ಆಪರೇಷನ್‌ ಅಲುಮೇಲಮ್ಮ ಖ್ಯಾತಿಯ ನಟ ಮನಿಷ್ ವಿರುದ್ಧ ಕೇಸ್

ಬೆಂಗಳೂರು, ಅಕ್ಟೋಬರ್ 14 : ಆಪರೇಷನ್‌ ಅಲುಮೇಲಮ್ಮ ಖ್ಯಾತಿಯ ನಟ ಮನಿಷ್ ರಿಷಿ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದೆ. ಸ್ವಂತ ಚಿಕ್ಕಮ್ಮನ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಮನಿಷ್ ವಿರುದ್ಧ ಬಂದಿದೆ.

ಸುನಿ ಅವರ ನಿರ್ದೇಶನದ ಆಪರೇಷನ್‌ ಅಲುಮೇಲಮ್ಮ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಾಯಕ ರಿಷಿ ಅವರು ತಮ್ಮ, ಚಿಕ್ಕಮ್ಮ ವಿಕಲ ಚೇತನರಾಗಿರುವ ಶಾಲಿನಿ ಗುರುಮೂರ್ತಿ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಸವೇಶ್ವರನಗರದಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ.

ತಾತನ ಮನೆಯಲ್ಲೇ ರಿಷಿ ಮತ್ತು ಆತನ ತಂದೆ ತಾಯಿ ವಾಸವಿದ್ದು, ಶಾಲಿನಿಗೆ ಸ್ಟ್ಯಾಂಪ್ ಪೇಪರ್‌ಗೆ ಸಹಿ ಮಾಡಿ ಒಳಗೆ ಬರುವಂತೆ ಬೆದರಿಕೆ ಒಡ್ಡಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ರಿಷಿ ಜತೆಗೆ ತಾಯಿ ಅನಲಾ ಮತ್ತು ತಂದೆ ನಾಗರಾಜ್ ಸೇರಿ ಶಾಲಿನಿ ಮೇಲೆ ಹಲ್ಲೆ ನಡೆಸಿದ್ದಾರೆ.

Operation Alamelamma fame Monish Rishi is booked

ಶಾಲಿನಿ ತಂದೆ ಬೋರಯ್ಯನವರು ಸ್ಟ್ರೋಕ್‌ನಿಂದ ಹಾಸಿಗೆ ಹಿಡಿದಿದ್ದು, ಇವರನ್ನು ನೋಡಲೆಂದು ಮನೆಗೆ ತೆರಳಿದ್ದಾರೆ. ಈ ವೇಳೆ, ಆಸ್ತಿ ಹಂಚಿಕೆಗಾಗಿ ಮಾತುಕತೆ ನಡೆದಿದೆ. ಸ್ಟಾಂಪ್ ಪೇಪರ್ ಮೇಲೆ ಸಹಿ ಹಾಕಲು ಶಾಲಿನಿ ಅವರಿಗೆ ಒತ್ತಾಯ ಮಾಡಲಾಗಿದೆ.

ಇದಕ್ಕೆ ಒಪ್ಪದ ಕಾರಣ ರಿಷಿ ಮತ್ತು ಆತನ ತಂದೆ ನಾಗರಾಜ್, ತಾಯಿ ಅನಲಾ ಅವರು ಶಾಲಿನಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಬಸವೇಶ್ವರನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಜಾರಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+