲಾಗಿದೆ. ಮುಖ್ಯವಾಗಿ ಯುವತಿಯರ ರಕ್ಷಣೆಯ ದೃಷ್ಟಿಯಿಂದ ಈ ಕ್ರಮ' ಎಂದಿದ್ದಾರೆ.
ಇದು ಇನ್ನಷ್ಟು ಕುಡುಕರಿಗೆ ಪ್ರೋತ್ಸಾಹ ಕೊಡುವ ಅಥವಾ ಕುಡಿದು ಬಿದ್ದರೂ ಪೊಲೀಸರು ಬಂದು ಸಹಾಯ ಮಾಡಲಿದ್ದಾರೆ ಎನ್ನುವ ಬಂಡ ಧೈರ್ಯವನ್ನು ಕೆಲವು ಕುಡುಕರಿಗೆ ಕೊಡದಿದ್ದರೆ ಸಾಕು. ಎಲ್ಲಕ್ಕಿಂತ ಮುಖ್ಯವಾಗಿ ಈ ಪ್ರಶ್ನೆಗಳನ್ನು ಒಂದು ಸಮಾಜವಾಗಿ ನಮಗೆ ನಾವೇ ಕೇಳಿಕೊಳ್ಳಬೇಕು, ಸರ್ಕಾರಕ್ಕೂ ಕೇಳಬೇಕು, ಪೊಲೀಸ್ ಇಲಾಖೆಯನ್ನು ಮುನ್ನಡೆಸುತ್ತಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೂ ಕೇಳಬೇಕು.
ಪ್ರಶ್ನೆ 1: ಎಂಜಿ ರಸ್ತೆಗೆ ಬಂದು ಕುಡಿದು ಮೈಮರೆಯುವವರನ್ನು ವಾಪಸ್ ಮನೆಗೆ ಕಳಿಸುವುದು ಸರ್ಕಾರದ ಜವಾಬ್ದಾರಿಯೇ?
ಪ್ರಶ್ನೆ 2: ಕುಡಿಯಲೆಂದು ಬಂದವರಿಗೆ ವಾಪಸ್ ಮನೆ ತಲುಪುವುದು ಹೇಗೆ ಎಂದು ತಿಳಿದಿರುವುದಿಲ್ಲವೇ? ಅದಕ್ಕಾಗಿ ಅವರು ವ್ಯವಸ್ಥೆ ಮಾಡಿಕೊಂಡಿರುವುದಿಲ್ಲವೇ?
ಪ್ರಶ್ನೆ 3: ಕುಡಿದು ವಾಹನ ಚಲಾಯಿಸಬಾರದು, ಕುಡಿದರೆ ಪ್ರಜ್ಞೆ ತಪ್ಪುತ್ತದೆ ಎನ್ನುವುದು ಸಂಭ್ರಮಾಚರಣೆಗಳಲ್ಲಿ ಪಾಲ್ಗೊಳ್ಳುವವರಿಗೆ ತಿಳಿದಿರುವುದಿಲ್ಲವೇ?
ಪ್ರಶ್ನೆ 4: ಕುಡಿತಕ್ಕೆ ಕಡಿವಾಣ ಹಾಕಲು, ಯುವಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯವೇ ಇಲ್ಲದಷ್ಟು ಅಸಹಾಯಕ ಸ್ಥಿತಿಗೆ ನಮ್ಮ ಸರ್ಕಾರ, ಸಮಾಜ ತಲುಪಿದೆಯೇ?
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ












Click it and Unblock the Notifications