ಓಮಿಕ್ರಾನ್ ಪತ್ತೆಯಾದ ಬೆಂಗಳೂರು ವೈದ್ಯರ ವರದಿ ಮತ್ತೆ ಪಾಸಿಟಿವ್

ಬೆಂಗಳೂರು, ಡಿಸೆಂಬರ್ 07; ಕೋವಿಡ್ ರೂಪಾಂತರಿ ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದ ಬೆಂಗಳೂರಿನ ವೈದ್ಯರ ವರದಿ ಮತ್ತೆ ಪಾಸಿಟಿವ್ ಬಂದಿದೆ. ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಐಸೋಲೇಶನ್‌ನಲ್ಲಿಯೇ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

15 ದಿನಗಳ ಬಳಿಕ ವೈದ್ಯರಿಗೆ ಮತ್ತೊಮ್ಮೆ ಕೋವಿಡ್ ಪರೀಕ್ಷೆಯನ್ನು ಮಾಡಲಾಗಿದೆ. ಸೋಮವಾರ ನಡೆಸಿದ ಪರೀಕ್ಷೆಯ ವರದಿ ಮತ್ತೆ ಪಾಸಿಟಿವ್ ಬಂದಿದೆ. ಆದ್ದರಿಂದ ಡಿಸ್ಚಾರ್ಜ್ ಮಾಡದೇ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ವೈದ್ಯರಿಗೆ ಕೋವಿಡ್ ಸೋಂಕು ತಗುಲಿದ ಬಳಿಕ ಅವರ ಪ್ರಾಥಮಿಕ ಮತ್ತು ಎರಡನೇ ಹಂತದ ಸಂಪರ್ಕದಲ್ಲಿದ್ದವರ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಎಲ್ಲರ ವರದಿ ನೆಗೆಟಿವ್ ಬಂದಿದೆ. ಆದರೆ ವೈದ್ಯರ ವರದಿ ಮತ್ತೊಮ್ಮೆ ಪಾಸಿಟಿವ್ ಬಂದಿದೆ.

Omicron

ವೈದ್ಯರ ವರದಿ ನೆಗೆಟಿವ್ ಬಂದರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ವೈದ್ಯರು ಹೇಳಿದ್ದರು. 24 ಗಂಟೆಗಳ ಬಳಿಕ ಮತ್ತೊಮ್ಮೆ ವೈದ್ಯರ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ವೈದ್ಯರ ಪರೀಕ್ಷೆ ವರದಿ ನೆಗೆಟಿವ್ ಬರುವ ತನಕ ಸಂಪರ್ಕದಲ್ಲಿರುವ ಎಲ್ಲರೂ ಐಸೋಲೇಶನ್‌ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ವೈದ್ಯರು ಮತ್ತು ಅವರ ಸಂಪರ್ಕದಲ್ಲಿದ್ದ ಎಲ್ಲಾ ಸಹೋದ್ಯೋಗಿಗಳ ಬಿಪಿ, ಆಕ್ಸಿಜನ್ ಎಲ್ಲವೂ ಸಾಮಾನ್ಯ ಸ್ಥಿತಿಯಲ್ಲಿದೆ.

ವೈದ್ಯರಿಗೆ ಸಕ್ಕರೆ ಕಾಯಿಲೆ ಇದೆ. ಇದೇ ಕಾರಣಕ್ಕೆ ಮತ್ತೆ ವರದಿ ಪಾಸಿಟಿವ್ ಬಂದಿರಬಹುದು ಎಂದು ಶಂಕಿಸಲಾಗಿದೆ. ಈ ಹಿಂದೆ ಡೆಲ್ಟಾ ಪ್ರಕರಣ ಪತ್ತೆಯಾದ ರೋಗಿಗಳಲ್ಲಿ 21 ದಿನಗಳ ಬಳಿಕವೂ ವರದಿ ಪಾಸಿಟಿವ್ ಬಂದಿತ್ತು ಎಂದು ವೈದ್ಯರು ಹೇಳಿದ್ದಾರೆ.

ಓಮಿಕ್ರಾನ್ ಸೋಂಕು ಪತ್ತೆಯಾದ ಬಳಿಕ ವೈದ್ಯರು ಮತ್ತು ಅವರ ಜೊತೆ ಸಂಪರ್ಕದಲ್ಲಿದ್ದ ಸಹೋದ್ಯೋಗಿಗಳನ್ನು ಆಸ್ಪತ್ರೆಯಲ್ಲಿಯೇ ಐಸೋಲೇಶನ್‌ನಲ್ಲಿ ಇಡಲಾಗಿದೆ. ಯಾರಿಗೂ ಸಹ ರೋಗದ ಲಕ್ಷಣಗಳು ಕಂಡುಬಂದಿಲ್ಲ.

