ಕಾಂಗ್ರೆಸ್ಸಿಗರ ಜತೆ ಕಂಡ ರೌಡಿ ಅಜಂ ಬಂಧನ
ಬೆಂಗಳೂರು, ಏ.9: ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅಭ್ಯರ್ಥಿ ಅವರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಅವರೊಂದಿಗೆ ಕಾಣಿಸಿಕೊಂಡಿದ್ದ ರೌಡಿ ಶೀಟರ್ ಬ್ರಿಗೇಡ್ ಅಜಂನನ್ನು ಶಿವಾಜಿನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಪ್ರಚಾರ ವಾಹನದಲ್ಲಿ ಗೃಹ ಸಚಿವ ಕೆ.ಜೆ.ಜಾರ್ಜ್, ಸಚಿವ ರೋಷನ್ ಬೇಗ್ ಅವರು ಕೂಡಾ ಜತೆಗಿದ್ದರು.
ರೌಡಿ ಶೀಟರ್ ಬ್ರಿಗೇಡ್ ಅಜಂ ಅಲಿಯಾಸ್ ಅಜಮ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ವಾಹನದಲ್ಲಿ ಇರುವುದನ್ನು ಸುವರ್ಣ ಸುದ್ದಿ ವಾಹಿನಿ ಪ್ರಸಾರ ಮಾಡಿತ್ತು. ಆದರೆ, ನಿನ್ನೆ ರಾತ್ರಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಗೃಹ ಸಚಿವ ಕೆಜೆ ಜಾರ್ಜ್ ಅವರು ಪ್ರಚಾರ ವಾಹನದಲ್ಲಿ ಯಾರಿದ್ದರು ಎಂಬುದನ್ನು ನಾವು ಸ್ಕ್ಯಾನ್ ಮಾಡಿ ನೋಡಲಾಗುವುದಿಲ್ಲ. ರೌಡಿ ಶೀಟರ್ ಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬಹುದು ಎಂದಿದ್ದರು.
ಕನ್ನಡ ಸುದ್ದಿ ವಾಹಿನಿಗಳಲ್ಲಿ ಈ ಬಗ್ಗೆ ವರದಿ ಪ್ರಸಾರವಾದ ಮೇಲೆ ಕರ್ನಾಟಕ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಈ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮವಾಗಿ ಅಜಂನನ್ನು ಬುಧವಾರ ಬೆಂಗಳೂರಿನ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಜಂ ಮನೆಯಲ್ಲಿ 1 ರಿವಾಲ್ವರ್, 1 ನಾಡಬಂದೂಕು, ಮಾರಕಾಸ್ತ್ರಗಳು ಲಭ್ಯವಾಗಿದೆ. ಬೆಂಗಳೂರು ಈಶಾನ್ಯ ಪೊಲೀಸರು ದಾಳಿ ನಡೆಸಿ ಕ್ರಮ ಕೈಗೊಂಡಿದ್ದಾರೆ. ಅಜಂನನ್ನು ತಾಲೂಕು ದಂಡಾಧಿಕಾರಿಯ ಮುಂದೆ ಹಾಜರುಪಡಿಸಿದ್ದಾರೆ.

ಅಜಂ ವಿರುದ್ಧ ದರೋಡೆ, ಕೊಲೆ ಯತ್ನ, ಕೊಲೆ ಆರೋಪ ಸೇರಿದಂತೆ ಹಲವು ಪ್ರಕರಣಗಳಿದ್ದು, ಅಜಂನೊಂದಿಗೆ ವಾಹನ ಹಂಚಿಕೊಂಡ ಜಾರ್ಜ್, ರೋಷನ್ ಬೇಗ್ ಹಾಗೂ ರಿಜ್ವಾನ್ ಅರ್ಷದ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿತ್ತು.
ಬ್ರಿಗೇಡ್ ಅಜಂ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ ನಗರದ ನಾನಾ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 1999ರಿಂದಲೇ ರೌಡಿ ಪಟ್ಟಿಯಲ್ಲಿದ್ದಾರೆ. ಬ್ರಿಗೇಡ್ ಅಜಂ ಯಾರು ಎಂಬುದೇ ಗೊತ್ತಿಲ್ಲ. ಪ್ರಚಾರಕ್ಕೆ ಹೋದಾಗ ಸಾಕಷ್ಟು ಜನರಿರುತ್ತಾರೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಹಾಗೂ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹೇಳಿದ್ದರು.
Home Minister of Karnataka campaigns along with absconding rowdy for Congress in Bangalore Central..support congress..support criminals...
— BJP Karnataka (@bjpkarnataka) April 9, 2014 ನಾಗವಾರ ಟ್ಯಾನರಿ ರಸ್ತೆಗಳಲ್ಲಿ ತೆರೆದ ಜೀಪ್ನಲ್ಲಿ ಗೃಹ ಸಚಿವರು, ವಾರ್ತಾ ಸಚಿವರು ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಮತಯಾಚನೆ ಮಾಡುತ್ತಿದ್ದರು. ಇದೇ ವಾಹನದಲ್ಲಿ ರೌಡಿ ಶೀಟರ್ ಅಜಂ ಕೂಡಾ ಇದ್ದ.
ಬ್ರಿಗೇಡ್ ಅಜಂ ಬೆಂಗಳೂರಿನ ಭಾರತೀನಗರ ಪೊಲೀಸ್ ಠಾಣೆಯ ರೌಡಿಶೀಟರ್. ಈತನ ವಿರುದ್ಧ 1996ರಲ್ಲಿ ಕೊಲೆ, ಪ್ರಾಣ ಬೆದರಿಕೆ, 2003ರಲ್ಲಿ ಅಪಹರಣ ಪ್ರಕರಣ, 2004, 2005ರಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ ಆರೋಪ, 2006ರಲ್ಲಿ ಭಾರತಿನಗರದಲ್ಲಿ ಕೊಲೆ ಯತ್ನ, 2009ರಲ್ಲಿ ಬಳ್ಳಾರಿಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪ, 2013ರಲ್ಲಿ ಶಿವಾಜಿನಗರದಲ್ಲಿ ಬ್ರೈಟ್ ಜುವೆಲರ್ಸ್ ಮೇಲೆ ದಾಳಿ ಸೇರಿದಂತೆ 15 ಕ್ಕೂ ಹೆಚ್ಚು ಕೇಸ್ಗಳು ಮೇಲಿವೆ.


Click it and Unblock the Notifications
