ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್ ಸಿ ಕಾಲೇಜು ಮುಂಭಾಗ ವಿದ್ಯಾರ್ಥಿಗಳಿಂದ 'ಪಕೋಡ' ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಜನವರಿ 30 : ಪ್ರಧಾನಿ ನರೇಂದ್ರ ಮೋದಿಯವರ ಪಕೋಡ ಮಾರಾಟದ ಹೇಳಿಕೆ ವಿರೋಧಿಸಿ ಬೆಂಗಳೂರಿನ ಆರ್ ಸಿ ಕಾಲೇಜು ಮುಂಭಾಗ ಪಕೋಡ ಮಾರುವ ಮೂಲಕ ಮಂಗಳವಾರ ಎನ್ ಎಸ್ ಯು ಐ ವಿದ್ಯಾರ್ಥಿ ಘಟಕದಿಂದ ವಿನೂತನ ಪ್ರತಿಭಟನೆ ನಡೆಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೆಲವು ದಿನಗಳ ಹಿಂದೆ ಭಾಷಣ ಮಾಡುವ ಸಂದರ್ಭದಲ್ಲಿ ಭಾರತದಲ್ಲಿ ನಾನು ಪ್ರಧಾನಿಯಾದ ಮೇಲೆ ಭಾರತದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ, ಒಂದು ತಳ್ಳುವ ಗಾಡಿ ಇಟ್ಟುಕೊಂಡು ಪಕೋಡ ಅಥವಾ ಇನ್ನಿತರೆ ಪದಾರ್ಥಗಳನ್ನು ಮಾರಾಟ ಮಾಡಿ ದಿನಕ್ಕೆ 200 ರೂ ಗಳಿಸಿದರೆ ಅದೂ ಕೂಡ ಉದ್ಯೋಗವಲ್ಲವೇ ಎಂದು ಹೇಳಿದ್ದರು.

NSUI students sell Pakoda protesting Modi statement

ಬೆಂಗಳೂರು ಬಿಜೆಪಿ ಕಚೇರಿ ಎದುರು 'ಪಕೋಡಾ' ಪ್ರತಿಭಟನೆಬೆಂಗಳೂರು ಬಿಜೆಪಿ ಕಚೇರಿ ಎದುರು 'ಪಕೋಡಾ' ಪ್ರತಿಭಟನೆ

ಅವರ ಹೇಳಿಕೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಆರ್ ಸಿ ಕಾಲೇಜು ಮುಂಭಾಗ ಪಕೋಡವನ್ನು ಮಾರಿ ಮಾರಾಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಕಳೆದ ಶನಿವಾರವಷ್ಟೇ ಮಲ್ಲೇಶ್ವರದ ಬಿಜೆಪಿ ಕಚೇರಿ ಎದುರು ಉದ್ಯೋಗಕ್ಕಾಗಿ ಯುವಜನರು ಸಂಘಟನೆ ಕಾರ್ಯಕರ್ತರು ನರೇಂದ್ರ ಮೋದಿ ಪಕೋಡಾ ಸ್ಟಾಲ್ ತೆರೆದು ಪ್ರತಿಭಟನೆ ನಡೆಸಿದ್ದರು.

NSUI students sell Pakoda protesting Modi statement
English summary
NSUI students marked unique protest by selling Pakoda infront of RC college on Tuesday. Condemning prime minister Narendra modi's statement on Pakoda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X