ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಖ್ಯಾತ ಸುಲಿಗೆಕೋರ ಶಾಹಿದ್ ಮತ್ತು ಶಾಸ್ತ್ರಿ ಗ್ಯಾಂಗ್ ಬಂಧನ

|
Google Oneindia Kannada News

ಬೆಂಗಳೂರು, ನ. 16: ಬಸ್‍ಗಾಗಿ ಕಾಯುತ್ತಿದ್ದ ಪ್ರಯಾಣಿಕರನ್ನು ಡ್ರಾಪ್ ಕೊಡುವ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದು ಸುಲಿಗೆ ಮಾಡುತ್ತಿದ್ದ ಕುಖ್ಯಾತ ಬಂಧಿಸಲಾಗಿದೆ. ಈ ಬಗ್ಗೆ ಕೊಡಿಗೇಹಳ್ಳಿ ಮತ್ತು ಅಮೃತಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಸಿ.ಕೆ ಬಾಬಾ ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡವು ಆರೋಪಗಳನ್ನು ಪತ್ತೆ ಹಚ್ಚಿ ಬಂಧಿಸಿದೆ.

ಬಂಧಿತರನ್ನು ಶಿವಮೊಗ್ಗ ಮೂಲದ ಆನಂದಪುರದ ಶೇಕ್ ಶಾಹಿದ್ ಅಹಮ್ಮದ್ ಅಲಿಯಾಸ್ ಶಾಹೀದ್ ಬಿನ್ ಶೇಕ್ ನೂರುಲ್ಲಾ(23 ವರ್ಷ) ಹಾಗೂ ಅತೀಖ್(20 ವರ್ಷ) ಎಂದು ಗುರುತಿಸಲಾಗಿದೆ. ಯಲಹಂಕ ಉಪ ವಿಭಾಗದ ಎಸಿಪಿ ಆರ್ ಜಯರಾಂ, ಕೊಡಿಗೇಹಳ್ಳಿ ಪೊಲೀಸ್ ಇನ್ಸ್‍ಪೆಕ್ಟರ್ ರಾಘವೇಂದ್ರ ಬಾಬು, ಪಿಎಸ್‍ಐ ಶ್ರೀನಿವಾಸ್ ಶಿರೂರ್, ಪಿಎಸ್‍ಐ ದೇವಕಿ ಮತ್ತು ಸಿಬ್ಬಂದಿಯವರನ್ನೊಳಗೊಂಡ ತಂಡವು ಈ ಶಾಹಿದ್ ಗ್ಯಾಂಗಿನ ಇಬ್ಬರನ್ನು ಬಂಧಿಸಿದೆ.

ಶೇಕ್ ಶಾಹಿದ್ ಅಹಮ್ಮದ್ ಅಲಿಯಾಸ್ ಶಾಹೀದ್ ಬಿನ್ ಶೇಕ್ ಮೇಲೆ ಈಗಾಗಲೇ 2018ನೇ ಸಾಲಿನಲ್ಲಿ ಕೊಡಿಗೇಹಳ್ಳಿಯಲ್ಲಿ 4 ಮತ್ತು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣದಲ್ಲಿ ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ಮೇಲೆ ಮತ್ತೊಂದು ತಂಡ ಕಟ್ಟಿಕೊಂಡು ಸುಲಿಗೆ ಮಾಡುತ್ತಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಹಿದ್ ಗ್ಯಾಂಗಿನಿಂದ ಏನೇನು ವಶ

ಶಾಹಿದ್ ಗ್ಯಾಂಗಿನಿಂದ ಏನೇನು ವಶ

ಶಾಹಿದ್ ಗ್ಯಾಂಗ್ ದಸ್ತಗಿರಿ ಪಡಿಸಿ 8,40,000 ರೂ ಬೆಲೆ ಬಾಳುವ 30 ಗ್ರಾಂ ತೂಕದ ಚಿನ್ನದ ಒಡವೆಗಳು, ಒಂದು ಐ ಪೋನ್ ಮತ್ತು 2 ಕಾರ್‍ಗಳನ್ನು ವಶಪಡಿಸಿಕೊಂಡಿದ್ದು ಆರೋಪಿತರ ಬಂಧನದಿಂದ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ 3 ಮತ್ತು ಅಮೃತಹಳ್ಳಿ ಪೊಲೀಸ್ ಠಾಣೆಯ 1 ಪ್ರಕರಣ ಸೇರಿದಂತೆ 4 ಸುಲಿಗೆ ಪ್ರಕರಣಗಳು ಪತ್ತೆಯಾಗಿರುತ್ತವೆ.


