Bengaluru Rain: ಮಳೆಯಾಗುತ್ತಿದ್ದಂತೆ ಹೆಚ್ಚಾಯ್ತು ಹಾವುಗಳ ಕಾಟ: ಸಹಾಯಕ್ಕಾಗಿ ಈ ಸಂಖ್ಯೆಗೆ ಕರೆ ಮಾಡಿ
ಬೆಂಗಳೂರು, ಜೂನ್ 03: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಮಳೆಯ ಅವಾಂತರಗಳ ಮಧ್ಯೆಯೇ ಬೆಂಗಳೂರಿನಲ್ಲಿ ಹಾವುಗಳ ಕಾಟ ಶುರುವಾಗಿದೆ. ಮಳೆ ಆರಂಭವಾಗುತ್ತಿದ್ದಂತೆ ಹಾವುಗಳ ಓಡಾಟ ಹೆಚ್ಚುವುದು ಸಾಮಾನ್ಯ ಆದರೆ ಕಳೆದ ಕೆಲವು ದಿನಗಳಿಂದ ಅತಿ ಹೆಚ್ಚು ಹಾವುಗಳು ಜನ ವಾಸ ಸ್ಥಳದಲ್ಲಿ ಕಂಡು ಬರುತ್ತಿದ್ದು, ಜನರು ಕಂಗಾಲಾಗಿದ್ದಾರೆ.
ನಗರದ ಹಲವು ಪ್ರದೇಶದಲ್ಲಿನ ಮನೆಯೊಳಗೆ, ರಸ್ತೆಗಳಲ್ಲಿ ಹಾಗೂ ಮನೆಯ ಅಕ್ಕಪಕ್ಕದಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಜನರು ಭಯಭೀತರಾಗಿದ್ದಾರೆ. ಹೀಗಾಗಿ ಜನರಿಗೆ ಸಹಾಯವಾಗಲು ಹಾವುಗಳು ಸೇರಿದಂತೆ ಇತರ ವಿಷ ಜಂತುಗಳು ಕಂಡು ಬಂದರೆ ಕರೆ ಮಾಡಲು ಬಿಬಿಎಂಪಿ ಸಹಾಯವಾಣಿ ತೆರೆದಿದೆ.

ಬೆಂಗಳೂರಿನಲ್ಲಿ ವಾಸಿಸುತ್ತಿರುವ ನಿವಾಸಿಗಳು ತಮ್ಮ ಮನೆಗಳ ಸುತ್ತಮುತ್ತ ಹಾವುಗಳು ಕಂಡುಬಂದರೆ ಬಿಬಿಎಂಪಿ ವನ್ಯಜೀವಿ ಸಹಾಯವಾಣಿ: 1533, ಕರ್ನಾಟಕ ಅರಣ್ಯ ಇಲಾಖೆ ಸಹಾಯವಾಣಿ: 1926, ಬಿಬಿಎಂಪಿ ವನ್ಯ ಜೀವಿ ಸಂರಕ್ಷಣಾ ಸಹಾಯವಾಣಿ: 9902794711ಕ್ಕೆ ಕರೆ ಮಾಡಿ ತಿಳಿಸಬಹುದಾಗಿದೆ.
ಬಿಬಿಎಂಪಿಯ ವನ್ಯ ಜೀವಿ ಸಂರಕ್ಷಣಾ ತಂಡ ಕಳೆದ ಒಂದೇ ವಾರ 100 ಕರೆಗಳನ್ನು ಸ್ವೀಕರಿಸಿದೆ. ಸರಾಸರಿ ಪ್ರತಿದಿನ 30 ಕರೆಗಳು ಬಂದಿವೆ. ಹೆಚ್ಚಿನ ಕರೆಗಳು ಯಲಹಂಕ ಮತ್ತು ಬೊಮ್ಮನಹಳ್ಳಿ ವಲಯದಿಂದ ಬರುತ್ತಿದ್ದು, ಕೆಲವು ಭಾಗಗಳಲ್ಲಿ ಹಾವುಗಳ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಈಗ ಹಾವುಗಳ ಸಂತಾನೋತ್ಪತ್ತಿ ಕಾಲವಾಗಿದ್ದು ಹೀಗಾಗಿ ಮನೆಗಳು ಸೇರಿದಂತೆ ಬೆಚ್ಚಿಗಿನ ಪ್ರದೇಶಗಳನ್ನು ಅರಸಿ ಬರುತ್ತದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆ ಇರುವಂತೆ ಬಿಬಿಎಂಪಿ ವನ್ಯ ಜೀವಿ ಸಂರಕ್ಷಣಾ ತಂಡ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿ ಧಾರಾಕಾರ ಮಳೆ: ನೆಲಕಚ್ಚಿದ 206 ಮರಗಳು
ಇನ್ನು ಭಾನುವಾರ ಏಕಾಎಕಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 110 ಮಿ.ಮೀ ಮಳೆಯಾಗಿದೆ. ಗಾಳಿ ಮಳೆಗೆ ಬೆಂಗಳೂರು ತತ್ತರಿಸಿದ್ದು, ಬರೋಬ್ಬರಿ 206 ಮರಗಳು ನೆಲಕಚ್ಚಿವೆ. ಚಲಿಸುತ್ತಿದ್ದ ಹಾಗೂ ಮನೆಗಳ ಮುಂದೆ ನಿಲ್ಲಿಸಲಾದ ಕಾರು, ಬೈಕ್ ಮತ್ತು ಆಟೋಗಳ ಮೇಲೆ ಮರ ಬಿದ್ದಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಬೊಮ್ಮನಹಳ್ಳಿಯಲ್ಲಿ14, ದಾಸರಹಳ್ಳಿಯಲ್ಲಿ 7, ಬೆಂಗಳೂರು ಪೂರ್ವದಲ್ಲಿ 22, ಬೆಂಗಳೂರು ದಕ್ಷಿಣದಲ್ಲಿ 99 ಹಾಗೂ ಪಶ್ಚಿಮದಲ್ಲಿ 36 ಸೇರಿದಂತೆ ಒಟ್ಟು 206 ಮರಗಳು ಧರೆಗುರುಳಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications