ರಸ್ತೆ ದಾಟಿಸಿ ಎಂದು ಹೇಳುತ್ತಲೇ ಸರ ಕದ್ದ ಚಾಲಾಕಿ ಅಜ್ಜಿ

ಬೆಂಗಳೂರು, ಜನವರಿ 31: ವೃದ್ಧರು, ಅಶಕ್ತರು ರಸ್ತೆ ದಾಟಿಸಿ ಎಂದು ಹೇಳಿದಾಗ ಇಲ್ಲ ಎಂದು ಹೇಳಲು ಯಾರಿಗೆ ತಾನೆ ಮನಸ್ಸು ಬರುತ್ತದೆ. ಹಾಗೆಯೇ ಅಜ್ಜಿ ರಸ್ತ ದಾಟಿಸಲು ಹೇಳುತ್ತಿದ್ದಾಳಲ್ಲ ಪಾಪ ದಾಟಿಸಿ ಬಿಡೋಣ ಎಂದು ಕೈ ಹಿಡಿದು ಕರೆದುಕೊಂಡು ಹೋದರೆ ಸರವನ್ನೇ ಕದ್ದುಬಿಡೋದೆ..

ಸ್ಯಾಂಕಿ ಕೆರೆ ಬಳಿ ಕುಳಿತಿದ್ದ ವ್ಯಕ್ತಿಗೆ ರಸ್ತೆ ದಾಟಲು ಸಹಾಯ ಮಾಡುವಂತೆ ಕೋರಿದ 60 ವರ್ಷ ಮಹಿಳೆ, ಆತನನ್ನೇ ಯಾಮಾರಿಸಿ 40 ಗ್ರಾಂ ಚಿನ್ನದ ಸರವನ್ನು ದೋಚಿದ್ದಾಳೆ, ಬಸವೇಶ್ವರನಗರ ನಿವಾಸಿ ರವಿ ವಂಚನೆಗೆ ಒಳಗಾದವರು.

ಸಂಜೆ ಸ್ನೇಹಿತನ ಜೊತೆ ಮಾತನಾಡುತ್ತಾ ಕುಳಿತಿದ್ದಾಗ ಪಕ್ಕದಲ್ಲೇ 60 ವರ್ಷದ ಮಹಿಳೆ ಬಂದು ಕುಳಿತರು, ಸ್ನೇಹಿತ ಹೋದ ಮೇಲೆ ಆತನ ಜೊತೆ ಯಾಕೆ ಜೋರಾಗಿ ಮಾತನಾಡುತ್ತಿದ್ದೆ ಎಂದು ಕೇಳಿದಳು. ಒಳ್ಳೆಯದು ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಹೇಳಿ ನನ್ನ ಕುತ್ತಿಗೆ ಭಾಗದಲ್ಲಿ ಕೈತಟ್ಟಿ ಸಮಾಧಾನ ಮಾಡಿದರು.

old woman snatches gold chain

ಸ್ವಲ್ಪ ಹೊತ್ತಲ್ಲೇ ನನ್ನ ಕಣ್ಣು ಮಂಜಾದಂತೆ ಅನುಭವವಾಯಿತು. ಕಣ್ಣು ಒರೆಸಿಕೊಳ್ಳುತ್ತಿದ್ದಾಗ ಆ ಮಹಿಳೆ ರಸ್ತೆ ದಾಟಿಸು ಎಂದಳು. ರಸ್ತೆ ದಾಟಿಸಿದಾಗ ಕನಿಕರ ಹುಟ್ಟಿ ಅಜ್ಜಿ ಎಂದು ಕರೆದು 200 ರೂ ನೀಡಿ ಆಟೋದಲ್ಲಿ ಹೋಗುವಂತೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+