ಬಿಎಂಟಿಸಿ ಅಪಘಾತಗಳ ತಡೆಗೆ ಕಾರಣವಾಗಿದ್ದ ಅಧಿಕಾರಿ ನಿವೃತ್ತಿ ದಿನವೇ ಅಮಾನತು
ಬೆಂಗಳೂರು, ಮಾರ್ಚ್ 12: ಎಲೆಕ್ಟ್ರಿಕ್ ಬಸ್ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮುಖ್ಯ ಎಂಜಿನಿಯರ್‌ನ್ನು ಸೇವಾವಧಿಯ ಕೊನೆಯ ಕ್ಷಣದಲ್ಲಿ ಅಮಾನತುಗೊಳಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಎಂಜಿನಿಯರ್ ಗಂಗಾಧರ ಗೌಡ ನಿರಾಕರಿಸಿದ್ದರು. ಇದು ಬಿಎಂಟಿಸಿ ಕೆಲವು ಹಿರಿಯ ಅಧಿಕಾರಿಗಳು ನುಂಗಲಾರದ ತುತ್ತಾಗಿತ್ತು. ಹಾಗೆಯೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಎಂಡಿ ಪೊನ್ನುರಾಜ್ ಕೂಡ ವರ್ಗಾವಣೆಯಾಗಿದ್ದಾರೆ.
ಎಲೆಕ್ಟ್ರಿಕ್ ಬಸ್ ಗುತ್ತಿಗೆ ಬದಲು ಖರೀದಿಗೆ ಮುಂದಾದ ಬಿಎಂಟಿಸಿ
ಕಳೆದ 30 ವರ್ಷಗಳಿಂದ ಬಿಎಂಟಿಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ತುಂಬಾ ಪಾರದರ್ಶಕ ಹಾಗೂ ಉತ್ತಮ ಸೇವೆಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈಗ ಈ ಕ್ರಮಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.
ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ
ಫೆಬ್ರವರಿ 28ರಂದು ವೃತ್ತಿಯ ಕಡೆಯ ದಿನವಾಗಿತ್ತು, ನಿವೃತ್ತಿ ಹೊಂದುವ 3 ಗಂಟೆ ಇರುವಾಗ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಬಿಟಂಟಿಸಿ ಬಸ್‌ಗಳ ಅಪಘಾತವನ್ನು ಕಡಿಮೆಯಾಗುವಂತೆ ಮಾಡಿದ್ದ ಎಂಜಿನಿಯರ್ ಇವರಾಗಿದ್ದರು.