ಶಾಸ್ತ್ರಿ ಗ್ಯಾಂಗಿನ ಆರೋಪಿತರಿಂದ ಸುಮಾರು 1,50,000/- ರೂ ಬೆಲೆ ಬಾಳುವ 7 ಗ್ರಾಂ ತೂಕದ ಚಿನ್ನದ ಉಂಗುರ ಮತ್ತು ಒಂದು ಮೊಬೈಲ್ ಹಾಗೂ ಹೋಂಡ ಆಕ್ಟಿವಾ ವಶಪಡಿಸಿಕೊಂಡಿದ್ದು ಆರೋಪಿತರ ಬಂಧನದಿಂದ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ 1 ಸುಲಿಗೆ ಪ್ರಕರಣಗಳ ಮತ್ತು ಸಂಜಯನಗರದ 1 ಕೊಲೆ ಯತ್ನ ಪ್ರಕರಣ ಪತ್ತೆಯಾಗಿರುತ್ತದೆ.

 ಬೆಳಗಿನ ಜಾವದ ಸಮಯದ ಪ್ರಯಾಣಿಕರೇ ಟಾರ್ಗೆಟ್

ಬೆಳಗಿನ ಜಾವದ ಸಮಯದ ಪ್ರಯಾಣಿಕರೇ ಟಾರ್ಗೆಟ್

ಬೆಳಗಿನ ಜಾವದ ಸಮಯದ ಪ್ರಯಾಣಿಕರೇ ಟಾರ್ಗೆಟ್
ಬೆಂಗಳೂರು ಏರ್‍ಪೋರ್ಟ್ ರಸ್ತೆಯ ಎಸ್ಟೀಮ್ ಮಾಲ್ ಬಳಿ ಬೆಳಗಿನ ಜಾವದ ಸಮಯದಲ್ಲಿ ಆಂಧ್ರಪ್ರದೇಶದ ಹೈದರಾಬಾದ್, ಕರ್ನೂಲ್, ಅನಂತಪುರ ಇತ್ಯಾದಿ ಊರುಗಳಿಂದ ಬಸ್ಸುಗಳಲ್ಲಿ ಬಂದು ಇಳಿಯುವ ಪ್ರಯಾಣಿಕರನ್ನು ಆರೋಪಿತರು ಟಾರ್ಗೆಟ್ ಮಾಡುತ್ತಿದ್ದರು.

ಮಾರತಹಳ್ಳಿ, ವೈಟ್‍ಫೀಲ್ಡ್ ಕೆ.ಆರ್.ಪುರ ಮುಂತಾದ ಏರಿಯಾಗಳಿಗೆ ಹೋಗಲು ಬಿಎಂಟಿಸಿ ಅಥವಾ ಕ್ಯಾಬ್‍ಗಳಿಗೆ ಕಾಯುವ ಪ್ರಯಾಣಿಕರನ್ನು ಡ್ರಾಪ್ ಮಾಡುವ ನೆಪದಲ್ಲಿ ಕಾರಿನಲ್ಲಿ ಹತ್ತಿಸಿಕೊಂಡು ಹೋಗಿ ದಾರಿ ಮಧ್ಯೆ ಚಾಕುಗಳನ್ನು ತೋರಿಸಿ ಬೆದರಿಸಿ ಅವರಿಂದ ಹಣ, ಒಡವೆ, ಮೊಬೈಲ್ ಮತ್ತು ಎಟಿಎಂ ಕಾರ್ಡ್‍ಗಳು ಹಾಗೂ ಪಾಸ್ ವರ್ಡ್‍ಗಳನ್ನು (ಪಿ ನ್‍ನಂಬರ್) ಪಡೆದುಕೊಂಡು ಎಟಿಎಂ ಹೋಗಿ ಲಕ್ಷಾಂತರ ರೂಪಾಯಿಗಳನ್ನು ಡ್ರಾ ಮಾಡಿಕೊಂಡು ರಾಬರಿ ಮಾಡುತ್ತಿದ್ದರು.

