ಮಾಧ್ಯಮ ಮತ್ತು ಪೊಲೀಸ್ ವಿಚಾರ ಸಂಕಿರಣ
ಬೆಂಗಳೂರು, ಫೆ.14 : ಬೆಂಗಳೂರು ಪೊಲೀಸ್ ಕಮೀಷನರೇಟ್ ಗೆ 50 ಮತ್ತು ಕರ್ನಾಟಕದ ಮಾಧ್ಯಮ ಅಕಾಡೆಮೆಗೆ 30 ವರ್ಷಗಳ ತುಂಬಿದ ಹಿನ್ನಲೆಯಲ್ಲಿ ಮಾಧ್ಯಮ ಮತ್ತು ಪೊಲೀಸ್ ಎಂಬ ವಿಚಾರ ಸಂಕಿರಣವನ್ನು ಫೆ.15ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ಆಯೋಜಿಸಲಾಗಿದೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಫೆ.15ರ ಶನಿವಾರ ಬೆಳಗ್ಗೆ 10.30ಕ್ಕೆ 4ನೇ ಮಹಡಿಯ ಕೊಠಡಿ ಸಂಖ್ಯೆ 419ರಲ್ಲಿ ನಡೆಯಲಿರುವ ಈ ವಿಚಾರ ಸಂಕಿರಣವನ್ನು ಗೃಹ ಸಚಿವ ಕೆಜೆ ಜಾರ್ಜ್ ಉದ್ಘಾಟಿಸಲಿದ್ದಾರೆ. ವಾರ್ತಾ ಸಚಿವ ರೋಷನ್ ಬೇಗ್ ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

ವಿಚಾರ ಸಂಕಿರಣದ ಮುಖ್ಯ ಅತಿಥಿಗಳಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಪೊಲೀಸ್ ಮಹಾನಿರ್ದೇಶಕ ಲಾಲ್ ರುಕುಂಪಚವೋ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಕೆ.ಆರ್.ನಿರಂಜನ್ ಭಾಗವಹಿಸಲಿದ್ದಾರೆ. ವಿಚಾರ ಸಂಕಿರಣದ ಆಶಯ ನುಡಿಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಆಡಲಿದ್ದು, ಮಾಧ್ಯಮ ಅಕಾಡಮೆ ಅಧ್ಯಕ್ಷ ಎಂ.ಎ.ಪೊನಪ್ಪ ಅವರು ಭಾಗವಹಿಸಲಿದ್ದಾರೆ. [ಹೆಲ್ಮೆಟ್ ಧರಿಸಿ ಇಲ್ಲವೇ ದಂಡ ಕಟ್ಟಿ]
ಬೆಳಗ್ಗೆ 11.30ರಿಂದ ಸಂಜೆ 4 ಗಂಟೆಯವರೆಗೆ ನಾಲ್ಕು ವಿಚಾರಗಳ ಕುರಿತು ವಿಚಾರ ಗೋಷ್ಠಿಯನ್ನು ಆಯೋಜಿಸಲಾಗಿದೆ. ಅಪರಾಧ ತಡೆಯುವಲ್ಲಿ ಮಾಧ್ಯಮಗಳ ಪಾತ್ರ, ಸಂಚಾರ ದಟ್ಟಣೆ ಪರಿಹಾರ, ಅಪರಾಧ ತಡೆಗೆ ಮಾಧ್ಯಮಗಳ ಚೌಕಟ್ಟು, ವಂಚನೆ ಪ್ರಕರಣಗಳು ನ್ಯಾಯ-ನೆರವು ಎಂಬ ವಿಚಾರದ ಕುರಿತು ಗೋಷ್ಠಿಗಳು ನಡೆಯಲಿವೆ.
ನಿವೃತ್ತ ಪೊಲೀಸ್ ಅಧಿಕಾರಿ ಕಸ್ತೂರಿ ರಂಗನ್, ಟೈಮ್ಸ್ ಆಫ್ ಇಂಡಿಯಾದ ಮಧುಸೂಧನ್, ಈ ಸಂಜೆ ಪತ್ರಿಕೆಯ ವರದಿಗಾರ ರಾಮಸ್ವಾಮಿ, ಸುವರ್ಣ ನ್ಯೂಸ್ ಹಿರಿಯ ವರದಿಗಾರ್ತಿ ವಿಜಯಲಕ್ಷ್ಮೀ ಶಿಬರೂರು, ಪ್ರಜಾವಾಣಿ ಮುಖ್ಯ ಉಪ ಸಂಪಾದಕ ಎಚ್.ಎಚ್.ದಯಾನಂದ, ಹಿರಿಯ ನ್ಯಾಯವಾದಿ ಎಂ.ಟಿ.ನಾಣಯ್ಯ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ್ ಸಿಂಹ, ಡಿಎನ್ಎ ಬ್ಯುರೋ ಮುಖ್ಯಸ್ಥ ನವೀನ್ ಅಮ್ಮೆಂಬಳ, ನ್ಯೂಸ್ 9 ವರದಿಗಾರ ಬನ್ನಿ ಕಾಳಪ್ಪ ಭಾಗವಹಿಸಲಿದ್ದಾರೆ.
ಮಧ್ಯಾಹ್ನದ ಗೋಷ್ಠಿಗಳಲ್ಲಿ ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸುರೇಶ್ ಬಾಬು, ಹಿರಿಯ ನ್ಯಾಯವಾದಿ ಸಿ.ಎಚ್.ಹನುಮಂತರಾಯ, ಉದಯವಾಣಿ ಹಿರಿಯ ವರದಿಗಾರ ಎ.ಎಂ.ಸುರೇಶ್, ವಿಜಯವಾಣಿ ಹಿರಿಯ ವರದಿಗಾರ ಡಿ.ಎಸ್.ಶಿವರುದ್ರಪ್ಪ, ಪಬ್ಲಿಕ್ ಟಿವಿ ಹಿರಿಯ ವರದಿಗಾರ ಅರವಿಂದ್, ಹಿರಿಯ ಪತ್ರಕರ್ತ ಬಾಲಕೃಷ್ಣ ಕಾಕತ್ಕರ್, ಇಂಡಿಯನ್ ಎಕ್ಸ್ ಪ್ರೆಸ್ ಸುದ್ದಿ ವಿಭಾಗದ ಮುಖ್ಯಸ್ಥರಾದ ಎಸ್.ರಾಜಶೇಖರ್, ಟೈಮ್ಸ್ ಆಫ್ ಇಂಡಿಯಾ ವಿಶೇಷ ವರದಿಗಾರ ಡಿ.ಎನ್.ಶಿವಕುಮಾರ್ ಭಾಗವಹಿಸಲಿದ್ದಾರೆ.












Click it and Unblock the Notifications