Get Updates
Get notified of breaking news, exclusive insights, and must-see stories!

ಕೊರೊನಾ ಪ್ರಕರಣ; ಮುಂಬೈಗಿಂತ ಬೆಂಗಳೂರಲ್ಲೇ ಹೆಚ್ಚು!

ಬೆಂಗಳೂರು, ಏಪ್ರಿಲ್ 26; ಹೆಚ್ಚು ಕೋವಿಡ್ ಪ್ರಕರಣಗಳಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಮಹಾರಾಷ್ಟ್ರ ರಾಜಧಾನಿ ಮುಂಬೈ ನಗರವನ್ನು ಹಿಂದಿಕ್ಕಿದೆ. ಭಾನುವಾರ ಒಂದೇ ದಿನ ಬೆಂಗಳೂರಿನಲ್ಲಿ 20733 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ.

ಬೆಂಗಳೂರು ನಗರದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 6,53,656. ಸಕ್ರಿಯ ಪ್ರಕರಣಗಳ ಸಂಖ್ಯೆ 1,80,542. ಭಾನುವಾರ ಮುಂಬೈನಲ್ಲಿ 5,498 ಹೊಸ ಪ್ರಕರಣ ದಾಖಲಾಗಿದ್ದು, 64 ಜನರು ಮೃತಪಟ್ಟಿದ್ದಾರೆ.

ಮುಂಬೈನ ಒಟ್ಟು ಸೋಂಕಿತರ ಸಂಖ್ಯೆ 6,27,644 ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ 75,948 ಆಗಿದೆ. ಬೆಂಗಳೂರು ನಗರದಲ್ಲಿ ಭಾನುವಾರ ಒಂದೇ ದಿನ 77 ಜನರು ಮೃತಪಟ್ಟಿದ್ದಾರೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ.

Now Bengaluru Has More Cases Than Mumbai

ಕಳೆದ ವರ್ಷದ ಕೋವಿಡ್ ಪರಿಸ್ಥಿತಿ ಸಂದರ್ಭದಲ್ಲಿ ಮುಂಬೈನಲ್ಲಿ 12,790 ಜನರು ಮೃತಪಟ್ಟಿದ್ದರು. ಬೆಂಗಳೂರು ನಗರದಲ್ಲಿ 5,800 ಜನರು ಮೃತಪಟ್ಟಿದ್ದರು. ಆದರೆ, ಕೋವಿಡ್ 2ನೇ ಅಲೆ ಬೆಂಗಳೂರು ನಗರದ ಮೇಲೆ ಭಾರೀ ಪರಿಣಾಮವನ್ನು ಬೀರಿದೆ.

ದೇಶದಲ್ಲಿ ಅತಿ ಹೆಚ್ಚು ಪ್ರಕರಣವಿರುವ ನಗರ ದೆಹಲಿ. ಬೆಂಗಳೂರು ನಗರ 2ನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಶನಿವಾರ 1.05 ಲಕ್ಷ ಪರೀಕ್ಷೆಗಳನ್ನು ಮಾಡಲಾಗಿದೆ. ಮುಂಬೈನಲ್ಲಿ 40,298 ಮಾದರಿಗಳ ಪರೀಕ್ಷೆ ನಡೆದಿದೆ.

ಬೆಂಗಳೂರು ನಗರದಲ್ಲಿ ಐಸಿಯು, ವೆಂಟಿಲೇಟರ್ ಕೊರತೆ ಎದುರಾಗಿದೆ. ಕರ್ನಾಟಕ ಸರ್ಕಾರ ಇದನ್ನು ಸರಿಪಡಿಸಲು ಮಲ್ಲೇಶ್ವರದ ಕೆ. ಸಿ. ಜನರಲ್‌, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾಡ್ಯೂಲರ್‌ ಐಸಿಯು ಘಟಕ ಸ್ಥಾಪನೆ ಮಾಡುತ್ತಿದೆ.

"100 ರಿಂದ 150 ಹಾಸಿಗೆಗಳ ಮೇಕ್ ಶಿಫ್ಟ್ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ವೈದ್ಯಕೀಯ ಕಾಲೇಜುಗಳು ಇರುವ ಕಡೆ ಸ್ಥಳಾವಕಾಶವಿದ್ದರೆ ಅಲ್ಲಿಯೂ ನಿರ್ಮಾಣ ಮಾಡಲಾಗುತ್ತದೆ" ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+