ಶಾಸ್ತ್ರೀ ಗ್ಯಾಂಗಿನಿಂದ ಬಂಧಿತರು

ಶಾಸ್ತ್ರೀ ಗ್ಯಾಂಗಿನಿಂದ ಬಂಧಿತರು

ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರದ ಪಾರ್ಕ್‍ವ್ಯೂ ಅಪಾರ್ಟ್‍ಮೆಂಟ್ ನಿವಾಸಿಯಾದ ಶ್ರೀಪಾದಶಾಸ್ತ್ರೀ ಅಲಿಯಾಸ್ (28 ವರ್ಷ)

ಬೈರತಿಯ ಹನುಮಂತನಗರ ಬಡಾವಣೆ ನಿವಾಸಿ ವಿನ್ಸೆಂಟ್( 27ವರ್ಷ) ಎರಡನೇ ಆರೋಪಿ.

ವಿದ್ಯಾರಣ್ಯಪುರದ ಸಪ್ತಗಿರಿ ಬಡಾವಣೆಯ ನರಸಪ್ಪ ಬಿಲ್ಡಿಂಗ್ ನಿವಾಸಿ ಆಕಾಶ್ ಎನ್ ನಾಯ್ಡು ಅಲಿಯಾಸ್ ಅಜಯ್ ಬಿನ್ ನಾರಾಯಣ್.ಕೆ(23 ವರ್ಷ) ಬಂಧಿತ ಮೂರನೇ ಆರೋಪಿಯಾಗಿದ್ದಾರೆ.

Recommended Video

ಈ ಲಸಿಕೆ Americans ರಿಗೆ ಉಪಯೋಗ ಆಗತ್ತಾ? | Oneindia Kannada
ಆರೋಪಿತರ ಕಳ್ಳತನ ಶೈಲಿ

ಆರೋಪಿತರ ಕಳ್ಳತನ ಶೈಲಿ

ಆರೋಪಿತರು ರಾತ್ರಿ ಸಮಯದಲ್ಲಿ ಆಕ್ಟಿವಾ ಹೋಂಡಾ ಅಥವಾ ಡಿಯೋ ಬೈಕ್‍ಗಳಲ್ಲಿ, ಬೈಕ್‍ನಲ್ಲಿ ಹೋಗುವವ ಸಾರ್ವಜನಿಕರು ಹಿಂಬಾಲಿಸಿ, ಅಡ್ಡಗಟ್ಟಿ ಚಾಕುವಿನಿಂದ ಚುಚ್ಚಿ ಅವರ ಬಳಿ ಇರುವಂತಹ ಬೆಲೆಬಾಳುವ ಚಿನ್ನದ ಒಡವೆಗಳು, ಹಣ ಮತ್ತು ಮೊಬೈಲ್‍ಗಳನ್ನು ಕಿತ್ತುಕೊಂಡು ಹೋಗುವ ಚಾಳಿಯುಳ್ಳವರಾಗಿರುತ್ತಾರೆ.

ವಿನ್ಸೆಂಟ್ ಬಾಬು ಮತ್ತು ಆಕಾಶ್ ಎನ್ ನಾಯ್ಡು ವಿರುದ್ದ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪ್ರಕರಣಗಳಲ್ಲಿ ದಸ್ತಗಿರಿ ಮಾಡಿದ್ದು, ಜೈಲಿನಿಂದ ಬಿಡುಗಡೆಯಾದ ನಂತರ, ತನ್ನ ಸಹಚರರೊಂದಿಗೆ ಹೆದ್ದಾರಿಯಲ್ಲಿ ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

English summary
Bengaluru East Police today nabbed Notorious Shahid and Shastri Gang who involved in many robbery and snatching cased in Kodigehalli and Amritahalli police station limits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X