ನಾಲ್ಕು ವಾರಗಳಲ್ಲಿ ಆನ್ ಲೈನ್ ನಲ್ಲಿ ಖಾತಾ ಅರ್ಜಿ ಲಭ್ಯ!

ಬೆಂಗಳೂರು, ಜನವರಿ 05: ಖಾತಾ ನಮೂದನೆಗೆ ಸಂಬಂಧಿಸಿದಂತೆ ಪಾರದರ್ಶಕ ಹಾಗೂ ಸಮಾನ ನೀತಿಯನ್ನು ರಚಿಸಿಲು ಬಿಬಿಎಂಪಿಯು ಕ್ರಮ ಕೈಗೊಳ್ಳುತ್ತಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ.

ಇನ್ನು ನಾಲ್ಕು ವಾರದೊಳಗೆ ಆನ್ ಲೈನ್ ಮೂಲಕ ಖಾತಾಗೆ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಸರ್ಕಾರ ಹೈಕೋರ್ಟ್ ಗೆ ತಿಳಿಸಿದೆ. ಬೆಂಗಳೂರಿನ ಜ್ಯುಡಿಶಿಯಲ್ ಲೇಔಟ್ ನಿವಾಸಿ ಮೂಕಾಂಬಿಕ ಭಟ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ವಿನೀತ್ ಕೊತಾರಿ ಅವರ ಮುಂದೆ ಸರ್ಕಾರದ ಪರ ವಕೀಲ ಮಧುಸೂದನ್ ಆರ್. ನಾಯಕ್ ಈ ವಿವರ ಸಲ್ಲಿಸಿದರು. ಖಾತೆಯನ್ನು ವರ್ಗಾಯಿಸುವಲ್ಲಿ ಬಿಬಿಎಂಪಿ ವಿಳಂಬ ಆಮಡಿದೆ ಎಂದು ಆರೋಪಿಸಿದ ಮೂಕಾಂಬಿಕಾ ಭಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಜ್ಯುಡಿಶಿಯಲ್ ಲೇ ಔಟ್ ನಲ್ಲಿರುವ ಸೈಟೊಂದರ ಖಾತೆಯನ್ನು ಬದಲಾಯಿಸಲು ತಾವು ಸಲ್ಲಿಸಿದ್ದ ಅರ್ಜಿಯನ್ನು ಬಿಬಿಎಂಪಿ ಅಧಿಕಾರಿಗಳು ಹಲವು ಸಮಯಗಳಿಂದ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಮೂಕಾಂಬಿಕಾ ಆರೋಪಿಸಿದ್ದರು.

Online application for Khata in Four weeks

ಜ್ಯುಡಿಶಿಯಲ್ ಲೇ ಔಟ್ ನಲ್ಲಿರುವ ಸೈಟ್ ಗಳ ಖಾತೆಗಳಿಗೆ ವರ್ಗಾಯಿಸಲು ಮತ್ತು ಕಟ್ಟಡ ನಿರ್ಮಾಣ ಯೋಜನೆಯ ಹೊರೆಯನ್ನು ತಮ್ಮಿಂದ ವರ್ಗಾಯಿಸಲು ಬಿಡಿಎ ಮತ್ತು ಬಿಬಿಎಂಪಿ ಪ್ರಯತ್ನಿಸಿರುವುದನ್ನು ಗಮನಿಸಿರುವ ಹೈಕೋರ್ಟ್, ರಾಜ್ಯ ಸರ್ಕಾರದ ಪರವಾಗಿ ಅಥವಾ ಬಿಬಿಎಂಪಿ ಮತ್ತು ಬಿಡಿಎಗಳಿಗೆ ಯಾವುದೇ ತೊಂದರೆಯುಂಟಾಗದಂತೆ ತಪ್ಪಿಸಲು ಸಹಾಯ ಮಾಡುವಂತೆ ಅಡ್ವೊಕೇಟ್ ಜನರಲ್ ಗೆ ನ್ಯಾಯಾದೀಶರು ಸೂಚಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+