ಬೆಂಗಳೂರಿನ ಮೊದಲ ಪ್ರಕರಣ; ಕೋವಿಡ್ ರೂಪಾಂತರಿ ಓಮಿಕ್ರಾನ್‌ನ ಮೊದಲ ಪ್ರಕರಣ ಬೆಂಗಳೂರಿನಲ್ಲಿ ಪತ್ತೆಯಾಗಿತ್ತು. ಸೋಂಕಿತ ವ್ಯಕ್ತಿ BU-1261243 ವೈದ್ಯರಾಗಿದ್ದು, 44 ವರ್ಷದವರು. ಮೊದಲು ಮಾದರಿ ಪಡೆದ ದಿನಾಂಕ 22/11/2021. ಆಸ್ಪತ್ರೆಯಲ್ಲಿ ಮಾದರಿಯನ್ನು ಪಡೆಯಲಾಗಿದ್ದು, ವರದಿ ಪಾಸಿಟಿವ್ ಬಂದಿತ್ತು.

ನವೆಂಬರ್ 21ರಂದು ಜ್ವರ ಮತ್ತು ಮೈಕೈ ನೋವಿನ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ನವೆಂಬರ್ 22ರಂದು ಬೆಳಗ್ಗೆ 10 ಗಂಟೆಗೆ ಆಸ್ಪತ್ರೆಗೆ ಆರ್‌ಟಿಪಿಸಿಆರ್ ಪರೀಕ್ಷೆಗಾಗಿ ಆಗಮಿಸಿದ್ದರು. ಸಂಜೆ 4 ಗಂಟೆಗೆ ಪಾಸಿಟಿವ್ ಎಂಬ ವರದಿ ಬಂದಿತು.

Recommended Video

      ವಿರಾಟ್ ಕೊಹ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ಕುಣಿದದ್ದು ಹೀಗೆ | Oneindia Kannada

      ಬಳಿಕ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆಗಾಗಿ ರವಾನೆ ಮಾಡಲಾಯಿತು. ನವೆಂಬರ್ 22ರಿಂದ 24ರ ತನಕ ಹೋಂ ಐಸಸೋಲೇಷನ್‌ನಲ್ಲಿದ್ದರು. ನವೆಂಬರ್ 25ರಂದು ಆಸ್ಪತ್ರೆಗೆ ದಾಖಲಾದರು. ಮೂರು ದಿನದ ಚಿಕಿತ್ಸೆ ಬಳಿಕ ನವೆಂಬರ್ 27ರಂದು ಡಿಸ್ಚಾರ್ಜ್‌ಗೊಂಡರು. ಬಳಿಕ ಮತ್ತೆ ಆಸ್ಪತ್ರೆಯಲ್ಲಿಯೇ ಐಸೋಲೇಶನ್ ಆದರು.

      ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 13, ಎರಡನೇ ಹಂತದ ಸಂಪರ್ಕದಲ್ಲಿದ್ದ 205 ಜನರ ವರದಿ ನೆಗೆಟಿವ್ ಬಂದಿದೆ. ಆದರೆ ವೈದ್ಯರ ವರದಿ ನೆಗೆಟಿವ್ ಬರುವ ತನಕ ಎಲ್ಲರೂ ಐಸೋಲೇಶನ್‌ನಲ್ಲಿ ಇರಬೇಕು ಎಂದು ಸೂಚನೆ ಕೊಡಲಾಗಿದೆ.

      ಮಾರ್ಗಸೂಚಿಯಲ್ಲಿ ಬದಲಾವಣೆ; ಕರ್ನಾಟಕದಲ್ಲಿ ಓಮಿಕ್ರಾನ್ ಪ್ರಕರಣ ಪತ್ತೆಯಾದ ಬಳಿಕ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಕೇರಳ, ಮಹಾರಾಷ್ಟ್ರ ರಾಜ್ಯಗಳಿಂದ ಆಗಮಿಸುವ ಜನರಿಗೆ ಕೆಲವು ನಿರ್ಬಂಧಗಳನ್ನು ಹೇರಿದೆ.

      ಬೆಂಗಳೂರು ನಗರದಲ್ಲಿ ಮಾಲ್, ಸಿನಿಮಾ ಥಿಯೇಟರ್‌ಗೆ ಹೋಗಲು ಎರಡು ಡೋಸ್ ವ್ಯಾಕ್ಸಿನ್ ಪಡೆದಿರುವುದು ಕಡ್ಡಾಯವಾಗಿದೆ. ಶಾಲಾ ಮಕ್ಕಳ ಪೋಷಕರು ಸಹ ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+