ಭಾರೀ ಬೇಡಿಕೆ, ಮೈಸೂರಿಗೆ ಮತ್ತೊಂದು ಫ್ಲೈ ಬಸ್
ಬೆಂಗಳೂರು, ಮಾರ್ಚ್ 20 : ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೈಸೂರು-ಬೆಂಗಳೂರು ಮಾರ್ಗಕ್ಕೆ ಭಾರೀ ಬೇಡಿಕೆ ಬಂದಿದೆ. ಆದ್ದರಿಂದ, ಮತ್ತೊಂದು ಬಸ್‌ಅನ್ನು ಹೆಚ್ಚುರಿಯಾಗಿ ಓಡಿಸಲಾಗುತ್ತದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾ.22ರಿಂದ ಮತ್ತೊಂದು ಫ್ಲೈ ಬಸ್ ಮೈಸೂರಿಗೆ ಸಂಚಾರ ನಡೆಸಲಿದೆ. 2013ರಲ್ಲಿ ಆರಂಭವಾಗಿದ್ದ ಪ್ಲೈ ಬಸ್ ಸೇವೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಫ್ಲೈ ಬಸ್ ಸೇವೆ ವಿಸ್ತರಣೆ, 15 ಹೊಸ ಬಸ್ ಖರೀದಿ
ಹೆಚ್ಚುವರಿ ಬಸ್ ಮೈಸೂರು-ಬೆಂಗಳೂರು ನಗರದ ನಡುವೆ ದಿನಕ್ಕೆ 2 ಬಾರಿ ಸಂಚಾರ ನಡೆಸಲಿದೆ. ಬೆಂಗಳೂರಿನ ಏರ್‌ಪೋರ್ಟ್‌ನಿಂದ ಬೆಳಗ್ಗೆ 8ಕ್ಕೆ ಹೊರಡುವ ಬಸ್ ಮಧ್ಯಾಹ್ನ ಮೈಸೂರು ತಲುಪಲಿದೆ.
ಸಂಜೆ 6 ಗಂಟೆಗೆ ಹೊರಟು 10 ಗಂಟೆಗೆ ಮೈಸೂರು ತಲುಪಲಿದೆ.
ಮೈಸೂರಿನಿಂದ ಮಧ್ಯಾಹ್ನ 1 ಗಂಟೆಗೆ ಹೊರಡಲಿರುವ ಬಸ್ 3 ಗಂಟೆಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಮಧ್ಯಾಹ್ನ 11 ಗಂಟೆಗೆ ಹೊರಡುವ ಬಸ್ 3 ಗಂಟೆಗೆ ಬೆಂಗಳೂರನ್ನು ತಲುಪಲಿದೆ. ಪ್ರಯಾಣ ದರ 800 ರೂ.ಗಳು.
ಬಸ್ಸಿನಲ್ಲೇ ಆಹಾರ, ಟಾಯ್ಲೆಟ್; ರಸ್ತೆಗಿಳಿದ ಐಶಾರಾಮಿ 'ಐರಾವತ'
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸಲು 2013ರಲ್ಲಿ ಫ್ಲೈ ಬಸ್ ಸೇವೆ ಆರಂಭಿಸಲಾಗಿದೆ. ಪ್ರಸ್ತುತ 7 ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿಯ ಐಷಾರಾಮಿ ಬಸ್ಸುಗಳು ಸಂಚಾರ ನಡೆಸುತ್ತಿವೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !